ಮನರಂಜನೆ

ಲೈಂಗಿಕ ಕಿರುಕುಳ ಪ್ರಕರಣ; ಹೇಳಿಕೆ ದಾಖಲಿಸಿದ ಅನುರಾಗ್‌ ಕಶ್ಯಪ್‌

ಲೈಂಗಿಕ ಕಿರುಕುಳ ಪ್ರಕರಣ; ಹೇಳಿಕೆ ದಾಖಲಿಸಿದ ಅನುರಾಗ್‌ ಕಶ್ಯಪ್‌

ಮುಂಬೈ, ಅಕ್ಟೋಬರ್ 1: ನಟಿಯೋರ್ವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಚಿತ್ರ ನಿರ್ದೇಶಕ ಅನುರಾಗ್‌ ಕಶ್ಯಪ್‌ ಗುರುವಾರ ವೆರ್ಸೋವಾ ಪೊಲೀಸ್‌ ಠಾಣೆಗೆ ಭೇಟಿ ನೀಡಿ ಹೇಳಿಕೆ ನೀಡಿದರು. 

ಅನುರಾಗ್‌ ವಿರುದ್ಧ ನಟಿ ಪಾಯಲ್‌ ಘೋಷ್‌ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. ವಿಚಾರಣೆ ವೇಳೆ ಮಹಿಳಾ ಪೊಲೀಸ್‌ ಸೇರಿದಂತೆ 10 ಪೊಲೀಸರ ತಂಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅನುರಾಗ್‌, ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗೆಳೆದಿದ್ದಾರೆ ಎನ್ನಲಾಗಿದೆ.

ವಿಚಾರಣೆ ಮುಂದುವರಿಯುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಸುದ್ದಿ ಓದಿ