ಗುಳೇಗುಡ್ಡ

ಶೆಡ್ ತೆರವಿಗೆ ಪಟ್ಟಬದ್ಧ ಹಿತಾಸಕ್ತಿಗಳ ಹುನ್ನಾರ : ಆರೋಪ

ಶೆಡ್ ತೆರವಿಗೆ ಪಟ್ಟಬದ್ಧ ಹಿತಾಸಕ್ತಿಗಳ ಹುನ್ನಾರ : ಆರೋಪ

ಗುಳೇದಗುಡ್ಡ ಆ.1: ಪಟ್ಟಣದಲ್ಲಿ ಸಂಗಮ-ಸಂಕೇಶ್ವರ ರಾಜ್ಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು  ಅದರ ಪಕ್ಕದಲ್ಲಿರುವ ಶೆಡ್ಡ ತೆರುವುಗೆ ಪಟ್ಟಬದ್ಧ ಹಿತಾಸಕ್ತಿಗಳ ಹುನ್ನಾರವೇ ಕಾರಣವಾಗಿದೆ ಎಂದು ಶೆಡ್ ಮಾಲಿಕ ರವಿ ಬಳಿಗೇರಿ ಹೇಳಿದ್ದಾರೆ. 

ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ನಾನು ಬಡ ನೇಕಾರ. ಪಟ್ಟಣದ ಹೆಸ್ಕಾಂ ಕಚೇರಿ ಹತ್ತಿರದ ತಗಡಿನ ಶೆಡ್‌ನಲ್ಲಿ ಖಾನಾವಳಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದೇನೆ. ಈಗ ಹೆದ್ದಾರಿ ಮಾರ್ಗ ಮಧ್ಯದಲ್ಲಿ ಡಿವೈಡರ್ ಅಳವಡಿಸುವ ಕಾರ್ಯನಡೆಯುತ್ತಿದ್ದು, ಇಲ್ಲಿ ಪಟ್ಟಣದ ಶ್ರೀ ಮುರುಘಾಮಠದ ಲಿಂ.6 ನೇ ಶ್ರೀಗಳ  ಗದ್ದುಗೆ ಇದೆ. ಆದರೆ ಹೆದ್ದಾರಿಗೂ ನನ್ನ ಶೆಡ್‌ಗೂ ಯಾವುದೇ ಸಂಬಂಧವಿಲ್ಲ. ಹೆದ್ದಾರಿಯ ಗಟಾರದ ಆಚೆಗೆ ನನ್ನ ತಗಡಿನ ಶೆಡ್ ಇದೆ. ಆದರೂ ಕೆಲವು ಮುಖಂಡರು ಹಾಗೂ ಶ್ರೀಮಠದ ಪಟ್ಟಭದ್ಧ ಹಿತಾಸಕ್ತಿಗಳು ಜೀವನೋಪಾಯಕ್ಕೆ ನಾನು ಹಾಕಿಕೊಂಡಿರುವ ತಗಡಿನ ಶೆಡ್‌ನ್ನು ತೆರವುಗೊಳಿಸಲು ಹುನ್ನಾರ ನಡೆಸುತ್ತಿದ್ದಾರೆ ರವಿ ಬಳಗೇರಿ ಆರೋಪಿಸಿದರು. 

ಈಗಾಗಲೇ ಹೆದ್ದಾರಿಯ ಎರಡೂ ಬದಿಯಲ್ಲಿ ಗಟಾರ ಪೂರ್ಣಗೊಂಡಿದೆ. ಗಟಾರದ ಆಚೆಗೆ ನನ್ನ ತಗಡಿನ ಶೆಡ್ ಇದ್ದು, ಅತಿಕ್ರಮಣದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಒಂದು ವೇಳೆ ನನ್ನ ಶೆಡ್‌ನ್ನು ತೆರವುಗೊಳಿಸುವುದಾದರೆ ಹೆದ್ದಾರಿಯ ಗಟಾರದ ಪಕ್ಕದಲ್ಲಿ ನಿರ್ಮಾಣಗೊಂಡ ಎಲ್ಲಾ ನಿವೇಶನಗಳನ್ನು ತೆರವುಗಳಿಸಿ, ಅಗಲೀಕರಣ ಮಾಡಿದ ಮೇಲೆ ನನ್ನ ತಗಡಿನ ಶೆಡ್‌ನ್ನು ತೆರವುಗೊಳಿಸಲು ನನ್ನದೇನು ತಕರಾರಿಲ್ಲ. ಒಂದು ವೇಳೆ ಅಧಿಕಾರಿಗಳು ಹಾಗೂ ಪಟ್ಟಭದ್ಧ ಹಿತಾಸಕ್ತಿಗಳು ನನ್ನ ಶೆಡ್‌ನ್ನು ತೆರವುಗೊಳಿಸಲು ಮುಂದಾದರೆ, ಮುಂದಾಗುವ ಅನಾಹುತಕ್ಕೆ ಅಧಿಕಾರಿಗಳು ಹಾಗೂ ಪಟ್ಟಭದ್ಧ ಹಿತಾಸಕ್ತಿಗಳು ನೇರ ಹೊಣೆಗಾರರಾಗುತ್ತಾರೆ ಎಂದು ಅವರು ಎಚ್ಚರಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ದೇವಾಂಗ ಸಮಾಜದ ಶಂಕ್ರಣ್ಣ ಮೇಡಿ, ಅಮಾತೆಪ್ಪ ಕೊಪ್ಪಳ, ಕೇಮಣ್ಣ ಮೇಡಿ, ಪುರಸಭೆ ಸದಸ್ಯ ಶಾಮಸುಂದರ ಮೇಡಿ, ಈರಣ್ಣ ಹವೇಲಿ ಇದ್ದರು.  



ಸುದ್ದಿ ಓದಿ