ಇಂಡಿ

ಪಿಎಸ್‌ಐ ಆಗಿ ನೇಮಕವಾದ ಶ್ರೀಕಾಂತಗೆ ಸನ್ಮಾನ

ಪಿಎಸ್‌ಐ ಆಗಿ ನೇಮಕವಾದ ಶ್ರೀಕಾಂತಗೆ ಸನ್ಮಾನ



ಇಂಡಿ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸುಗಳಿಸಬೇಕಾದರೆ ನಿತ್ಯವು ನಿರಂತರ ಶ್ರಮ, ಸತತ ಅಧ್ಯಯನ,ವಿಷಯಗಳಲ್ಲಿ ಆಯ್ಕೆ ಮಾಡಿಕೊಂಡು ಅಧ್ಯಯನ ಜೊತೆಗೆ ಶೀಘ್ರವಾದ ಬರವಣೆಗೆ ಸಹ ಬೇಕೆಂದು  ಪಿಎಸ್‌ಐ ಹುದ್ದೆಗೆ ಇತ್ತೀಚೆಗೆ ಆಯ್ಕೆಯಾದ ಇಂಡಿ ತಾಲೂಕಿನ ಬಬಲಾದ ಗ್ರಾಮದ ಶ್ರೀಕಾಂತ ಸಿದ್ದಪ್ಪ ಪೂಜಾರಿ ಹೇಳಿದರು.  

ಅವರು ಬುಧವಾರ ಪಟ್ಟಣದ ಅಕ್ಕಮಹಾದೇವಿ ಸೌಹಾರ್ದ ಸಹಕಾರಿ ಆಡಳಿತ ಮಂಡಳಿತ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. 

ಎರಡು ಬಾರಿ ಪಿಎಸ್‌ಐ ಹುದ್ದೆಗೆ ಸ್ಪರ್ಧೆ ಮಾಡಿದ್ದೆ ಆದರೆ ಕೆಲವೇ ಅಂಕಗಳು ಕಡಿಮೆಯಾಗಿ ಆಯ್ಕೆಯಾಗಲಿಲ್ಲ. ಆದರೂ ನಾನು ಧೈರ್ಯ ಬಿಡಲಿಲ್ಲ. ಪ್ರಯತ್ನಿಸೋಣ ಎಂದು ಸತತವಾಗಿ ಓದು ಹಾಗೂ ವ್ಯಾಯಾಮ ಮಾಡುವಲ್ಲಿ ನಿರತನಾದೆ ನನ್ನ ಮನೆಯವರೆಲ್ಲ ಓದಲು ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದರು. ಹೀಗಾಗಿ ನಾನು ಸತತ ಪರಿಶ್ರಮಪಟ್ಟು ಓದಿದ ಪರಿಣಾಮವೇ ನಾನು ಪಿಎಸ್‌ಐ ಆಗಲು ಕಾರಣವಾಯಿತು ಎಂದರು. 

ನಾನು ಸಹ ಬಡವನೆ.  ಸಾಧಿಸಲು ಬಡತನ ಅಡ್ಡಿಯಾಗಲ್ಲ. ಪರಿಶ್ರಮಪಟ್ಟರೆ ಖಂಡಿತ ಯಶಸ್ಸು ಸಿಗುತ್ತದೆ. ಬಡತನದಲ್ಲಿ ಬೆಳೆದು ಬಂದ ನನಗೆ ಬಡ-ಜನರ ಸೇವೆ ಮಾಡಲು ಅವಕಾಶ ಸಿಕ್ಕಿದೆ. ನನ್ನ ಕೈಲಾದಷ್ಟು ಒಳಿತು ಮಾಡುತ್ತ ನನ್ನ ಸೇವೆ ಮಾಡುತ್ತೇನೆ ಎಂದರು. 

ಅಕ್ಕಮಹಾದೇವಿ ಸೌಹಾರ್ದದ ಅಧ್ಯಕ್ಷ ಉಮೇಶ ಬಳಬಟ್ಟಿ, ಉಪಾಧ್ಯಕ್ಷ ಯಲಗೊಂಡ ಬೇವನೂರ, ಶಿವಾನಂದ ಚಾಳೀಕಾರ, ಯಲಗೊಂಡ ಪೂಜಾರಿ, ಚಂದ್ರಾಮ ಮೇಡೇದಾರ, ಶ್ರೀಕಾಂತ ಗಡಗಲಿ, ಸಚಿನ್ ಮೇಡೇದಾರ, ರೇವಣಸಿದ್ದ ಪೂಜಾರಿ, ಮಲಕಾರಿ ಪೂಜಾರಿ, ರಾಜು ನಾಯ್ಕೋಡಿ ಮತ್ತಿತರರು ಇದ್ದರು. 


ಸುದ್ದಿ ಓದಿ