ರಾಜ್ಯಮಟ್ಟದ ಯೋಗಾಸನ ಕ್ರೀಡಾ ಸ್ಪರ್ಧೆ : ಭರತ, ರಾಜಶ್ರೀ, ಸರಯೋ ರಾಷ್ಟ್ರಮಟ್ಟಕ್ಕೆ ಆಯ್ಕೆ
ರಾಣೇಬೆನ್ನೂರು ,21: ಚಿಕ್ಕಮಗಳೂರು ಜಿಲ್ಲೆ ಕಡೂರು ಮಹಾನಗರದ, ಬೆಂಕಿ ಪುಟ್ಟಮ್ಮ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯ ಯೋಗಾಸನ ಸಂಸ್ಥೆಯು, ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ ಆಯೋಜಿಸಿತ್ತು.
ಸದರಿ ಸ್ಪರ್ಧೆಯ ಪ್ರಮುಖ ನಿರ್ಣಾಯಕರಾಗಿ ಪಾಲ್ಗೊಂಡಿದ್ದ, ಯೋಗ ಸಾಧಕಿ,ಜಿಲ್ಲಾ ಯೋಗಾಸನ ಸ್ಪೋರ್ಟ್ಸ ಅಸೋಸಿಯೇಷನ್ ಸಂಯೋಜಕಿ ಶ್ರೀಮತಿ ಜ್ಯೋತಿ ಜಂಬಿಗಿ, ಸ್ಪರ್ಧಾ ವಿಜೇತರಿಗೆ ಪದಕ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, ಯೋಗ ಎಂಬುದು ಯೋಗಾನು ಯೋಗ, ಯೋಗ ಎಲ್ಲರಿಗೂ ಅನ್ವಯಿಸುವುದಿಲ್ಲ. ಯೋಗವು ಅನ್ವಯಿಸಬೇಕಾದರೆ, ನಿತ್ಯವೋ, ಪ್ರಥಮ ಆದ್ಯತೆಯಾಗಿ ಯೋಗ ಧ್ಯಾನ ಪ್ರಾಣಾಯಾಮ ಅಳವಡಿಸಿ ಕೊಂಡಾಗ ಮಾತ್ರ, ಭವಿಷ್ಯದಲ್ಲಿ ಸಾಧನೆ ಮಾಡಲು ಸಾಧ್ಯವಾಗುವುದು ಎಂದರು.
ಯೋಗ ಸಾಧನೆ ನಿಂತ ನೀರಲ್ಲ. ಸ್ಪರ್ದಾಳುಗಳು ತಮ್ಮ ನಿತ್ಯದ ಬದುಕಿನಲ್ಲಿ ಕ್ರೀಡೆಯ ಒಂದು ಭಾಗವಾಗಿ ಅಳವಡಿಸಿಕೊಂಡಾಗ ಮಾತ್ರ, ಇನ್ನೂ ಉತ್ತಮ ರೀತಿಯಲ್ಲಿ ಸ್ಪರ್ಧಾತ್ಮಕವಾಗಿ ಸಾಧನೆ ಮಾಡಲು ಸಾಧ್ಯವಾಗುವುದು ಎಂದರು. ಭಾರಿ ಪೈಪೋಟಿಯಲ್ಲಿ ಸ್ಪರ್ಧಾತ್ಮಕವಾಗಿ ನಡೆದ ಯೋಗ ಸ್ಪರ್ಧೆಯಲ್ಲಿ, ರಾಜ್ಯದಿಂದ ನೂರಕ್ಕೂ ಹೆಚ್ಚು ಸ್ಪರ್ಧಿಗಳು ವಿವಿಧ ವಿಭಾಗದ ಮೂಲಕ ಪಾಲ್ಗೊಂಡಿದ್ದರು. ಅದರಲ್ಲಿ, ರಾಣೆಬೆನ್ನೂರಿನ ಭರತ್ ನಾಗಪ್ಪ ಹೊನ್ನತ್ತಿ ದ್ವಿತೀಯ, ರಾಜಶ್ರೀ ಉದಗಟ್ಟಿ ದ್ವಿತೀಯ ಸ್ಥಾನ ಹಾಗೂ ಸರಯೂ ಭರತ ಹೊನ್ನತ್ತಿ ಅವರು ಚತುರ್ಥಸ್ಥಾನ ಸ್ಥಾನವನ್ನು ಗಳಿಸಿ, ರಾಷ್ಟ್ರ ಮಟ್ಟದಲ್ಲಿ ನಡೆಯುವ ಸ್ಪರ್ಧೆಗೆ ಆಯ್ಕೆಗೊಂಡರು ಹಾವೇರಿ ಜಿಲ್ಲೆಗೆ ಹಾಗೂ, ನಾಡಿಗೆ ಕೀರ್ತಿ ತಂದ ಯೋಗ ಸ್ಪರ್ದಾ ವಿಜೇತರಿಗೆ ಸಮಾರೋಪ ಸಮಾರಂಭದಲ್ಲಿ ಪದಕ ಪ್ರಶಸ್ತಿ ವಿತರಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮತ್ತೋರ್ವ ನಿರ್ಣಾಯಕಿ ಪುಷ್ಪ ಎಂ. ಸೊಲಬಗೌಡ್ರು ಸೇರಿದಂತೆ ಸ್ಪರ್ದಾ ಆಯೋಜಕರು ಪಾಲ್ಗೊಂಡಿದ್ದರು.ಸಾಧನೆ ಮೆರೆದ ಕೀರ್ತಿ ತಂದ ಯೋಗ ಸ್ಪರ್ಧಾ ವಿಜೇತರಿಗೆ, ಜಿಲ್ಲಾ ಸಂಯೋಜಕಿ,ಶ್ರೀಮತಿ ಜ್ಯೋತಿ ಜಂಬಿಗಿ, ಮತ್ತು ಯೋಗ ಸಾಧಕರು, ಜಿಲ್ಲೆಯ ಮತ್ತು ನಾಡಿನ ಕ್ರೀಡಾ ಸಂಸ್ಥೆಯ ಕ್ರೀಡಾಪಟುಗಳು ಹಾರ್ದಿಕವಾಗಿ ಅಭಿನಂದಿಸಿ, ಶುಭ ಹಾರೈಸಿದ್ದಾರೆ.