ರಾಜ್ಯ ಬಜೆಟ್ ನೀರಸವಾಗಿದೆ: ವ್ಹಿ.ಪಿ. ಲಿಂಗನಗೌಡರ
ರಾಣಿಬೆನ್ನೂರ, 17: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್ ನೀರಸವಾಗಿದೆ. ಪ್ರಮುಖ ಯೋಜನೆಗಳಿಗೆ ಯಾವುದೇ ಹಣವನ್ನು ಮೀಸಲಿಟ್ಟಿಲ್ಲ ಕೇವಲ ಅನುತ್ಪಾದಕ ವೆಚ್ಚಕ್ಕೆ ಹಣ ಮೀಸಲು ಇಟ್ಟಿದ್ದಾರೆ. ಮತ್ತ್ತೊಮ್ಮೆ ಮತ ಬ್ಯಾಂಕ್ಗಟ್ಟಿ ಮಾಡಿಕೊಳ್ಳಲು ಅಲ್ಪ ಸಂಖ್ಯಾತರ ಓಲೈಕೆ ಮಾಡಿದ್ದಾರೆ. ಕೇವಲ ಇದು ಘೋಷಣೆಗೆ ಮಾತ್ರ ಸೀಮಿತ ಸಂಪನ್ಮೂಲ ಕ್ರೋಡಿಕರಣಕ್ಕೆ ದೊಡ್ಡ ಸವಾಲು? ಮೂಲ ಭೂತ ಸೌಕರ್ಯದತ್ತ ಗಮನ ಹರಿಸಿಲ್ಲ ಇದೊಂದು ಹೂರಣವಿಲ್ಲದ ಹೋಳಿಗೆಯಂತೆ ಇದೆ. ಹಳೆಯ ಗೋಡೆಗೆ ಹೊಸ ಬಣ್ಣ ಬಳಿದಂತೆ ಇದೆ. ಬಜೆಟ್ ನೀರಸವಾಗಿದೆ ಎಂದು ಮಾಜಿ ಅಧ್ಯಕ್ಷರು, ಕರ್ನಾಟಕ ವಾಣಿಜ್ಯೋಧ್ಯಮ ಸಂಸ್ಥೆ ಹುಬ್ಬಳ್ಳಿ ಮತ್ತು ವರ್ತಕರು ರಾಣಿಬೆನ್ನೂರ. ವ್ಹಿ.ಪಿ. ಲಿಂಗನಗೌಡರ ತಿಳಿಸಿದ್ದಾರೆ.