ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ರಾಜ್ಯಮಟ್ಟದ ಭಜನಾ ಸ್ಪರ್ಧೆ- ಶ್ರೀ ಸ್ವಾಮಿಯ ಬೆಳ್ಳಿ ರಥೋತ್ಸವ
ರಾಣೇಬೆನ್ನೂರು 27: ಇಲ್ಲಿಗೆ ಸಮೀಪದ, ದಾವಣಗೆರೆ ಜಿಲ್ಲೆ, ಹರಿಹರ ತಾಲೂಕಿನ ಸುಕ್ಷೇತ್ರ ಉಕ್ಕಡಗಾತ್ರಿ ಗ್ರಾಮದ ಶ್ರೀ ಕರಿಬಸವೇಶ್ವರ ಸ್ವಾಮಿಯ, ವಾರ್ಷಿಕ ಸಂಪ್ರದಾಯದಂತೆ ಡಿಸೆಂಬರ್ 17 ರಂದು ರವಿವಾರ ಸಂಜೆ 6 ಗಂಟೆಗೆ ಶ್ರೀಮಾತಾ ತುಂಗಭದ್ರಾ ಆರತಿ. ಹಾಗೂ 18 ರಂದು ಸೋಮವಾರ ಮುಂಜಾನೆ 11:ಘಂಟೆಗೆ ನಡೆಯುವ ಶ್ರೀ ಸ್ವಾಮಿಯ ಬೆಳ್ಳಿ ರಥೋತ್ಸವ, ಅಂಗವಾಗಿ ಶ್ರೀ ಕರಿಬಸವೇಶ್ವರ ಸ್ವಾಮಿ ಗದ್ದಿಗೆ ಟ್ರಸ್ಟ್ ಕಮಿಟಿ ರಾಜ್ಯಮಟ್ಟದ ಭಜನಾ ಸ್ಪರ್ಧೆಯು ಆಯೋಜಿಸಿದೆ ಎಂದು ಕಾರ್ಯದರ್ಶಿಗಳಾದ ಎಸ್. ಸುರೇಶ್ ಗೌಡ್ರು ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಮಟ್ಟದ ಭಜನಾ ಸ್ಪರ್ಧೆಯು ಪುರುಷ ಹಾಗೂ ಮಹಿಳೆಯರು ಎರಡು ವಿಭಾಗದಲ್ಲಿ ಪ್ರತ್ಯೇಕವಾಗಿ ನಡೆಸಲಾಗುವುದು. ಸ್ಪರ್ಧೆಯು ಡಿಸೆಂಬರ್ 18 ರಂದು ಸೋಮವಾರ ಮುಂಜಾನೆ 10: ಘಂಟೆಗೆ ಆರಂಭವಾಗಿ, ಸಂಜೆಯವರೆಗೂ ನಡೆಯಲಿವೆ. ಸ್ಪರ್ಧಾ ವಿಜೇತರಿಗೆ ಪ್ರಥಮ ಬಹುಮಾನ 25. ಸಾವಿರ , ದ್ವಿತೀಯ 15, ಸಾವಿರ ಹಾಗೂ ತೃತಿಯ 10, ಸಾವಿರ ರೂಗಳು ನಗದು ಮೊತ್ತ, ಹಾಗೂ ಪ್ರಮಾಣ ಪತ್ರ ಮತ್ತು ಆಕರ್ಷಕ ಪಾರಿತೋಷಕ ದೊರೆಯಲಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ತಂಡಗಳ ಮುಖ್ಯಸ್ಥರು ತಮ್ಮ ತಂಡದ ಹೆಸರು ನೋಂದಾಯಿಸಲು ದಿ. 17 ರಂದು ಶನಿವಾರ ಕೊನೆಯ ದಿನವಾಗಿರುತ್ತದೆ. ನಿಗದಿತ ದಿನಾಂಕದೊಳಗೆ ಹೆಸರು ನೋಂದಾಯಿಸಿದವರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ಇರುತ್ತದೆ. ಎಂದು ಸ್ಪರ್ಧಾ ನಿರ್ಣಾಯಕ ಸಮಿತಿಯು ತಿಳಿಸಿದೆ. ಸಂಪರ್ಕತೆ :962970453- 7483415736