ರಾಜ್ಯಮಟ್ಟದ ಭಜನಾ ಸ್ಪರ್ಧೆ ಭಗವಂತನ ಸಾಕ್ಷಾತ್ಕಾರಕ್ಕೆ ಭಜನೆ ಸಹಕಾರಿಯಾಗಿದೆ: ನಂದಿಗುಡಿ ಶ್ರಿಗಳು
ರಾಣೇಬೆನ್ನೂರು 24: ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿ, ಸಾಗಿ ಬಂದಿರುವ ನೈಜ ಸಂಸ್ಕೃತಿಯ ಜನಪದ ಕಲೆಗಳಲ್ಲಿ ಒಂದಾದ ಭಜನೆ ಭಗವಂತನನ್ನೂ ಓಲಿಸಿಕೊಳ್ಳಲು ತುಂಬಾ ಸಹಕಾರಿಯಾಗಿದೆ ಎಂದು ನಂದಿಗುಡಿ ವೃಷಭಪುರಿ ಸಂಸ್ಥಾನ ಮಠದ1108 ಜಗದ್ಗುರು, ಸಿದ್ದರಾಮೇಶ್ವರ ಶಿವಾಚಾರ್ಯರು ನುಡಿದರು. ಅವರು, ತುಮ್ಮಿಕಟ್ಟಿ ಸಮೀಪದ , ಸುಕ್ಷೇತ್ರ ಉಕ್ಕಡಗಾತ್ರಿ ಕರಿ ಬಸವೇಶ್ವರ ಸ್ವಾಮಿಯ ಗದ್ದುಗೆ ಟ್ರಸ್ಟ್ ಆಯೋಜಿಸಿದ್ದ, ರಾಜ್ಯಮಟ್ಟದ ಭಜನಾ ಸ್ಪರ್ಧೆ ಸ್ವಾಮಿಯ ಬೆಳ್ಳಿ ರಥೋತ್ಸವ, ಕಾರ್ತಿಕೋತ್ಸವ ಮತ್ತು ಪಾಲಿಕೋತ್ಸವ, ಧಾರ್ಮಿಕ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಗ್ರಾಮೀಣ ಸಂಸ್ಕೃತಿಯಲ್ಲಿ ಪ್ರತಿಬಿಂಬಿತವಾಗಿರುವ, ನಮ್ಮ ದೇಶದ ಸಂಸ್ಕೃತಿ ಪ್ರತಿಬಿಂಬಿಸುವ ಭಜನೆ ಕಲೆ ಅತ್ಯಂತ ಪ್ರಮುಖವಾಗಿದೆ. ಆಧುನಿಕತೆ ಎಷ್ಟೇ ಬದಲಾವಣೆ ಕಂಡರೂ ಸಹ, ನೈಜವಾಗಿ ಬಂದಿರುವ, ಭಜನೆ ಇಂದಿಗೂ ಸಹ ಭಗವಂತನನ್ನು ಅತ್ಯಂತ ಸರಳವಾಗಿ ಓಲಿಸಿಕೊಳ್ಳುವ ಬಹು ಮಾಧ್ಯಮವಾಗಿದೆ ಎಂದರು.
ಕಲೆ ಮತ್ತು ಕಲಾವಿದರು ಈ ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹರಿಕಾರರಾಗಿ, ವೇದ ಇತಿಹಾಸ ಕಾಲಗಳಿಂದಲೂ ಸಾಗಿ ಬಂದಿದ್ದಾರೆ. ಕ್ಷೇತ್ರದ ಕರಿಬಸವೇಶ್ವರ ಸ್ವಾಮಿಯು ಭಜನೆ ಪ್ರಿಯಾ, ಭಜನೆಗೆ, ಬೇಗನೆ ಒಲಿಯುವವನಾಗಿದ್ದಾನೆ, ಭಕ್ತಾದಿಗಳು ಕ್ಷೇತ್ರದಲ್ಲಿ, ಸ್ವಚ್ಛತೆಯನ್ನು ಕಾಪಾಡಿಕೊಂಡು, ಸಾಗಿದಾಗ ಮಾತ್ರ ಮಾನಸಿಕ ಶಾಂತಿ ನೆಮ್ಮದಿ, ಹೊಂದಲು, ಭವ ಬಂಧನದಿಂದ ಹೊರ ಬರಲು ಸಾಧ್ಯವಾಗುವುದು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ, ಕರಿಬಸವೇಶ್ವರ ಗದ್ಧಿಗೆ ಟ್ರಸ್ಟ್ ಕಾರ್ಯದರ್ಶಿ,ಸುರೇಶಗೌಡ್ರು ಎಸ್, ಅವರು, ನಾಡಿನಲ್ಲಿ ಅತ್ಯಂತ ಪವಿತ್ರ, ಮತ್ತು ಪವಾಡ ಪುರುಷ ಕರಿಬಸವೆಶ್ವರ ಅಜ್ಜನ ಕ್ಷೇತ್ರ ಇದಾಗಿದ್ದು, ಭಕ್ತರ ಭವ ಬಂಧನಗಳನ್ನು ಪರಿಹರಿಸುವ ಮಹಾನ್ ಕ್ಷೇತ್ರ ಇದಾಗಿದೆ. ಕ್ಷೇತ್ರದಲ್ಲಿ ಪುರಾತನ ಕಲೆ ಭಜನೆ, ಮತ್ತು ಭಜನಾ ಕಲಾವಿದರನ್ನು, ಕ್ಷೇತ್ರಕ್ಕೆ ಬರಮಾಡಿಕೊಂಡು, ಅವರಲ್ಲಿರುವ ಕಲೆಯನ್ನು, ಅಜ್ಜನ ಸನ್ನಿಧಿಗೆ ಸಮರ್ಿಸಬೇಕೆನ್ನುವ ಉದ್ದೇಶ ಹೊಂದಿದ್ದೇವೆ ಎಂದರು.
ಜನಪದ ಸಂಸ್ಕೃತಿ, ಸಂಸ್ಕಾರ, ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕಾಗಿದೆ. ಮರೆಯಾಗುತ್ತಿರುವ, ನೈಜ ಜನಪದ ಸಂಸ್ಕೃತಿಯ, ಮೂಲ ಪರಂಪರೆಯ ಭಜನೆ ಕಲೆ, ಉಳಿಬೇಕು, ಮತ್ತು ಬೆಳೆಯಬೇಕು ಎನ್ನುವ ಏಕೈಕ ಉದ್ದೇಶದಿಂದ ಇಲ್ಲಿ ಪ್ರತಿ ವರ್ಷ ಸ್ಪರ್ಧೆಯ ಮೂಲಕ, ಭಜನಾ ಕಲಾವಿದರನ್ನು ಆಹ್ವಾನಿಸಲಾಗುತ್ತಿದೆ ಎಂದರು. ವೇದಿಕೆಯಲ್ಲಿ ಉಪಾಧ್ಯಕ್ಷ ನಂದಿಗೌಡ್ರ,ಗಡಿಗೆಪ್ಪ ಹೊಸಳ್ಳಿ, ಗದಿಗೆಯ್ಯ ಪಾಟೀಲ,ಪ್ರಕಾಶ್ ಕೋಟೆರ, ಇಂದೂಧರ, ಆರಿ್ವವೇಕಾನಂದ ಪಾಟೀಲ್, ನಾಗರಾಜ್ ದಿಲ್ಲಿವಾಲ,ಬಸನಗೌಡ ಪಾಳೇದ,ವೀರನಗೌಡ ಹಲಗಪ್ಪನವರ, ಅಜಯಗೌಡ ಶಾರದಮ್ಮ,ಬಸವರಾಜಪ್ಪ, ತುಮಕೂರು ಶಿದ್ದಲಿಂಗಪ್ಪ ತುಮಕೂರು,ಶಾರದಮ್ಮ,ಶಿದ್ದಣ್ಣ, ನಿಷಾರ್ ಅಹಮ್ಮದ್,ಕಾಶಿನಾಥ್ ಬೆಂಗಳೂರ, ಸೇರಿದಂತೆ, ಗ್ರಾಮಸ್ತರು, ಸಾವಿರಾರು, ಭಕ್ತರು. ಪಾಲ್ಗೊಂಡಿದ್ದರು, ರಾಜ್ಯಮಟ್ಟದ ಭಜನಾ ಸ್ಪರ್ಧೆಯಲ್ಲಿ, ರೋಣ, ಗದಗ, ಬೆಳಗಾವಿ, ಧಾರವಾಡ, ಗೋಕಾಕ, ಮುನವಳ್ಳಿ, ಹರಪನಹಳ್ಳಿ, ಯಲಬುರ್ಗಾ, ರಾಯಚೂರು, ಬಳ್ಳಾರಿ, ದುಗ್ಗಾವತ್ತಿ, ಚಿತ್ರದುರ್ಗ, ದಾವಣಗೆರೆ, ಹರಿಹರ, ಶಿಕಾರಿಪುರ,ಕಾರವಾರ, ಉಡುಪಿ, ರಾಣೆಬೆನ್ನೂರು, ಹಾವೇರಿ, ಹಾನಗಲ್ ಸೇರಿದಂತೆ ನಾಡಿನ ಮತ್ತಿತರ ಜಿಲ್ಲೆಗಳಿಂದ 60ಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡಿದ್ದವು. ದ ನಿರ್ಣಾಯಕರಾಗಿ, ಕೆ.ಸಿ.ನಾಗರಾಜ್ಜಿ, ಕೆ.ಎಸ್.ನಾಗರಾಜ, ಗುಡ್ಡರಾಜ್ ಹಲಗೇರಿ, ಕಾರ್ಯನಿರ್ವಹಿಸಿದರು. ಉಕ್ಕಡಗತ್ರಿಯ ಕರಿಬಸವೇಶ್ವರ ಸ್ವಾಮಿ ಭಜನಾ ಮಂಡಳಿ ಕಲಾವಿದರು ಪ್ರಾರ್ಥಿಸಿದರು. ಶಿವರಾಜ ಕಾಯಕದ ಸ್ವಾಗತಿಸಿದರು. ಬಸವರಾಜ ನಿರೂಪಿಸಿ, ಗದಿಗೇಶ್ ವಂದಿಸಿದರು.