ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಸಿಎ ಕೋರ್ಸ್ ಆರಂಭಕ್ಜೆ ಚಾಲನೆ
ರಾಣೇಬೆನ್ನೂರು 28: ಶಿಕ್ಷಣ ವ್ಯವಸ್ಥೆಯಲ್ಲಿ ಸಮರ್ಕವಾಗಿದ್ದರೆ ಯಾರೊಬ್ಬರೂ ಬೇರೆ ಕಡೆ ಹೋಗಿ ಶಿಕ್ಷಣ ಪಡೆಯುವ ಅಗತ್ಯವಿರುವುದಿಲ್ಲ ಎಂದು ವಿಧಾನಸಭಾ ಕ್ಷೇತ್ರದ ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು. ಅವರು ನಗರ ಹೂರ ವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಬಿಸಿಎ ಕೋರ್ಸ್ ತರಗತಿ ಆರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ನಗರ ದಿನದಿಂದ ದಿನಕ್ಕೆ ಅತಿ ವೇಗವಾಗಿ ಬೆಳವಣಿಗೆಯ ಜೊತೆಗೆ ಅಭಿವೃದ್ಧಿ ಹೊಂದುತ್ತಿರುವುದು ಎಲ್ಲರಿಗೂ ಸಂತೋಷ ತರುವ ಸಂಗತಿ. ಬಿಸಿಎ ಕೋರ್ಸಿನ ವಿಷಯವಾಗಿ ನಗರದ ಅನೇಕ ಗಣ್ಯರು, ಕಾಲೇಜಿನ ವಿದ್ಯಾರ್ಥಿಗಳು, ಕನ್ನಡ ಪರ ಸಂಘಟನೆಗಳು ತಮ್ಮ ಗಮನಕ್ಕೆ ತಂದಿದ್ದರು. ಅದಕ್ಕಾಗಿ ತಾವು ಉನ್ನತ ಶಿಕ್ಷಣ ಸಚಿವರೊಂದಿಗೆ ಹಾಗೂ ಮುಖ್ಯಮಂತ್ರಿಗಳೊಂದಿಗೆ ಈ ಕುರಿತು ಪ್ರಸ್ತಾವನೆ ಸಲ್ಲಿಸಿದ್ದೆನು ಸಾರ್ವಜನಿಕರ ಬಹುದಿನಗಳ ಈ ಬೇಡಿಕೆಯನ್ನು ಈಡೇರಿಸಲು ಈಗಾಗಲೇ ಸರಕಾರ ಅನುಮತಿ ನೀಡಿದೆ ಎಂದರು. ನಗರ ಮತ್ತು ತಾಲೂಕಿನ ಜನರ ಕನಸನ್ನು ನನಸಾಗಿಸಿದ್ದೇವೆ. ಬಿಸಿಎ ಕೋರ್ಸ್ಗಗೆ ಕಾಲೇಜಿನಲ್ಲಿ ಯಾವುದೇ ಸಂಪನ್ಮೂಲಗಳ ಕೊರತೆ ಇಲ್ಲ. ಎರಡು ಹೈಟೆಕ್ ಕಂಪ್ಯೂಟರ್ ಪ್ರಯೋಗಾಲಯ, ಪೀಠೋಪಕರಣ, ಯುಪಿಎಸ್ ಸೇರಿ ಪ್ರಮುಖ ಸಂಪನ್ಮೂಲಗಳು ಇಲ್ಲಿವೆ ಎಂದರು ತಾಲೂಕಿನ ಜನತೆ ಆರ್ಥಿಕ ಸಮಸ್ಯೆಯಿಂದಾಗಿ ಬಿಸಿಎ ಶಿಕ್ಷಣ ಪಡೆಯಲು ಸಾಧ್ಯವಾಗದಂತಹ ಪರಿಸ್ಥಿತಿ ಬಹುಜನರಲ್ಲಿ ಇತ್ತು ಇದಕ್ಕಾಗಿ ಬಹುದೂರದ ಹಾವೇರಿ, ದಾವಣಗೆರೆ, ಶಿವಮೊಗ್ಗ ಹುಬ್ಬಳ್ಳಿ ಮತ್ತಿತರ ಕಡೆ ಹೋಗಬೇಕಾಗಿತ್ತು. ಇಂದು ಬೇರೆ ಎಲ್ಲಿ ಹೋಗಬೇಕಾಗಿಲ್ಲ ಇದರ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳಲು ಮುಂದಾಗಬೇಕು ಎಂದರು. ಕಾಲೇಜಿನಲ್ಲಿ ಆರಂಭವಾಗಿರುವ ಈ ಕೋರ್ಸಿನಿಂದಾಗಿ ಬಿ ಸಿ ಎ ಅತ್ಯಂತ ಸರಳವಾಗಿ ಯಾವುದೇ ಅಧಿಕ ಆರ್ಥಿಕ ವೆಚ್ಚಭಾರವಿಲ್ಲದೆ ಶಿಕ್ಷಣ ಹೊಂದಬಹುದಾಗಿದೆ ಎಂದ ಪ್ರಕಾಶ್ ಕೋಳಿವಾಡ ಅವರು ಕಾಲೇಜಿನಲ್ಲಿ ಉತ್ತಮವಾದ ಸಿಬ್ಬಂದಿಗಳಿದ್ದಾರೆ ಮೊದಲು ಬಂದವರಿಗೆ ಇಲ್ಲಿ ಮೊದಲು ಅವಕಾಶ ನಿರುದ್ಯೋಗ ಮುಕ್ತ ಕನಸು ತಮ್ಮದಾಗಿದ್ದು, ಅದನ್ನು ನನಸಾಗಿಸಲು ಇದರ ಬಳಕೆ ಆಗಬೇಕು ಎಂದು ಕೋರಿದರು.