ಯರಗಟ್ಟಿ

ಕಾನೂನು ಕೈಯಲ್ಲಿ ತೆಗೆದುಕೊಂಡರೆೆ ಕಠಿಣ ಕ್ರಮ : ಎಡಿಜಿಪಿ ಅಲೋಕ್ ಕುಮಾರಗೆ ಭರ್ಜರಿ ಸ್ವಾಗತ ಶೀಘ್ರ ಯರಗಟ್ಟಿ ಪೊಲೀಸ್ ಠಾಣೆ ಮಂಜೂರು

ಕಾನೂನು ಕೈಯಲ್ಲಿ ತೆಗೆದುಕೊಂಡರೆೆ ಕಠಿಣ ಕ್ರಮ : ಎಡಿಜಿಪಿ ಅಲೋಕ್ ಕುಮಾರಗೆ ಭರ್ಜರಿ ಸ್ವಾಗತ ಶೀಘ್ರ ಯರಗಟ್ಟಿ ಪೊಲೀಸ್ ಠಾಣೆ ಮಂಜೂರು

ಲೋಕದರ್ಶನ ವರದಿ 


ಯರಗಟ್ಟಿ 22: ಸಾರ್ವಜನಿಕರ ಹಿತಾಸಕ್ತಿ ರಕ್ಷಣೆಯೇ ನಮ್ಮ ಉದ್ದೇಶ. ನಮ್ಮೊಂದಿಗೆ ಸಹಕಾರದಿಂದ ಕೈಜೋಡಿಸಬೇಕು. ಕಾನೂನಿನ ಚೌಕಟ್ಟಿನಲ್ಲಿ ತಾವಿರಬೇಕು. ಕಾನೂನು ಕೈಯಲ್ಲಿ ತೆಗೆದುಕೊಳ್ಳುವ ಕಾರ್ಯ ಮಾಡಬಾರದು. ಅಂಥವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಹೆಚ್ಚುವರಿ (ಕಾನೂನು ಎಚ್ಚರಿಕೆ ಪೊಲೀಸ್ ಮಹಾನಿರ್ದೇಶಕರು ಸುವ್ಯವಸ್ಥೆ) ಅಲೋಕಕುಮಾರ ತಿಳಿಸಿದರು.   


ಪಟ್ಟಣದ ಪೊಲೀಸ್ ಠಾಣೆ ಮೈದಾನದಲ್ಲಿ ಜರುಗಿದ ಜನಸ್ಪಂದನೆ ಹಾಗೂ ಯುವಜನ ಸಭೆ ಅಹವಾಲು ಸ್ವೀಕರಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ನಿಮ್ಮ ರಕ್ಷಣೆಯಾದರೆ ನಮಗೆ ಒಳ್ಳೆಯ ಹೆಸರು ಬರುವುದು. ಕಳ್ಳತನ, ಮೋಸ, ಜೂಜಾಟ, ದರೋಡೆ, ಅಪರಾಧ ಕೃತ್ಯಗಳು ಕಂಡು ಬಂದಲ್ಲಿ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದೆಂದು ಕಡಖ ಎಚ್ಚರಿಕೆ ನೀಡಿದರು.  


ಬೆಳಗಾವಿ ಜಿಲ್ಲೆಗೆ ಅಂಟಿಕೊಂಡಿರುವ ಮಾರಾಠಿ ಎಂಇಎಸ್ ಪುಂಡರ ಹೆಡೆಮುರಿ ಕಟ್ಟುವುದು ಖಚಿತ. ಅನ್ಯಾಯವಾಗದಂತೆ ವರ್ತಿಸುವೆವು ಗಡಿನಾಡಿನ ಜನರಿಗೆ ರಕ್ಷಣೆ ಹಾಗೂ ಇನ್ನಿತರೆ ಘಟನೆಗಳು ಜರುಗದಂತೆ ನಿಗಾವಹಿಸುವೆವು. ಯಾರಿಗೂ ಏನೂ ಹಣಕೊಡದೆ ತಮ್ಮ ಅಹವಾಲುಗಳನ್ನು ಸಲ್ಲಿಸಬೇಕು. ತಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯಕೊಡಿಸಲು ನಾವು ಸದಾ ಬದ್ಧರಿದ್ದೆವೆ. ಶಾಂತಿ ನೆಲೆಸಿ ಸಹಬಾಳ್ವೆ ಜೀವನ ಸಾಗಿಸಿರಿ. ನನಗೆ ಯಾವುದೇ ಸನ್ಮಾನ ಬೇಡ ಎಂದು ಎಡಿಜಿಪಿ ಅಲೋಕ ಕುಮಾರ ಸ್ಪಷ್ಟ ಸಂದೇಶ ನೀಡಿದರು. 


ಹೇಳಿಕೆ: 1 ಶೀಘ್ರದಲ್ಲೇ ಯರಗಟ್ಟಿ ಉಪ ಪೊಲೀಸ್ ಠಾಣೆ ಮೇಲ್ದರ್ಜೆಗೆರಿಸಲು ಸರಕಾರಕ್ಕೆ ಹಾಗೂ ಗೃಹ ಸಚಿವರಿಗೆ ಮಾಹಿತಿ ನೀಡಲಾಗಿದೆ ಹಾಗೂ ಯರಗಟ್ಟಿ ಉಪ ಪೊಲೀಸ್ ಠಾಣೆಗೆ ಹೆಚ್ಚುವರಿಯಾಗಿ ಸಿಬ್ಬಂದಿ ನೀಡಲಾಗುವುದು. 

 ಎ.ಡಿ.ಜಿ.ಪಿ ಅಲೋಕಕುಮಾರ  


ಹೇಳಿಕೆ:2 ಕರ್ನಾಟಕ ಇತಿಹಾಸದಲ್ಲಿಯೆ ತಾಲೂಕು ಕೇಂದ್ರವಾದರೂ ಪೊಲೀಸ್ ಠಾಣೆ ಇಲ್ಲದ ಯರಗಟ್ಟಿ ಪಟ್ಟಣ ತಾಲೂಕು ಕೇಂದ್ರವಾಗಿ ಎರಡು ವರ್ಷಗಳು ಕಳೆದರೂ ಪೊಲೀಸ್ ಠಾಣೆ, ನ್ಯಾಯಾಲಯ, ವಿವಿಧ ಕಛೇರಿಗಳು ಪ್ರಾರಂಭವಾಗಿಲ್ಲ. ಕರ್ನಾಟಕ ಸರ್ಕಾರದ ಜನಪ್ರತಿನಿಧಿಗಳು ಇದರಬಗ್ಗೆ ಮುತುವರ್ಜಿ ವಹಿಸಬೇಕು.  

ರಫೀಕ ಡಿ. ಕೆ.  

ಕರವೇ ಅಧ್ಯಕ್ಷ  


ಉತ್ತರ ವಲಯದ ಪೊಲೀಸ್ ಮಹಾನೀರೀಕ್ಷಕ ಎನ್‌. ಸತೀಶ ಕುಮಾರ, ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ, ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಾನಿಂಗ ನಂದಗಾವಿ, ಬೆಳಗಾವಿ ಜಿಲ್ಲಾ ಸಶಸ್ತ್ರು ಮೀಸಲು ಪಡೆ ಕಾಶಪ್ಪನವರ, ರಾಮದುರ್ಗ ಡಿಎಸ್ಪಿ ರಾಮನಗೌಡ ಹಟ್ಟಿ, ಮುರಗೋಡ ಸಿಪಿಐ ಮೌನೇಶ್ವರ ಮಾಲಿಪಾಟೀಲ, ರಾಮದುರ್ಗ ಸಿಪಿಐ ಆಯ್‌. ಆರ್‌. ಪಟ್ಟಣಶೆಟ್ಟಿ, ಸವದತ್ತಿ ಸಿಪಿಐ ಮಂಜುನಾಥ ನಡುವಿನಮನಿ, ಬೈಲಹೊಂಗಲ ಸಿಪಿಐ ಯು. ಎಚ್‌. ಸಾತೇನಹಳ್ಳಿ, ರಾಮದುರ್ಗ ಪಿಎಸ್‌ಐರಿಶಿವಾನಂದ ಕಾರಜೋಳ, ಕಟಕೋಳ ಪಿಎಸ್‌ಐ ಸಿದ್ರಾಮ ಉಣ್ಣದ, ನೇಸರಗಿ ಪಿಎಸ್‌ಐ ಸಿಗಿಹಳ್ಳಿ, ಯರಗಟ್ಟಿ ಪಟ್ಟಣ ಪಂಚಾಯತ ನಾಮನಿರ್ದೇಶನ ಸದಸ್ಯ ಅಜೀತಕುಮಾರ ದೇಸಾಯಿ, ವಿಶಾಲಗೌಡ ಪಾಟೀಲ, ಮಹಾಂತೇಶ ಜಕಾತಿ, ಶಿವಾನಂದ ಯರಗಣವಿ, ಜೇ ರತ್ನಾಕರ ಶೆಟ್ಟಿ, ಸದಾನಂದ ಹಣಬರ, ಡಾ. ವಿ. ಎಂ. ಪಟ್ಟಣ, ಸೇರಿದಂತೆ ಅನೇಕ ವಿವಿಧ ಪರ ಸಂಘಟನೆಗಳ ಮುಖಂಡರು ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 


ಸುದ್ದಿ ಓದಿ