290 ರೂ. ಪಡೆದು ಅಕ್ಕಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ
ರಾಣಿಬೆನ್ನೂರ 15: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಹಾರ ಭದ್ರತಾ ಯೋಜನೆ ಅಡಿಯಲ್ಲಿ 29 ರೂಪಾಯಿಗಳಿಗೆ 1 ಕೆಜಿ ಅಕ್ಕಿಯಂತೆ 10 ಕೆಜಿ ತೂಕದ ಬ್ಯಾಗಿಗೆ 290 ರೂ.ಗಳನ್ನು ಪಡೆದು ವಿತರಿಸುವ ಕಾರ್ಯಕ್ರಮಕ್ಕೆ ಬುಧವಾರ ನಗರದ ಪೋಸ್ಟ್ ಸರ್ಕಲ್ನಲ್ಲಿ ಮಾಜಿ ಶಾಸಕ ಅರುಣಕುಮಾರ ಪೂಜಾರ ಚಾಲನೆ ನೀಡಿದರು.
ಈ ವೇಳೆ ಭಾರತಿ ಜಂಬಗಿ, ಭಾರತಿ ಅಳವಂಡಿ, ಪರಮೇಶಪ್ಪ ಗೂಳಣ್ಣನವರ, ರಮೇಶ ಗುತ್ತಲ, ಗಂಗಮ್ಮ ಹಾವನೂರು, ದೀಪಕ್ ಹರಪನಹಳ್ಳಿ, ಎ.ಬಿ.ಪಾಟೀಲ, ಪ್ರಭು ತಳವಾರ, ಅಮೋಘ ಬದಾಮಿ, ಪ್ರಕಾಶ್ ಪೂಜಾರ, ಉಮೇಶ ಹೊನ್ನಾಳಿ ಹಾಗೂ ಬಿಜೆಪಿ ನಗರ ಮತ್ತು ಗ್ರಾಮೀಣ ಮಂಡಲದ ಅಧ್ಯಕ್ಷರು, ನಗರಸಭಾ ಸದಸ್ಯರು ಬಿಜೆಪಿ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.