ರಾಣೆಬೆನ್ನೂರ

ಶ್ರೀಗುರು ಮಾರ್ಕಂಡೇಶ್ವರ ಸೌಹಾರ್ದ ಸಹಕಾರಿಗಳ ವಾರ್ಷಿಕ ಸಭೆ

ಶ್ರೀಗುರು ಮಾರ್ಕಂಡೇಶ್ವರ ಸೌಹಾರ್ದ ಸಹಕಾರಿಗಳ ವಾರ್ಷಿಕ ಸಭೆ

ರಾಣೆಬೆನ್ನೂರು 30:  ದೇಶದ ಪರಿಪೂರ್ಣ ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಶ್ರೀಗುರು ಮಾರ್ಕಂಡೇಶ್ವರ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಹನುಮಂತಪ್ಪ ಮುಕ್ತೆನಹಳ್ಳಿ ಹೇಳಿದರು. ಅವರು ಇತ್ತೀಚಿಗೆ ಇಲ್ಲಿನ ಕೆಬಿ ರಸ್ತೆಯಲ್ಲಿರುವ, ಸಹಕಾರಿ ಬ್ಯಾಂಕಿನ ಸಭಾಭವನದಲ್ಲಿ ನಡೆದ  ಸರ್ವ ಸದಸ್ಯರ, ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಕಾರಿ ತತ್ವದ ಬೆಳವಣಿಗೆ  ಉತ್ತರ ಕರ್ನಾಟಕದಿಂದಲೇ ಆರಂಭವಾಗಿದ್ದು, ಬಹುದೊಡ್ಡ ಇತಿಹಾಸ ಹೊಂದಿದೆ, ಪ್ರಗತಿ ಕಂಡು, ಇಂದು ಎಲ್ಲಾ ಸಹಕಾರಿ ಸೌಹಾರ್ದ ಸಂಘಟನೆಗಳು ಜನಸಾಮಾನ್ಯರ ಸೇವೆಯಲ್ಲಿ ತಮ್ಮನ್ನೆ ತಾವು ತೊಡಗಿಸಿಕೊಂಡು, ಉದ್ದೇಶಿತ ಯೋಜನೆ ಸಾಕಾರಗೊಳಿಸುತ್ತಿದೆ ಎಂದರು. ಯಾವುದೇ ಸಹಕಾರ ಸಂಘಗಳ ಬೆಳೆಯಬೇಕಾದರೆ, ಸದಸ್ಯತ್ವ ಹೊಂದಿರುವವರು, ದೂರದೃಷ್ಟಿಯಿಂದ ತಮ್ಮ ಕಾರ್ಯನಿರ್ವಹಿಸಬೇಕಾಗುತ್ತದೆ ಅಂತಹ ಸಂಸ್ಥೆಗಳು, ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಾಗುವುದು ಎಂದ ಅವರು ಎಲ್ಲರ ಸಹಕಾರದಿಂದ  ಹಣಕಾಸು ಸಂಸ್ಥೆ ಉತ್ತಮವಾಗಿ ಬೆಳವಣಿಗೆ ಕಂಡು ಪ್ರಗತಿ ಸಾಧಿಸುತ್ತಿದೆ ಎಂದರು. ಪದ್ಮಶಾಲಿ ಸಮಾಜದ ಅಧ್ಯಕ್ಷ ನಾಗರಾಜ ಅಗಡಿ,  ಪ್ರಾಂತಿಯ ಅಧ್ಯಕ್ಷ, ಕೆ.ಕೆ. ಹಳ್ಳಳ್ಳಿ, ಉಪಾಧ್ಯಕ್ಷ ಲಕ್ಷ್ಮಣ್ ಕಡ್ಲೆಬಾಳ, ಶಂಕ್ರ​‍್ಪ ಗರಡಿಮನಿ, ಮಂಜುನಾಥ್ ಹುಬ್ಬಳ್ಳಿ, ಎಲ್ಲಪ್ಪ ಗುತ್ತಲ್, ಎಲ್ಜಿ. ಶೆಟ್ರ, ಮತ್ತಿತರರು ಮಾತನಾಡಿದರು. ವೇದಿಕೆಯಲ್ಲಿ ಶಿವಣ್ಣ ಬಡೇಂಕಲ್, ಬಸವರಾಜಪ್ಪ ನೇಕಾರ್, ಮಾರುತಿ ಗರಡಿಮನಿ, ಪರಶುರಾಮ ಅಗಡಿ,  ಮೊದಲಾದವರು ಉಪಸ್ಥಿತರಿದ್ದರು. ಚೇತನಾ ಮಂಜುಳಾ ಸಂಗಡಿಗರು ಪ್ರಾರ್ಥಿಸಿದರು. ಅಜಯ್ ಹುಲ್ಲತ್ತಿ ಸ್ವಾಗತಿಸಿದರು. ಪ್ರೇಮನಾಥ್ ಲದ್ವಾ ಪ್ರಾಸ್ತಾವಿಕವಾಗಿ ಮಾತನಾಡಿದರು, ಇದೇ ಸಂದರ್ಭದಲ್ಲಿ ಸಾಧಕ ಸಹಕಾರಿಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು. 


ಸುದ್ದಿ ಓದಿ