ಕಳಪೆ ಮಟ್ಟದ ರಸ್ತೆ ಕಾಮಗಾರಿ ಕಂಡುಬಂದಲ್ಲಿ ಕಠಿಣ ಕ್ರಮ: ಶಾಸಕ ಪಾಟೀಲ
ಕಾಗವಾಡ : ನಮ್ಮ ಕಾಗವಾಡ ತಾಲೂಕಿನಲ್ಲಿ ಗುಣಮಟ್ಟದ ರಸ್ತೆ ಕಾಮಗಾರಿಯಾಗಬೇಕು. ಯಾವುದೇ ರಸ್ತೆ ಕಾಮಗಾರಿಗಳು ಕಳಪೆ ಮಟ್ಟದ್ದು ಎಂದು ಕಂಡುಬಂದಲ್ಲಿ ಅಧಿಕಾರಿ ಹಾಗೂ ಗುತ್ತಿಗೆದಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಾಜಿ ಸಚಿವ ಹಾಲಿ ಕಾಗವಾಡ ಶಾಸಕ ಶ್ರೀಮಂತ ಬಾಳಾಸಾಹೇಬ ಪಾಟೀಲ ಮಾತನಾಡಿದರು.
ಶುಕ್ರವಾರ 25 ರಂದು ಐನಾಪೂರದ ಮೋಳೆ ವೃತ್ತದಲ್ಲಿ 3ಕೋಟಿ ರೂ ವೆಚ್ಚದ ಐನಾಪೂರ ಮೋಳೆ ರಸ್ತೆ ಕಾಮಗಾರಿಗೆ ಗುದ್ದಲ್ಲಿ ಪೂಜೆ ಸಲ್ಲಿಸಿ ಮಾತನಾಡುತ್ತಾ ಈಗಾಗಲೇ ಮಂಗಸೂಳಿ ಐನಾಪೂರ ರಸ್ತೆ 6 ಕೋಟಿ ರೂ ವೆಚ್ಚದ ಕಾಮಗಾರಿ ಅದರಂತರೆ 22 ಕೋಟಿ ರೂ ವೆಚ್ಚದ ಅರಳಟ್ಟಿ ಕೃಷ್ಣಾ ಕಿತ್ತೂರ ಚಾಲ್ತಿಯಲ್ಲಿದ್ದು ಹಾಗೂ 5 ಕೋಟಿ ರೂ ವೆಚ್ಚದ ಐನಾಪೂರ ಕಾತ್ರಾಳ ತಂಗಡಿ ರಸ್ತೆಯನ್ನು ಜನೆವರಿ ಒಳಗಾಗಿ ಪೂರ್ಣಗೊಳಿಸುವುದಾಗಿ ತಿಳಿಸಿದರು.
ಐನಾಪೂರ ದಿಂದ ಎಲ್ಲಾ ಕೂಡು ರಸ್ತೆಗಳ ನಿರ್ಮಿಣವಾಗುತ್ತಲಿದ್ದು ಕಾಮಗಾರಿಗಳ ಬಗ್ಗೆ ಸಾರ್ವಜನಿಕರು ಲಕ್ಷವಹಿಸಿ ಗುಣಮಟ್ಟದ ರಸ್ತೆಗೆ ಸಹಕರಿಸಬೇಕು ಎಂದರು. ನಾನು ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಿಲ್ಲ ಯಾವುದೇ ಪಕ್ಷದ ಹಾಗೂ ಮತದದವರು ಬಂದಾಗ ಸ್ಪಂಧಿಸಿ ಕಾರ್ಯನಿರ್ವಸುತ್ತಿದ್ದು ಅಭಿವೃದ್ಧಿಯೆ ನನ್ನ ಮೂಲ ಮಂತ್ರವಾಗಿದ್ದು ನನ್ನ ಕ್ಷೇತ್ರವನ್ನು ಮಾದರಿ ಕ್ಷೇತ್ರಮಾಡುವ ಗುರಿ ಹೊಂದಿದ್ದೇನೆ ಎಂದರು.
ಬ್ಲಾಕ ಅಧ್ಯಕ್ಷ ತಮ್ಮಣ್ಣಾ ಪಾರಶೇಟ್ಟಿ , ಮುಖಂಡ ದಾದಾ ಪಾಟೀಲ, ರಾಜೇಂದ್ರ ಪೋತದಾರ, ಡಾ ಎಮ್.ಎಸ್. ಕಾಚರ್ಿ, ಅನ್ನಾಸಾಬ ಡೂಗನವರ, ರತನ ಪಾಟೀಲ, ಪ್ರವೀಣ ಕುಲಕರ್ಣಿ , ಎ.ಜೆ. ಹಳ್ಳಿ ,ಮಾಲಗಾಂವೆ, ಪೋಪಟ ಪಾಟೀಲ ರಾವಬಹಾದ್ದೂರ ಕುಡಚಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.