ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಶ್ರೀದೇವಿ ಪುರಾಣ ಪ್ರವಚನ ಆರಂಭ
ರಾಣೆಬೆನ್ನೂರು 29: ಇಲ್ಲಿನ ಶ್ರೀಸಿದ್ಧೇಶ್ವರ ನಗರದ ಪದ್ಮಶಾಲಿ ಸಮಾಜದ ಶ್ರೀಗುರು ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ದಸರಾ ಹಬ್ಬದ ನಿಮಿತ್ತ ಪ್ರತಿವರ್ಷದಂತೆ ಈ ವರ್ಷವೂ ಸಹ ಪ್ರತಿನಿತ್ಯ ಸಂಜೆ 6.30 8:30 ರವರೆಗೆ ಶ್ರೀದೇವಿ ಪುರಾಣ ಪ್ರವಚನ ಧಾರ್ಮಿಕ ಕಾರ್ಯಕ್ರಮ ಆರಂಭವಾಗಿದೆ.
ಕಳೆದ 26ರಿಂದ ಆರಂಭಗೊಂಡಿರುವ ದಸರಾ ಘಟಸ್ಥಾಪನೆ ಪುರಾಣ ಪ್ರವಚನಗಳು ಅಕ್ಟೋಬರ್ 4ರ ವರೆಗೆ ನಡೆಯಲಿದೆ. ಪುರಾಣ ಪ್ರವಚನವನ್ನು ಸಮಾಜದ ಮುಖಂಡರಾದ ನಾಗರಾಜ ಅಗಡಿ ಹನುಮಂತಪ್ಪ ಮುಕ್ತೆನಹಳ್ಳಿ ಮತ್ತು ಗಣ್ಯರು ಸಾಮೂಹಿಕವಾಗಿ ಪೂಜೆ ಸಲ್ಲಿಸುವ ಮೂಲಕ, ಘಟಸ್ಥಾಪನೆ ನೆರವೇರಿಸಿ, ಪ್ರವಚನ ಆರಂಭಕ್ಕೆ ಚಾಲನೆ ನೀಡಿದರು. ಗದಗ ಜಿಲ್ಲೆಯ ರೋಣ ದ ಶ್ರೀ ಗುರುಬಸಪ್ಪ ಮಠದ ವೇದಮೂರ್ತಿ ಮಲ್ಲಯ್ಯನವರು ಗುರು ಬಸಯ್ಯನವರು ಅವರು ಪುರಾಣಪ್ರವಚನ ಆರಂಭಿಸಿದರು. ಈ ಸಂದರ್ಭದಲ್ಲಿ ಸಮಾಜದ ಗಣ್ಯರಾದ ಹನುಮಂತಪ್ಪ ಸುಂಕಾಪುರ, ಶಂಕ್ರಣ್ಣ ಗರಡಿಮನಿ, ಶಿವಣ್ಣ ಬಡೇಂಕಲ್, ಮಂಜುನಾಥ ಹುಬ್ಬಳ್ಳಿ, ಲಕ್ಷ್ಮಣ್ ಕಡ್ಲೆಬಾಳ, ಪರಶುರಾಮ ಅಗಡಿ, ಎಲ್ಲಪ್ಪ ಗುತ್ತಲ್, ಮಾರುತಿ ಗರಡಿಮನಿ, ಬಸವರಾಜ ಐರಣಿ, ನಿಮ್ಮಣ್ಣ ಗರಡಿಮನಿ, ಪ್ರವೀಣ್ ಗುತ್ತೂರ್, ಕರಬಸಪ್ಪ ಬೆಳ್ಳಟ್ಟಿ ಕರಿಬಸಪ್ಪ ಕಡ್ಲಿ ಬಾಳ, ನಾಗಪ್ಪ ಗಿರಣಿ, ನಾಗರಾಜ್ ಕಡ್ಲಿ ಬಾಳ, ಚನ್ನಬಸಮ್ಮ ಕಾಮಣ್ಣ ನವರ್, ಶಶಿಕಲಾ ಬಡೇಂಕಲ್, ದ್ರಾಕ್ಷಾಯಿಣಿ ಮುಕ್ತೆನಹಳ್ಳಿ, ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.