ಪೋಲಿಯೋ ಮುಕ್ತ ಮಾಡಲು ಶ್ರಮಿಸಿ: ಡಾ.ಹನುಮಂತಪ್ಪ
ಶಿಗ್ಗಾವಿ 31: ಎಲ್ಲ ತಂದೆ ತಾಯಿಂದಿರು ತಮ್ಮ ಮಕ್ಕಳಿಗೆ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಪೋಲಿಯೋ ಹನಿ ಹಾಕಿಸಿ ದೇಶವನ್ನು ಪೋಲಿಯೋ ಮುಕ್ತ ದೇಶವನ್ನಾಗಿ ಮಾಡೋಣ ಅಲ್ಲದೆ, ಮಕ್ಕಳು ಅಂಗವೈಕಲತೆ ಹೊಂದುವುದನ್ನು ತಡೆದು ತಂದೆ ತಾಯಿಂದಿರ ಜವ್ದಾಬಾರಿ ಮರೆಯೋಣ ಎಂದು ಆಡಳಿತ ವೈದ್ಯಾಧಿಕಾರಿ ಡಾ.ಹನುಮಂತಪ್ಪ ಹೇಳಿದರು.
ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ತಾಲೂಕು ದಂಡಾಧಿಕಾರಿ ಪ್ರಕಾಶ ಕುದರಿ ಮಕ್ಕಳಿಗೆ ಪೋಲಿಯೋ ಹನಿ ಹಾಕುವುದರ ಮೂಲಕ ಪಲï್ಸ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಹನುಮಂತಪ್ಪ ಕುಡಚಿ ಮಾತನಾಡಿ, ತಾಲೂಕಿನಲ್ಲಿ 118 ಪೋಲಿಯೋ ಲಸಿಕಾ ಕೇಂದ್ರಗಳಿದ್ದು, ಗ್ರಾಮೀಣ 100, ಪಟ್ಟಣದಲ್ಲಿ 18 ಕೇಂದ್ರಗಳಲ್ಲಿ ಒಟ್ಟು 212 ಆಶಾಕಾರ್ಯಕರ್ತೆಯರು, 31 ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, 10 ಕಿರಿಯ ಪುರುಷ ಆರೋಗ್ಯ ಸಹಾಯಕರು ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದು, 19440 ಮಕ್ಕಳಿಗೆ ಶೇ.100ರಷ್ಟು ಲಸಿಕೆ ಹಾಕುವ ಗುರಿ ಹೊಂದಿದ್ದೇವೆ ಎಂದರು.
ಪುರಸಭೆ ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ಪುರಸಭೆ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ, ಹಿರಿಯ ಆರೋಗ್ಯ ನಿರೀಕ್ಷಕ ಶ್ರೀಕಾಂತ ಸರ್ಜಾಪೂರ, ಮಲ್ಲಿಕಾರ್ಜುನ, ಬಸವರಾಜ ಕಮತರ, ನಿಲ್ಲಮ್ಮ ಹಿರೇಮಠ, ಸುಭಾಸ ತಳವಾರ, ಸುರೇಶ ಪಾಟೀಲ, ಸೌಭಾಗ್ಯ ದೊಡ್ಡಮನಿ, ಶಿವಯೋಗಿ ದೌತಾಲಿ, ಪಕ್ಕಿರೇಶ ಹಿರೇಮಠ, ಅಶೋಕ ಅಮಾತ್ಯಣ್ಣವರ ಸೇರಿದಂತೆ ಕಂದಾಯ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.