ಶಿವಾನಂದ ಮಹಾವಿದ್ಯಾಲಯದಲ್ಲಿ ರಾಜ್ಯ ಮಟ್ಟದ ವೇಬಿನಾರ್
ಕಾಗವಾಡ 14: ಹಣಕಾಸು ಯೋಜನೆಯು ನಮ್ಮ ಅಲ್ಪಾವಧಿ ಮತ್ತು ದೀರ್ಘಾವಧಿ ಗುರಿಗಳನ್ನು ಸಾಧಿಸುವ ಜೊತೆಗೆ ಹಣಕಾಸಿನ ಸಂಪನ್ಮೂಲಗಳನ್ನು ನಿರ್ವಹಿಸುವಲ್ಲಿ ಸಹಾಯ ಮಾಡುವ ಪ್ರಕ್ರಿಯೆಯಾಗಿದೆ. ಪ್ರಸ್ತುತ ದಿನಗಳಲ್ಲಿ ನಾವು ವಿವಿಧ ಹಣಕಾಸಿನ ಯೋಜನೆಗಳಲ್ಲಿ ಹೂಡಿಕೆಯೊಂದಿಗೆ ಆದಾಯವನ್ನು ಗಳಿಕೆ ಮಾಡಬಹುದೆಂದು ಅಹ್ಮದಾಬಾದನ ತರಬೇತುದಾರ ಮತ್ತು ವೃತ್ತಿ ವಿಶ್ಲೇಷಕ ರುಜಾ ಸೂತಾರಿಯ ಹೇಳಿದರು.
ಸೋಮವಾರ ದಿ.14 ರಂದು ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ವಾಣಿಜ್ಯಶಾಸ್ತ್ರ ವಿಭಾಗ ಮತ್ತು ಮುಂಬೈನ ಬೀಮ್ಸ್ ವತಿಯಿಂದ ಜಂಟಿಯಾಗಿ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಹೂಡಿಕೆದಾರರ ಜಾಗೃತಿ ಎಂಬ ವಿಷಯದ ಮೇಲೆ ಒಂದು ದಿನದ ರಾಜ್ಯ ಮಟ್ಟದ ವೇಬಿನಾರ್ದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ವಿದ್ಯಾರ್ಥಿಗಳು ವಿವಿಧ ಹೂಡಿಕೆಗಳ ಪ್ರಕ್ರಿಯೆ, ತೆರಿಗೆ ಉಳಿತಾಯ, ಆದಾಯ ಗಳಿಕೆಗಳ ಬಗ್ಗೆ ತಿಳಿದುಕೊಂಡು, ಒಳ್ಳೆಯ ಆರ್ಥಿಕ ತಜ್ಞರಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಸ್.ಎ. ಕರ್ಕಿ ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳು ಹಣಕಾಸಿನ ವಿಷಯಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಹೂಡಿಕೆ ಮತ್ತು ಆದಾಯ ಗಳಿಕೆಯ ಬಗ್ಗೆ ಜ್ಞಾನಪ್ರವೃತ್ತರಾಗಬೇಕು ಎಂದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಎಸ್.ಪಿ ತಳವಾರ, ಪ್ರೊ. ಎಸ್.ಎ. ಇನಾಮದಾರ, ಪ್ರೊ. ವಿ.ವಿ.ಪಾಟೀಲ್, ಪ್ರೊ. ಎಸ್.ಎ. ಫಡತರೆ, ಪ್ರೊ. ರಿತೇಶ ಮಾಳಿ ಸೇರಿದಂತೆ 90 ಕ್ಕೂ ಅಧಿಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ವಿ.ಬಿ. ಬುರ್ಲೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಎಸ್.ಎಂ. ಘೋರೆ್ಡ ವಂದಿಸಿದರು.