ಬೈಲಹೊಂಗಲ

ರಾಜ್ಯಮಟ್ಟದ ಜಿದ್ದಾ ಜಿದ್ದಿ ಟಗರಿನ ಕಾಳಗ

ರಾಜ್ಯಮಟ್ಟದ ಜಿದ್ದಾ ಜಿದ್ದಿ ಟಗರಿನ ಕಾಳಗ

ಬೈಲಹೊಂಗಲ 12: ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಜತೆಗೆ ಅವುಗಳ ಉಳಿವಿಗೆ ಎಲ್ಲರೂ ಶ್ರಮಿಸಬೇಕಿದೆ ಎಂದು ಸಮಾಜ ಸೇವಕ ನಾಗಪ್ಪ ಮೇಟಿ ಹೇಳಿದರು. 

ಅವರು ಸಮೀಪದ ಸುಕ್ಷೇತ್ರ ಇಂಚಲದಲ್ಲಿ ನೇತಾಜಿ ಸ್ಪೋರ್ಟ್ಸ್‌ ಕ್ಲಬ್ ಹಾಗೂ ಸಮಾಜ ಸೇವಕ ನಾಗಪ್ಪ ಮೇಟಿ ಗೆಳೆಯರ ಬಳಗದ ಸಹಯೋಗದಲ್ಲಿ ನಡೆದ  ರಾಜ್ಯಮಟ್ಟದ ಜಿದ್ದಾ ಜಿದ್ದಿನ  ಟಗರಿನ ಕಾಳಗದ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹಳ್ಳಿಗಾಡಿನ ಜನರ ಒಗ್ಗೂಡುವಿಕೆಗೆ ಟಗರಿನ ಕಾಳಗದಂತಹ ಆಟಗಳು ಪ್ರೇರಣೆಯಾಗಿವೆ ಎಂದರು. 

ಶಿವಯೋಗೀಶ್ವರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪೂರ್ಣಾನಂದ ಭಾರತಿ ಸ್ವಾಮಿಜಿ ಸಾನಿಧ್ಯ ವಹಿಸಿ ಆಶೀವರ್ಚನ ನೀಡಿದರು. ನಿವೃತ್ತ ಮುಖ್ಯ ಶಿಕ್ಷಕ ಶಿವಪ್ಪ ಕರಿಗಾರ ಅಧ್ಯಕ್ಷತೆ ವಹಿಸಿದ್ದರು. 

ವೇದಿಕೆ ಮೇಲೆ ಗ್ರಾ ಪಂ.ಅಧ್ಯಕ್ಷ ಶಂಕರ ಬಾಗೇವಾಡಿ, ಅಶೋಕ ಮಲಬನ್ನವರ, ಸದೆಪ್ಪ ವಾರಿ,ಭೀಮಪ್ಪ ಸೋಮಣ್ಣವರ, ಬಸವರಾಜ ಸಾವಳಗಿ, ಸಿರಾಜ ಮಿರ್ಜಣ್ಣವರ, ಶಿವಾನಂದ ಗಾಯಕವಾಡ, ಶಿವಮೂರ್ತಿ ಪೂರ್ವಿಮಠ,  ಎಂ ಬಿ . ಖನಗೌಡರ, ಐ ಆರ್ ಕಾಜಗಾರ, ಎಸ್ ಆರ್  ಪಾಟೀಲ ಅನೇಕರು ಇದ್ದರು. 

ಕಾಳಗದಲ್ಲಿ ಟಗರುಗಳು ಓಡಿ ಬಂದು ಪರಸ್ಪರ ಡಿಚ್ಚಿ ಹೊಡೆಯುತ್ತಿದ್ದರೆ ಪ್ರೇಕ್ಷಕರು ಶಿಳ್ಳೆ ಚಪ್ಪಾಳೆಗಳ ಮೂಲಕ ಪ್ರೋತ್ಸಾಹಿಸಿದರು. ಟಗರುಗಳು ತೋರುತ್ತಿದ್ದ ಪೊಗರಿಗೆ ಜನರು ರೋಮಾಂಚನಗೊಂಡರು. 


ಸುದ್ದಿ ಓದಿ