ಸಮಾಜದ ಬಡಮಕ್ಕಳ ಭವಿಷ್ಯಕ್ಕಾಗಿ ಹೋರಾಟ: ಶ್ರೀಗಳು
ಗುರ್ಲಾಪೂರ 09: ನಮ್ಮ ಹೋರಾಟ ಯಾವ ಅಧಿಕಾರ, ಆಡಂಬರ ಸ್ವ-ಪ್ರತಿಷ್ಠೆಗಾಗಿ ಅಲ್ಲ ಲಿಂಗಾಯತ ಸಮಾಜದಲ್ಲಿರುವ ಕಡುಬಡವರ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ನಮ್ಮ ಹೋರಾಟ ಎಂದು ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮಿಜಿ ಹೇಳಿದರು.
ಅವರು ಗ್ರಾಮದ (ಅಡಿವೆಪ್ಪನ ದೇವಸ್ಥಾನ) ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡ ಶರಣು-ಶರಣಾರ್ಥಿ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡುತ್ತಾ ರಾಜ್ಯದಲ್ಲಿ ಸುಮಾರು 3 ಕೋಟಿ ಜನಸಂಖ್ಯೆ ಹೊಂದಿರುವ ಲಿಂಗಾಯತ ಸಮಾಜದಲ್ಲಿ ಅನೇಕ ಕುಟುಂಬಗಳು ಬಡತನದಲ್ಲಿವೆ ಇವರಿಗೆ ಆರ್ಥಿಕ ನೆರವು ಅವಶ್ಯಕವಾಗಿದೆ ಅದಕ್ಕಾಗಿ ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಅನೇಕ ವರ್ಷಗಳಿಂದ ಸರಕಾರವನ್ನು ಒತ್ತಾಯಿಸುತ್ತಾ ಮನವಿ ಕೊಡುತ್ತಾ ಬಂದಿದ್ದೇವೆ. ಪ್ರಯೋಜನವಾಗಿಲ್ಲ ಅದಕ್ಕಾಗಿ ಹೋರಾಟವನ್ನು ತೀವ್ರಗೊಳಿಸಲಾಯಿತು.
ಸ್ವಾಮಿಜಿಯವರನ್ನು ಗ್ರಾಮದಿಂದ ಬಸವ ಕಲ್ಯಾಣ ಮಂಟಪದವರಿಗೆ ಸಕಲವಾದ್ಯವೃಂದ ಹಾಗು ಮುತೈದೆಯರು ಆರತಿಯೊಂದಿಗೆ ಗ್ರಾಮದ ಸ್ವಾಮಿಜಿಗಳು ಯುವಕರು ಹಿರಿಯರು ಬವ್ಯ ಮೆರವಣಿಗೆ ಮುಕಾಂತರ ಕರೆತಂದು ಆದರವಾಗಿ ಸ್ವಾಗತಿಸಿಕೊಂಡರು. ಸನ್ಮಾನಿಸಿದರು.
ಬಸನಗೌಡ ಪಾಟೀಲ, ಎಸ್.ಬಿ. ಪಾಟೀಲ ನಾಗರಾಳ, ಅಂಬರೀಷ ನಾಗೂರ, ಎಮ್.ಜಿ. ಮುಗಳಖೋಡ, ನಿಂಗಪ್ಪ ಫಿರೋಜಿ,ಬಿಮಶಿ ಗಡಾದ, ಗಿರೀಶ ಢವಳೇಶ್ವರ ಎಸ್.ಎಮ್. ಇಟ್ನಾಳ, ವಿ.ಬಿ. ಮುಗಳಖೋಡ, ಕೆ.ಆರ್. ದೇವರಮನಿ, ಎಮ್ ಎಸ್ ಮುಗಳಖೋಡ, ಶ್ರೀಶೈಲ ಕೌಜಲಗಿ, ಶ್ರೀಶೈಲ ಮುಗಳಖೋಡ,ಭೀಮಪ್ಪ ದೇವರಮನಿ, ಶ್ರೀಶೈಲ ಮುತ್ತಪ್ಪಗೋಳ, ಬಸಪ್ಪ ಮುಗಳಖೋಡ, ಸಿದ್ದಪ್ಪ ಮುಗಳೋಡ, ಶಿವಪ್ಪ ರಂಗಾಪೂರ, ಶಿವನಪ್ಪ ಗೌರಾಣಿ, ಸಿದ್ದಪ್ಪ ಸುಳ್ಳನ್ನವರ ಮತ್ತು ಗ್ರಾಮದ ಸ್ವಾಮಿಜಿಗಳು ಗುರ್ಲಾಪೂರ ಗ್ರಾಮದ ಮುಖಂಡರು ಯುವಕರು ಪಾಲ್ಗೊಂಡಿದ್ದರು.
ಬಿ.ಸಿ.ಮುಗಳಖೋಡ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಹಂಚಿಕೊಂಡರು, ಯುವ ದುರೀಣ ಮಹಾದೇವ ಕುಲಗೋಡ. ನಿರೂಪಿಸಿ ವಂದಿಸಿದರು.