ಹಿಂದೂ ಮಹಾಗಣಪತಿಯ ಶೋಭಾಯಾತ್ರೆ ಮೆರವಣಿಗೆಗೆ ಚಾಲನೆ
ರಾಣಿಬೆನ್ನೂರ:6 ಇಲ್ಲಿಯ ಕಾಕಿ ಗಲ್ಲಿಯ ಶ್ರೀ ವಿಜಯಲಕ್ಷ್ಮೀ ಹವ್ಯಾಸಿ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಗಣಪತಿಯ ಶೋಭಾಯಾತ್ರೆ ಶನಿವಾರ ನಗರದಲ್ಲಿ ಬಹು ವಿಬೃಂಜಣೆಯಿಂದ ಜರುಗಿತು.
ವಿಸರ್ಜನಾ ಮೆರವಣಿಗೆ ಅಂಗವಾಗಿ ಬೆಳಗ್ಗೆಯಿಂದಲೇ ಪೂಜಾ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ನಂತರ ಮದ್ಯಾಹ್ನ ಮಾಜಿ ಶಾಸಕ ಅರುಣಕುಮಾರ ಪೂಜಾರ ತಾವೇ ಸ್ವತಃ ಟ್ಯಾಕ್ಟರ್ ಚಾಲಾಯಿಸುವ ಮೂಲಕ ಶೋಭಾಯಾತ್ರೆ ಮೆರವಣಿಗೆಗೆ ಚಾಲನೆ ನೀಡಿದರು.
ಸಹಸ್ರಾರು ಜನರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಇಲ್ಲಿಂದ ಹೊರಟ ಮೆರವಣಿಗೆಯು ನಾಡಿಗೇರ ಓಣಿ, ಹಳೆ ಸರ್ಕಾರಿ ಆಸ್ಪತ್ರೆ, ಕುರುಬಗೇರಿ ಕ್ರಾಸ್, ದುರ್ಗಾ ಸರ್ಕಲ್, ನೆಹರು ಮಾರುಕಟ್ಟೆ, ಎಮ್.ಜಿ.ರಸ್ತೆ, ಚಕ್ಕಿಮಿಕ್ಕಿ ಸರ್ಕಲ್, ಪೋಸ್ಟ್ ಸರ್ಕಲ್, ಮೇಡ್ಲೇರಿ ಕ್ರಾಸ್, ಬಸ್ ನಿಲ್ದಾಣ, ರಾಜರಾಜೇಶ್ವರಿ ನಗರ ಹಾಗೂ ಹಳೇ ಪಿ.ಬಿ.ರಸ್ತೆ ಮೂಲಕ ತೆರಳಿ ತಾಲೂಕಿನ ಕೋಡಿಯಾಲ ಗ್ರಾಮದ ಬಳಿ ತುಂಗಾಭದ್ರ ನದಿಯಲ್ಲಿ ಗಣೇಶ ವಿಸರ್ಜನೆ ಮಾಡಲಾಯಿತು.
ನಾಸಿಕ್ ಡೋಲ್, ವೀರಗಾಸೆ, ಪುರವಂತರ ಸಮಾಳ ಮೇಳ, ಡೊಳ್ಳು, ಭಜನೆ, ಜನಪದ ನೃತ್ಯ, ಕೇರಳದ ವಾದ್ಯ, ಹನುಮಾನ್ ವೇಷಭೂಷಣಗಳು ಸೇರಿದಂತೆ ಮುಂತಾದ ಕಲಾ ತಂಡಗಳು ಹಾಗೂ ಯುವಕ-ಯುವತಿಯರಿಗೆ ಡಿಜೆ ಶೋಭಾಯಾತ್ರೆ ವಿಶೇಷ ಆಕರ್ಷಣೆಯಾಗಿದ್ದವು.
ಸಮಿತಿ ಅಧ್ಯಕ್ಷ ಲಿಂಗರಾಜ ಬೂದನೂರು, ಕಾಕಿ ಜನಸೇವಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಕಾಕಿ, ಪ್ರಕಾಶ ಕಾಕಿ, ಸಂತು ಸುಣಗಾರ, ಅಭಿಲಾಷ ಬ್ಯಾಡಗಿ, ನಾಗರಾಜ ಕಾಕಿ, ರಾಮಣ್ಣ ಕಾಕಿ, ಮಂಜುನಾಥ ಅಜ್ಜೇವಡಿ, ಮಂಜುನಾಥ ಕಬ್ಬಿಣಕಂತಿಮಠ, ಅಮೋಘ ಬಾದಾಮಿ, ಶೇಖಪ್ಪ ಕಾಕಿ, ಜಗದೀಶ ಬಣಗಾರ, ಉಮೇಶ ಕಾಕಿ, ರೂಪಾ ಕಾಕಿ, ಶ್ರೀಧರ ಅಮಾಸಿ, ವೆಂಕಟೇಶ ಸಾಲಗೇರಿ, ವಿಷ್ಟು ಸುರಹೊನ್ನೆ, ರೋಹಿತ್ ಮಳೇಮಠ, ಕೊಟ್ರೇಶ ಅಜ್ಜೇವಡಿಮಠ, ಅಮಿತ್ ಕಾಕಿ, ಕೆ.ಶಿವಶಂಕರ, ಮಾಲತೇಶ ಗಡಾದ, ಗಜೇಂದ್ರ ಕಾಕಿ, ಸಿದ್ದಪ್ಪ ಬುದನೂರು, ಸಂಜೀವ ಮಸಿಯಪ್ಪನವರ, ಪಂಚಾಕ್ಷರಿ ಮುದಗಲಮಠ ಸೇರಿದಂತೆ ಸಾವಿರಾರು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಪೊಲೀಸರು ಮೆರವಣಿಗೆಗೆ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.