ಗುಳೇದಗುಡ್ಡ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮ: ಶಿಲ್ಪಾ
ಗುಳೇದಗುಡ್ಡ 12: ಎಲ್ಲರ ಸಹಕಾರದಿಂದ ನಾನು ಪುರಸಭೆ ಅಧ್ಯಕ್ಷಳಾಗಿ ಆಯ್ಕೆಯಾಗಿದ್ದೇನೆ. ಹಿರಿಯರ ಮಾರ್ಗದರ್ಶನ ಹಾಗೂ ಸಲಹೆಯೊಂದಿಗೆ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮವಹಿಸುತ್ತೇನೆ ಎಂದು ಪುರಸಭೆ ನೂತನ ಅಧ್ಯಕ್ಷೆ ಶಿಲ್ಪಾ ಹಳ್ಳಿ ಹೇಳಿದರು.
ಅವರು ಬುಧುವಾರ ಇಲ್ಲಿನ ನೀಲಕಂಠೇಶ್ವರ ಮಠದಲ್ಲಿ ಕುರುಹಿನಶೆಟ್ಟಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ನೂತನ ಪುರಸಭೆ ಅಧ್ಯಕ್ಷೆ ಶಿಲ್ಪಾ ಹಳ್ಳಿ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ತಲೆಬಾಗುತ್ತೇನೆ. ನಮ್ಮ ಸಮಾಜದ ಮಹಿಳೆಯರು ಶೈಕ್ಷಣಿಕವಾಗಿ ಮುಂದೆರಬೇಕು. ಅಷ್ಟೇ ಅಲ್ಲದೇ ರಾಜಕೀಯವಾಗಿಯು ಮುಂದೆಬರಬೇಕು ಎಂದರು.
ಮಾಜಿ ಶಾಸಕ ಮಲ್ಲಿಕಾರ್ಜುನ ಬನ್ನಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಸಮಾಜದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಬೇಕು. ಸಮಾಜದ ಜನರು ಸಂಘಟಿತರಾಗಬೇಕು. ಶೈಕ್ಷಣಿಕ, ಆರ್ಥಿಕವಾಗಿ ಮಂದೆ ಬರಬೇಕು ಎಂದು ಹೇಳಿದರು. ನಿವೃತ್ತ ಪ್ರಾಧ್ಯಾಪಕ ಮಹಾದೇವ ನೀಲಕಂಠಮಠ ಮಾತನಾಡಿದರು.
ಮಹೇಶ್ವರಸ್ವಾಮಿಗಳು ನೀಲಕಂಠಮಠ ಅವರು ಸಾನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ದೊಡ್ಡಮರಪ್ಪ ಬನ್ನಿ, ಪುಂಡಲೀಕಪ್ಪ ಮಾನುಟಗಿ, ಪರಪ್ಪ ಕುಮಚಗಿಗೌಡ್ರ, ಶಂಕ್ರಪ್ಪ ನೀಲನೂರ, ನಿಂಗಪ್ಪ ಯಂಡಿಗೇರಿ, ಚನಬಸಪ್ಪ ಮುಳಗುಂದ, ಮಲ್ಲಿಕಾರ್ಜುನ ಕಲಕೇರಿ, ಈರಣ್ಣ ಹಳ್ಳಿ, ಸುಭಾಸ ಬನ್ನಿ. ಅಶೋಕ ದಿಂಡಿ, ಗಿಡ್ಡಪ್ಪ ಕಲಕೇರಿ, ಶಂಕ್ರಪ್ಪ ಬೀಳಗಿ, ಬಿ.ಎನ್.ವಜ್ರಬಂಡಿ, ಮಲ್ಲಿಕಾರ್ಜುನ ಸೂಡಿ, ರಮೇಶ ಅಗಸಿಮನಿ, ಪುರಸಭೆ ಸದಸ್ಯ ಅಂಬರಿಶ ಕವಡಿಮಟ್ಟಿ, ಸಿದ್ದಪ್ಪ ಹನಮಸಾಗರ, ಬಸವರಾಜ ಹುನಗುಂದ, ವಿಜಯಕುಮಾರ ಬೇಟಗೇರಿಗೌಡ್ರ, ಸಂಗಣ್ಣ ಹುನಗುಂದ, ಗಂಗಾಧರ ಯಲಬುರ್ಗಿ, ಮಲ್ಲಿಕಾರ್ಜುನ ಧೋತರದ ಹಾಗೂ ಇತರರು ಇದ್ದರು.