ಕಾಗವಾಡ

ರಾಜ್ಯಮಟ್ಟದ ವಿಕಲಚೇತನರ ಕಬಡ್ಡಿ ಪಂದ್ಯಾವಳಿ

ರಾಜ್ಯಮಟ್ಟದ ವಿಕಲಚೇತನರ ಕಬಡ್ಡಿ ಪಂದ್ಯಾವಳಿ
ಐನಾಪೂರದ ಕರ್ನಾಟಕ ಜನರಧ್ವನಿ ವೇದಿಕೆಯ ರಮೇಶ ನಾಯಿಕ ಮಾಹಿತಿ ನೀಡುವಾಗ.

ಕಾಗವಾಡ 06: ಐನಾಪೂರದ ಕರ್ನಾಟಕ ಜನರಧ್ವನಿ ವೇದಿಕೆ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಕೂಡ ದ್ವಿತೀಯ ವರ್ಷದ ರಾಜ್ಯಮಟ್ಟದ ವಿಕಲಚೇತನರ ಕಬಡ್ಡಿ ಪಂದ್ಯಾವಳಿಯನ್ನು ಮಾರ್ಚ್ ದಿ. 01 ರಂದು ಮಧ್ಯಾಹ್ನ 3 ಗಂಟೆಗೆ ಐನಾಪೂರ ಪಟ್ಟಣದ ಕೆಬಿಎಸ್ ಸರಕಾರಿ ಕನ್ನಡ ಗಂಡುಮಕ್ಕಳ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಪ್ರಥಮ ಬಹುಮಾನವಾಗಿ 15 ಸಾವಿರ, ದ್ವಿತೀಯ ಬಹುಮಾನವಾಗಿ 10 ಸಾವಿರ ಹಾಗೂ ತೃತೀಯ ಬಹುಮಾನವಾಗಿ 7 ಸಾವಿರ ರೂ. ನಗದು ಬಹುಮಾನ ಮತ್ತು ಟ್ರೋಫಿ ಬಹುಮಾನ ಇಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಐನಾಪೂರ ಗ್ರಾಮದ ಕರ್ನಾಟಕ ಜನರಧ್ವನಿ ವೇದಿಕೆಯ ರಮೇಶ ನಾಯಿಕ ಇವರ ಮೊ ನಂ. 7022850565 ಗೆ ಸಂಪರ್ಕಿಸಿರಿ ಎಂದು ಅಹ್ವಾನಿಸಲಾಗಿದೆ.

ಈಗಾಗಲೇ ಹುಬ್ಬಳ್ಳಿ, ಮೈಸೂರು, ಗದಗ, ವಿಜಯಪುರ, ಅಥಣಿ, ಬೆಳಗಾವಿ ಜಿಲ್ಲೆಯ ಅನೇಕ ತಂಡಗಳು ಸ್ಪರ್ಧಿಸಲು ಸಿದ್ಧವಾಗಿವೆ ಎಂದರು. ಮಾಹಿತಿ ನೀಡುವಾಗ ಮುರುಗೇಶ ಹುಡೇದಾರ, ತುಕಾರಾಮ ಗುರವ, ಮಕ್ತುಮ ಶೇಖ ಉಪಸ್ಥಿತರಿದ್ದರು.

ಸುದ್ದಿ ಓದಿ