ಅಥಣಿ

ಶಿಕ್ಷಕರು ಬೇಜವಾಬ್ದಾರಿಯಿಂದ ನಡೆದುಕೊಂಡಲ್ಲಿ ಕಠಿಣ ಕ್ರಮ

ಶಿಕ್ಷಕರು ಬೇಜವಾಬ್ದಾರಿಯಿಂದ ನಡೆದುಕೊಂಡಲ್ಲಿ ಕಠಿಣ ಕ್ರಮ

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಉಪನಿದರ್ೇಶಕ ಎಮ್.ಎಲ್. ಹಂಚಾಟೆ ಖಡಕ್ ಎಚ್ಚರಿಕೆ

 ಸಂಬರಗಿ 10: ಗಡಿಭಾಗದ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸರಕಾರ ನಿಗದಿಪಡಿಸಿರುವ ಅವಧಿಯಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸಬೇಕು, ಬೇಜವಾಬ್ದಾರಿ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಗಡಿಭಾಗದಲ್ಲಿ ಸ್ಥಗಿತಗೊಂಡಿರುವ ಕನ್ನಡ ಶಾಲೆಗಳು ಮರಳಿ ಪ್ರಾರಂಭಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಆದೇಶ ಮಾಡಲಾಗಿದೆ ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಉಪನಿದರ್ೇಶಕರು ಎಮ್.ಎಲ್. ಹಂಚಾಟೆ ಹೇಳಿದರು. 

ಗಡಿಭಾಗದ ಸಂಬರಗಿ, ಜಂಬಗಿ, ಅರಳಿಹಟ್ಟಿ, ಶಿರೂರ, ಖಿಳೇಗಾಂವ ಗ್ರಾಮದ ವಿವಿಧ ಪ್ರಾಥಮಿಕ ಶಾಲೆಗಳಿಗೆ ಅಕಸ್ಮಿತವಾಗಿ ಭೇಟ್ಟಿ ನೀಡಿ ಆದೇಶ ಮಾಡಿದರು. ಪ್ರಾಥಮಿಕ ಶಾಲೆಯ ಶಿಥಿಲಗೊಂಡಿರುವ ಕೊಠಡಿಗಳು, ಶಾಲೆಯ ಸ್ವಚ್ಛತೆ, ಮಕ್ಕಳ ಸುರಕ್ಷತೆ, ಅಡುಗೆ ಕೋಣೆ, ಆಟದ ಮೈದಾನ, ಪರಿಶೀಲಿಸಿದರು. ಶಿಕ್ಷಕರು ಹಾಗೂ ಪ್ರಧಾನ ಗುರುಗಳಿಗೆ ಎಚ್ಚರಿಕೆ ನೀಡಿದರು. ಪಾಲಕರು ತಮ್ಮ ಮಕ್ಕಳು ಸರಕಾರಿ ಶಾಲೆಗಳಲ್ಲಿ ಪ್ರವೇಶ ಪಡೆಯಬೇಕು. ಗಡಿಭಾಗದ ಶಾಲೆಯಲ್ಲಿ ಕೆಲವು ಶಿಕ್ಷಕರು ನಿಗದಿತ ಅವಧಿಯಲ್ಲಿ ಬರುತ್ತಿಲ್ಲಾ ಎಂದು ದೂರುಗಳು ಬರುತ್ತಿವೆ. ಶಾಲೆಯಲ್ಲಿ ಪ್ರಧಾನ ಗುರುಗಳು ಅಥವಾ ಮೇಲಾಧಿಕಾರಿಗಳ ಅನುಮತಿ ಪಡೆದುಕೊಂಡು ರಜೆಯ ಮೇಲೆ ಹೋಗಬಹುದು. ನಾನು ಅನಿರಿಕ್ಷಿತವಾಗಿ ಶಾಲೆಗಳಿಗೆ ಭೇಟ್ಟಿ ನೀಡಿದಾಗ ಯಾವುದೇ ಲೋಪದೋಷ ಕಂಡುಬಂದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಸಂಬರಗಿ ವಲಯದ ಶಿಕ್ಷಣ ಸಂಯೋಜಕ  ಜಿ.ಎ. ಕೋಷ್ಠಿ, ಉಪಸ್ಥಿತರಿದ್ದರು.

ಅಥಣಿ ಕ್ಷೇತ್ರ ಶಿಕ್ಷಣ ವಲಯದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಮ್.ಎಲ್. ಹಂಚಾಟೆ ಇವರು ಶಾಲೆಯಲ್ಲಿ ಭೇಟಿ ನೀಡಿ ಶಿಕ್ಷಕರ ಕಲಿಸುವ ಪಾಠದ ವೀಕ್ಷಣೆ ಮಾಡಿ, ಪ್ರತಿ ಶಿಕ್ಷಕರು ದಿನನಿತ್ಯ ಪಾಠದ ಟಿಪ್ಪಣಿ ಮಾಡಬೇಕು. ಅಕಸ್ಮಿಕವಾಗಿ ಬೆಟ್ಟಿ ನೀಡಿದಾಗ ಪಾಠದ ಟಿಪ್ಪಣಿ ಇರಬೇಕು. ಪ್ರಧಾನ ಗುರುಗಳು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಪರಿಶೀಲನೆ ಮಾಡಬೇಕು. ಈ ಕುರಿತು ಎಲ್ಲ ಶಾಲೆಗಳಿಗೆ ಸೂಚನೆ ನೀಡಿದ್ದಾರೆ 

ಸುದ್ದಿ ಓದಿ