ರಾಣೆಬೆನ್ನೂರ

ಗೋಲ್ಡನ್ ಹ್ಯಾಚರೀಸ್ ಕಂಪನಿಯವಿರುದ್ದ ಹೋರಾಟ

ಗೋಲ್ಡನ್ ಹ್ಯಾಚರೀಸ್ ಕಂಪನಿಯವಿರುದ್ದ ಹೋರಾಟ

ರಾಣಿಬೆನ್ನೂರ:17 ತಾಲ್ಲೂಕಿನ ಮುದೇನೂರ ಗ್ರಾಮದ ಬಳಿ ಇರುವ ಗೋಲ್ಡನ್ ಹ್ಯಾಚರೀಸ್ ಕಂಪನಿಯ ಕಲುಷಿತ ನೀರನ್ನು ನದಿಗೆ ಹರಿಸಿದ ಬಗ್ಗೆ ಅನೇಕ ಬಾರಿ ಹೋರಾಟ ಮಾಡಿದರೂ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದ ಸಾರ್ವಜನಿಕರಿಗೆ ಹಾಗೂ ಜಲಚರ ಪ್ರಾಣಿಗಳಿಗೆ ಜೀವ ಹಾನಿ ಸಂಭವಿಸಿದೆ. ನದಿಯ ನೀರು ಸಂಪೂರ್ಣ ಕಲುಷಿತವಾಗುತ್ತದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶನಿವಾರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ  ಶಂಕರ ಹರಿಹರ ಮನವಿ ಸಲ್ಲಿಸಿದರು.

ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಕಂಪನಿ ಎಂದಿನಂತೆ ತಮ್ಮ ಕಾರ್ಯಚಟುವಟಿಕೆ ಆರಂಭಿಸಿದ್ದು, ಇದನ್ನು ವಿರೋಧಿಸಿ ತಾಲ್ಲೂಕು ಆಡಳಿತದ ಮುಂದೆ ರೈತ ಸಂಘಟನೆಯ ಮೂಲಕ  ಹೋರಾಟಕ್ಕೆ ಇಳಿಯಲಾಗುವುದು ಎಂದು ಎಚ್ಚರಿಸಿದರು. 

ತಿಪ್ಪೇಶ ಪೂಜಾರ, ಪ್ರಕಾಶ ಶಿರಗೇರಿ, ಕರಬಸಪ್ಪ ಜಾನಪ್ಪನವರ, ಅಶೋಕ ಜಿ, ರಮೇಶ ಟಿ ಭಾಗವಹಿಸಿದ್ದರು. 


ಸುದ್ದಿ ಓದಿ