ಕಾಗವಾಡ

ಬ್ರೆಜಿಲ್‌ನ ಓದ್ಯೋಗಿಕ ಅಧ್ಯಯನ ತಂಡದಲ್ಲಿ ಶ್ರೀನಿವಾಸ, ಯೋಗೇಶ ಭಾಗಿ

ಬ್ರೆಜಿಲ್‌ನ ಓದ್ಯೋಗಿಕ ಅಧ್ಯಯನ ತಂಡದಲ್ಲಿ ಶ್ರೀನಿವಾಸ, ಯೋಗೇಶ ಭಾಗಿ

ಶೇಡಬಾಳ 28: ಬ್ರೆಜಿಲ್‌ನ ಸಕ್ಕರೆ ಮತ್ತು ಇಥೆನಾಲ್ ಪ್ಲಾಂಟಗಳ ಬಗ್ಗೆ ಅಧ್ಯಯನ ಮಾಡಲು ಹಾಗೂ ಇಥೆನಾಲ್‌ನ ನಿಯಮಗಳನ್ನು ಭಾರತದಲ್ಲಿ ಅಳವಡಿಸಲು ಮತ್ತು ಫ್ಲೆಕ್ಷಿ ಇಂಧನ ಮತ್ತು ಹೈಬ್ರಿಡ್ ಇಂಜಿನ ಬಗ್ಗೆ ತಿಳಿಯಲು ಬ್ರೆಜಿಲ್‌ಗೆ ಕೈಗೊಳ್ಳಲಾದ ಪ್ರವಾಸದಲ್ಲಿ ಯುವ ಮುಖಂಡ ಶ್ರೀನಿವಾಸ ಪಾಟೀಲ ಮತ್ತು ಯೋಗೇಶ ಪಾಟೀಲ ಭಾಗಿಯಾಗಿದ್ದಾರೆ. 

ಕಾಗವಾಡ ಮತಕ್ಷೇತ್ರದ ಯುವ ನಾಯಕರು ಹಾಗೂ ಅಥಣಿ ಶುಗರ್ಸ್‌ ಲಿಮಿಟೆಡ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಶ್ರೀಮಂತ ಪಾಟೀಲ ಹಾಗೂ ಅಥಣಿ ಶುಗರ್ಸ್‌ ಲಿಮಿಟೆಡ್ ಕಾರ್ಖಾನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಯೋಗೇಶ ಪಾಟೀಲ ಅವರು ಹಲವಾರು ಸಕ್ಕರೆ ಕಾರ್ಖಾನೆಯ ಚೇರಮನ್‌ರು ಮತ್ತು ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಬ್ರೆಜಿಲ್‌ಗೆ ಭೇಟಿ ನೀಡಿ, ಅಲ್ಲಿಯ ವ್ಯವಸ್ಥೆಗಳನ್ನು ವೀಕ್ಷಿಸಿದರು. ಸಭೆಯಲ್ಲಿ ಯುಎನ್‌ಐಸಿಎ ಚೇರಮನ್ ಎವಾನ್ದ್ರೋ ಗುಸ್ಸಿ, ಯುಎನ್‌ಐಸಿಎದ ನಿರ್ದೇಶಕರು, ಕಾರ್ಯನಿರ್ವಾಹಕರು, ಸಲಹೆಗಾರರು, ಎಚ್‌ಪಿ ಕಂಪನಿಯಿಂದ ಸುವೇಂದ್ರ ಗುಪ್ತ, ಶ್ರೀಧರ್ ಮತ್ತು ಸದಸ್ಯರು, ಎಸ್‌ಐಎಂ ಚೇರಮನ್ ಮಿಸ್ಟರ್ ಬ್ಯಾನರ್ಜಿ, ಐಎಸ್‌ಎಂಎ ಚೇರಮನ್ ಝುನಝುನವಾಲಾ, ಇಂಡಿಯನ್ ಎಂಬೆಸಿಯ ಮಿಸ್ಟರ್ ಪ್ರಧಾನ್ ಹಾಗೂ ಭಾರತ ಸರ್ಕಾರದ ಆಹಾರ ಮತ್ತು ಸಾಗಾಣಿಕೆಯ ಸೆಕ್ರೆಟರಿ ಮಿಸ್ಟರ್ ಜ್ಯೂವೆಲ್ ಮತ್ತು ಎಲ್ಲ ಸಕ್ಕರೆ ಕಾರ್ಖಾನೆಯ ಚೇರಮನ್‌ರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಉಪಸ್ಥಿತರಿದ್ದರು. 


ಸುದ್ದಿ ಓದಿ