ಅಥಣಿ

ಬಸ್ಸಿಗೆ ಕಲ್ಲೆಸೆತ: ಪ್ರಾಣಾಪಾಯದಿಂದ ಚಾಲಕ ಪಾರು

ಬಸ್ಸಿಗೆ ಕಲ್ಲೆಸೆತ: ಪ್ರಾಣಾಪಾಯದಿಂದ ಚಾಲಕ ಪಾರು

ಕಳೆ ಒಂದು ವಾರದಲ್ಲಿ ಎರಡನೇಯ ಪ್ರಕರಣ ಇದಾಗಿದೆ

ಅಥಣಿ 14: ಸಾರಿಗೆ ನೌಕರರು ವಿವಿಧ ಬೇಡಿಕೆ ಹಾಗೂ 6ನೇ ವೇತನ ಆಯೋಗ ರಚಿಸುವಂತೆ ಪ್ರತಿಭಟನೆ ಮುಂದುವರಿಸಿದ್ದಾರೆ. ಇವತ್ತಿಗೆ 8ನೇ ದಿನ ಪ್ರತಿಭಟನೆ ಕಾಲಿಟ್ಟಿದ್ದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತವರೂರಲ್ಲಿ ಕೆಲವು ಬಸ್ ಸಂಚಾರ ಪ್ರಾರಂಭವಾಗಿದ್ದರಿಂದ ಇದನ್ನು ಕಿಡಿಗೇಡಿಗಳು ಸಹಿಸದೆ ಬಸ್ಸಿಗೆ ಕಲ್ಲೆಸೆದು ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸಂಭವಿಸಿದೆ.

ಅಥಣಿ ಜಮಖಂಡಿ ಮಾರ್ಗವಾಗಿ ಬಸ್ ಸಂಚಾರ ಪ್ರಾರಂಭವಾಗಿತ್ತು ಜಮಖಂಡಿ ತಾಲೂಕಿನಿಂದ ಅಥಣಿಗೆ ಬರುವ ಸಂದರ್ಭದಲ್ಲಿ ಸವದಿ ಕ್ರಾಸ್ ಬಳಿ ಕಿಡಿಗೇಡಿಗಳು ಬಸ್ಸಿನ ಮುಂಬಾಗಕ್ಕೆ ಕಲಿಸಿದ್ದಾರೆ. ಇದರ ಪರಿಣಾಮವಾಗಿ ಗಾಜು ಪುಡಿ ಪುಡಿಯಾಗಿ ಚಾಲಕನ ಕೈಗೆ ಕಲ್ಲು ತಾಗಿ ಕೈಗೆ ಪೆಟ್ಟಾಗಿದೆ. ವಿಜಯಕುಮಾರ ಜೇರೆ ಎಂಬ ಚಾಲಕನಿಗೆ ಪೆಟ್ಟಾಗಿದ್ದು, ಸ್ಥಳೀಯ ಅಥಣಿ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಅಥಣಿ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಚಾಲಕರು ಸಾರ್ವಜನಿಕರ ತೊಂದರೆ ನೋಡದೆ ಬಸ್ ಸಂಚಾರ ಪ್ರಾರಂಭಿಸಿದರೆ ಕೆಲವು ಕಿಡಿಗೇಡಿಗಳಿಂದ ಚಾಲಕರಿಗೆ ಜೀವಭಯದಲ್ಲಿ ಬಸ್ ಸಂಚಾರ ಮಾಡುವಂತಾಗಿದೆ. ಸ್ಥಳೀಯ ಪೆÇಲೀಸ್ ಇಲಾಖೆ ನಮಗೆ ಭದ್ರತೆ ನೀಡಬೇಕೆಂದು ಕೆಲವು ಚಾಲಕರು ಸರ್ಕಾರಕ್ಕೆ ಮನವಿ ಕೂಡ ಮಾಡಿದ್ದಾರೆ. ವಿಶೇಷ ಎಂದರೆ ಅಥಣಿ ಕೆಎಸ್‍ಆರ್‍ಟಿಸಿ ಘಟಕದ ಬಸ್ಸಿಗೆ ಈ ವಾರದಲ್ಲಿ ಕಲ್ಲು ತೂರಾಟ ಎರಡನೇ ಪ್ರಕರಣ ಇದಾಗಿದೆ.


ಸುದ್ದಿ ಓದಿ