ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ : ಸಿಪಿಐ ಮೌನೇಶ್ವರ ಮಾಲಿಪಾಟೀಲ ಕರೆ: ಗಣೇಶೋತ್ಸವ ನಿಮಿತ್ತ ಶಾಂತಿಪಾಲನಾ ಸಭೆ
ಲೋಕದರ್ಶನ ವರದಿ
ಯರಗಟ್ಟಿ 28: ಪಟ್ಟಣದ ಪೊಲೀಸ್ ಉಪಠಾಣೆ ವ್ಯಾಪ್ತಿಯಲ್ಲಿ ಪಟ್ಟಣದ ಗಣೇಶ ಮಂಡಳದ ಸದಸ್ಯರನ್ನೊಳಗೊಂಡ ಶಾಂತಿ ಪಾಲನಾ ಸಭೆ ಜರುಗಿತು.
ಸರ್ಕಾರದ ನಿಯಮಗಳನ್ನು ಓದಿ ಹೇಳಿದ ನಂತರ. ಪ್ರತಿ ಗಣೇಶ ಮಂಡಳಿಯವರು, ಸಾರ್ವಜನಿಕರು ಪೋಲಿಸ್ ಇಲಾಖೆಯವರು ನೀಡಿರುವ ಆದೇಶಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೇ ಶಾಂತಿ ಸುವ್ಯವಸ್ಥೆ ಕಾಪಾಡುವ ಮೂಲಕ ಸಂತೋಷದಿಂದ ಸಂಭ್ರಮದಿಂದ ಗಣೇಶ ಹಬ್ಬವನ್ನು ಆಚರಿಸುವಂತೆ ಸಿಪಿಐ ಮೌನೇಶ್ವರ ಮಾಲಿಪಾಟೀಲ ಕರೆ ನೀಡಿದರು.
ಅವರು ಯರಗಟ್ಟಿ ಪೊಲೀಸ್ ಉಪಠಾಣೆ ವ್ಯಾಪ್ತಿಯಲ್ಲಿ ಬರುವ ಪಟ್ಟಣ ಹಾಗೂ
ಗ್ರಾಮಗಳ ಪ್ರಮುಖರನ್ನು ಸೇರಿಸಿ ಗಣೇಶೋತ್ಸವ ಶಾಂತಿಪಾಲನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ನಂತರ ಸಿಪಿಐ ಮೌನೇಶ್ವರ ಮಾಲಿಪಾಟೀಲ ಮಾತನಾಡಿ ಗಣೇಶ ಮಂಟಪಗಳನ್ನು ಸ್ಥಾಪಿಸುವ ಮುಂಚೆ ಮಂಡಳಿಯವರು ಕಡ್ಡಾಯವಾಗಿ ಪಟ್ಟಣ ಪಂಚಾಯತಿ, ಅನುಮತಿ ಪತ್ರ, ಹೆಸ್ಕಾಂ ಮತ್ತು ಅಗ್ನಿಶಾಮಕ ಕಚೇರಿಯಿಂದ ಅನುಮತಿ ಪತ್ರ, ಧ್ವನಿವರ್ಧಕಗಳನ್ನು ಅಳವಡಿಸಲು
ಪೋಲಿಸ್ ಠಾಣೆ ವತಿಯಿಂದ ಅನುಮತಿ ಪತ್ರಗಳನ್ನು ಪಡೆದುಕೊಳ್ಳುವಂತೆ ಸೂಚನೆ ನೀಡಿದರು.
ಡಾಲ್ಭಿ ಹಚ್ಚಲು ಅನುಮತಿ ನೀಡಲಾಗುವುದಿಲ್ಲವೆಂದು ಹೇಳಿದ ಅವರು ಧ್ವನಿವರ್ಧಕಗಳನ್ನು ಮುಂಜಾನೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಹಚ್ಚಲು ಅನುಮತಿ ನೀಡಲಾಗಿದ್ದು, ಗಣೇಶ ವಿಸರ್ಜನೆಯು ರಾತ್ರಿ 10 ಗಂಟೆ ಒಳಗಾಗಿ ಮುಕ್ತಾಯಗೊಳಿಸುವಂತೆ ಹೇಳಿದರು.
ಗಣೇಶ ಮಂಟಪಗಳನ್ನು ನಿರ್ಮಿಸುವಾಗ ಸಾರ್ವಜನಿಕರಿಗೆ ಯಾವುದೇ ರೀತಿಯಿಂದ ತೊಂದರೆಯಾಗದಂತೆ ರಸ್ತೆ ಬದಿಗೆ ಮಂಟಪಗಳನ್ನು ನಿರ್ಮಿಸುವಂತೆ ಹಾಗೂ ಪೋಲಿಸ್ ಠಾಣೆಗೆ ನಿಮ್ಮ ಕಾರ್ಯಕ್ರಮಗಳ ಪಟ್ಟಿಗಳನ್ನು ವಿವರವಾಗಿ ನೀಡುವಂತೆ ಕರೆ ನೀಡಿದರು.
ಒಟ್ಟಿನಲ್ಲಿ ತಾವೆಲ್ಲರೂ ಸೇರಿ ಸರ್ಕಾರ ನೀಡಿರುವ ಆದೇಶಗಳನ್ನು ಪಾಲಿಸುತ್ತಾ ಸೌಹಾರ್ದತೆಯಿಂದ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೇ ಶಾಂತಿ ಸುವ್ಯವಸ್ಥೆಯಿಂದ ಗಣೇಶ ಹಬ್ಬವನ್ನು ಆಚರಿಸೋಣವೆಂದು ಹೇಳಿದರು.
ಈ ಸಮಯದಲ್ಲಿ ಪಿಎ ಸ್ಐ ಬಸನಗೌಡ ನೇರ್ಲಿ, ಎಎ ಸ್ಐ ವಾಯ್. ಎಂ. ಕಡಕೋಳ, ಎಂ. ಬಿ. ಸಣ್ಣನಾಯ್ಕ, ವಿ. ಡಿ. ಸಕ್ರಿ, ಎಸ್. ಬಿ. ದೊಡ್ಡವಾಡ, ಸಾರ್ವಜನಿಕ ಗಣೇಶೋತ್ಸವ ಮಂಡಳಿಯ ಮುಖಂಡರಾದ ಸಂತೋಷ ಹಾದಿಮನಿ, ಮುತ್ತು ದೇವರಡ್ಡಿ, ಪ್ರಕಾಶ ಚನ್ನಮೇತ್ರಿ, ಗೋವಿಂದ ದೇವರಡ್ಡಿ, ಪಿಂಟು ಮಠಪತಿ, ವಿನಾಯಕ ಇಟ್ನಾಳ ಗದಿಗೆಪ್ಪ ಗಲಬಿ, ಶ್ರೀಕಾಂತ ಸುಭೆದಾರ, ಸಾಗರ ಹೊಸಕೋಟಿ, ಪ್ರವೀಣ ಪಟ್ಟೇದ, ಸೋಮು ಪಟ್ಟೇದ ಸೇರಿದಂತೆ ಅನೇಕ ಗಜಾನನ ಮಂಡಳಿಯ ಪ್ರಮುಖರು ಉಪಸ್ಥಿತರಿದ್ದರು.