ಕಾಗವಾಡ

ಕೊರೋನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿ: ಕಾಗೆ ಕರೆ

ಕೊರೋನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿ: ಕಾಗೆ ಕರೆ

ಕಾಗವಾಡ 08: ದೇಶದಲ್ಲಿ ಕೊರೋನಾ ಮೂರನೇ ಅಲೆ ಬರುವ ಸಾಧ್ಯತೆ ಇದ್ದಿದ್ದರಿಂದ ಸರ್ಕಾರದ ಆದೇಶದ ಮೇರೆಗೆ ಪ್ರತಿಯೊಬ್ಬರು ಕೊರೋನಾ ನಿಯಮಗಳು ಕಟ್ಟುನಿಟ್ಟಿನಿಂದ ಪಾಲನೆ ಮಾಡಬೇಕು. ಇದಕ್ಕಾಗಿ ಎಲ್ಲರೂ ಪ್ರಯತ್ನಿಸಿ ಲಸಿಕೆಗಳನ್ನು ಪ್ರತಿಯೊಬ್ಬರು ತೆಗೆದುಕೊಳ್ಳಬೇಕೆಂದು ಅಥಣಿ ಮತ್ತು ಕಾಗವಾಡ ತಾಲೂಕಿನ ವೈದ್ಯಾಧಿಕಾರಿ ಡಾ. ಬಸಗೌಡ ಕಾಗೆ ಕರೆ ನೀಡಿದ್ದಾರೆ. 

ಬುದವಾರ ದಿ. 8ರಂದು ಉಗಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವರದಿಗಾರರೊಂದಿಗೆ ಮಾತನಾಡುವಾಗ ಡಾಕ್ಟರ್ ಬಸಗೌಡ ಕಾಗೆ ವಿವರವಾದ ಮಾಹಿತಿ ನೀಡಿದರು. 

ತಾಲೂಕಿನಲ್ಲಿ ಪ್ರಥಮ ಹಂತದ ಲಸಿಕೆ 3,90,440 ಜನರು ತಗೆದುಕೊಳ್ಳಬೇಕಾಗಿತ್ತು. ಅದರಲ್ಲಿ 3,80,568 ಅಂದರೆ ಶೇಕಡ 98ರಷ್ಟು ತೆಗೆದುಕೊಂಡಿದ್ದಾರೆ. ಮತ್ತು ಎರಡನೇ ಲಸಿಕೆ 2,69,349 ಶೇಕಡ 78ರಷ್ಟು ಜನರು ತೆಗೆದುಕೊಂಡಿದ್ದಾರೆ. ಇನ್ನುಳಿದ 40ಸಾವಿರ ಜನರು ತುರಂತವಾಗಿ ಲಸಿಕೆ ತೆಗೆದುಕೊಳ್ಳಬೇಕು ಎಂದರು. 

ಓಮಿಕ್ರೋನ್ ಕೋರೋನಾ ದೇಶದಲ್ಲಿ ಹಬ್ಬುವ ಸಾಧ್ಯತೆ ಇದ್ದು ಇದನ್ನು ತಡೆಗಟ್ಟುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ. ಎಲ್ಲರೂ ಲಸಿಕೆಗಳು ತೆಗೆದುಕೊಂಡು ಮಾಸ್ಕ ಧರಿಸುವುದು, ಸಮಾನಾಂತರ ಕಾಯ್ದುಕೊಳ್ಳದು, ಪ್ರತಿಯೊಬ್ಬರು ಈ ಚಳಿಗಾಲದಲ್ಲಿ ನೀರು ಕಾಯಿಸಿ ಆರಿಸಿ ಸೇವಿಸಬೇಕು. ಸೀತ ಇನತಿರ ಕಾಯಲೆಗಳು ಬಾರದಂತ್ತೆ ನಿಗಾವಹಿಸುವ ತಮ್ಮ ಜವಾಬ್ದಾರಿ ತಾವೇ ತೆಗೆದುಕೊಳ್ಳಬೇಕೆಂದು ಹೇಳಿದರು. 

ಅಕ್ಷಯನ ಪೂರೈಕೆ ಬಗ್ಗೆ ಡಾ. ಬಸಗೌಡ ಕಾಗೆ ಮಾಹಿತಿ ನೀಡುವಾಗ ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಕ್ಸಿಜನ ವ್ಯವಸ್ಥೆ ಇದೆ. ಆದರೆ ಕಾಗವಾಡ ತಾಲೂಕಿನಲ್ಲಿ ಆಕ್ಸಿಜನ್ ವ್ಯವಸ್ಥೆ ಇಲ್ಲ ಆಸ್ಪತ್ರೆಗಳಿಗೆ ನೇರವಾಗಿ ಸಿಲೆಂಡರ ಪೂರೈಸಿ ಉಪಚಾರ ಮಾಡುವ ವ್ಯವಸ್ಥೆ ಹೊಂದಿದೆ ಎಂದು ಹೇಳಿದರು. 

ಉಗಾರದಲ್ಲಿ ಇಬ್ಬರು ಸೋಂಕಿತರು. 

ಉಗಾರ್ ಖುರ್ದ ಪಟ್ಟಣದಲ್ಲಿ ಇಬ್ಬರು ಕೊರೋನಾ ಸೋಂಕಿತರು ದೃಢ ಪಟ್ಟಿದ್ದಾರೆ ಕಳೆದ ಕೆಲ ತಿಂಗಳುಗಳವರೆಗೆ ಯಾರು ಸೋಂಕಿತರು ಪತ್ತೆಯಾಗಿಲೃ ಆದರೆ ಮತ್ತೆ ಕೊರೋನಾ ತಲೆಎತ್ತುತ್ತಿದ್ದ ರಿಂದ ಪ್ರತಿಯೊಬ್ಬರು ಮಾಸ್ಕ ಧರಿಸಿ ಸಮಾನಂತರ ಕಾಯ್ದುಕೊಂಡು, ಕೋರೋನಾ ಬಗ್ಗೆ ಕಾಳಜಿವಹಿಸುವು  ಎಲ್ಲರ ಜವಾಬ್ದಾರಿವಾಗಿದೆ ಎಂದು ಹೇಳಿದರು. 

ಗರ್ಭಿಣಿಯರ ರಕ್ತ ತಪಾಸಣೆ ಕೇಂದ್ರ. 

ಉಗಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯರು ರಕ್ತ ತಪಾಸಣೆ ಸಿ.ಬಿ.ಸಿ ಯಂತ್ರದ ವ್ಯವಸ್ಥೆ ಮಾಡಲಾಗಿದೆ ಇಲ್ಲಿಗೆ ಏಕಕಾಲಕ್ಕೆ ರಕ್ತದ ಎಲ್ಲ ಮಾಹಿತಿ ಲಭ್ಯವಾಗುವ ಯಂತ್ರ ಉಗಾರ ಕೇಂದ್ರದಲ್ಲಿ ನೀಡಲಾಗಿದ್ದು ಇದೆ ರೀತಿ ಕಾಗವಾಡ, ಶಿರಗುಪಿ, ಐನಾಪುರ, ಮೋಳೆ, ಆರೋಗ್ಯ ಕೇಂದರಗಳಲ್ಲಿ ಲಭ್ಯೆವಿದು, ಈ ಪರಿಸರದ ಗರ್ಭಿಣಿ ಸ್ತ್ರೀಯರು ಇದರ ಲಾಭ ತೆಗೆದುಕೊಳ್ಳಬೇಕೆಂದು ಡಾಕ್ಟರ್ ಬಸಗೌಡ ಕಾಗೆ ಕರೆ ನೀಡಿದರು. ಅವರೊಂದಿಗೆ ಉಗಾರ ಕೇಂದ್ರದ ಆರೋಗ್ಯಾಧಿಕಾರಿ ಡಾಕ್ಟರ್ ಕಿರಣ್‌ಕುಮಾರ್ ಪಾಟೀಲ್, ಈಶ್ವರ ಕುಂಬಾರ, ಅಶೋಕ ಕುಂಬಾರ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ