ರಾಣೆಬೆನ್ನೂರ

ಶ್ರೀರಾಮ, ಜಯ ರಾಮ, ಜಯ ಜಯ ರಾಮ ತಾರಕ ಮಂತ್ರವಾಗಿದೆ: ದತ್ತಾತ್ರೇಯ ಸ್ವಾಮೀಜಿ.

ಶ್ರೀರಾಮ, ಜಯ ರಾಮ, ಜಯ ಜಯ ರಾಮ ತಾರಕ ಮಂತ್ರವಾಗಿದೆ: ದತ್ತಾತ್ರೇಯ ಸ್ವಾಮೀಜಿ.

ರಾಣೇಬೆನ್ನೂರು 01:  ಭವ ಬಂಧನವನ್ನು ಅತ್ಯಂತ ಸರಳವಾಗಿ ದಾಟಲು ಶ್ರೀರಾಮ, ಜಯ ರಾಮ, ಜಯ ಜಯ ರಾಮ ನಿತ್ಯ ಸ್ಮರಣೆಯು   ತಾರಕ ಮಂತ್ರವಾಗಿದೆ. ಮನುಕುಲದ ಉದ್ಧಾರ ಶ್ರೀ ರಾಮ, ಜಯ ರಾಮ ಜಯ, ಜಯ ರಾಮ  ಸ್ಮರಣೆಯಿಂದ ಮಾತ್ರ ಸಾಧ್ಯವಾಗುವುದು ಎಂದು ಶ್ರೀ ದತ್ತಾತ್ರೇಯ ವಾಸುದೇವ ಜಿಯರ್ ನುಡಿದರು. ಅವರು, ಗುರುವಾರ ಇಲ್ಲಿನ ಹಲಗೇರಿ ರಸ್ತೆಯ, ಬಿಎ.ಜೆ. ಎಸ್‌. ಎಸ್, ಸಮೂಹ ಶಿಕ್ಷಣ  ಸಂಸ್ಥೆ, ಮಾತಾ ಗಾಯಿತ್ರಿ, ಸಭಾಂಗಣದಲ್ಲಿ ನಡೆದ, ಸಂಚಾರಿ ರಾಮಾಂಜನೇಯ ಸ್ವಾಮೀಜಿಯವರ ನಿತ್ಯ ಜಪ ಅನುಷ್ಠಾನ,  ಗುರುವಂದನಾ, ಕನಕದಾಸರ ಆರಾಧನೆ, ಹಾಗೂ ಶ್ರೀರಾಮದೇವರ ಭಾವಚಿತ್ರ ಲೋಕಾರೆ​‍್ಣ, ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.              

 ಶ್ರೀರಾಮದೇವರ, ಆಚಾರ್ಯ ರಾಮಾನುಜಾಚಾರ್ಯರ ಸಿದ್ಧಾಂತವನ್ನು ಪರಿಪಾಲಿಸುತಿದ್ದೇವೆ ಮನುಕುಲದ ಉದ್ಧಾರಕ್ಕಾಗಿ ದೇಶ ಸಂಚಾರ ಮಾಡಿ, ಸುಕ್ಷೇತ್ರವನ್ನು ಸ್ಥಾಪಿಸಲಾಗಿದೆ. ಶ್ರೀ ರಾಮ ದೇವರು ಅಂತರಾತ್ಮದಲ್ಲಿ ಕುಳಿತು ನಡೆಸುತ್ತಿದ್ದಾನೆ ಎಂದರು. ರಾಮನು ಮನುಕುಲದ ಎಲ್ಲರ ಉದ್ಧಾರಕ್ಕಾಗಿ ಮಾಣಿಕ್ಯನಾಗಿ, ತನ್ನ  ಆಶೀರ್ವಾದವನ್ನು ಮಾಡುತ್ತಿದ್ದಾನೆ.  ನಿತ್ಯವೂ,ನಿರಂತರವಾಗಿ, ಕ್ಷಣ  ಕಾಲ ಶ್ರೀರಾಮ, ಜಯರಾಮ, ಜಯ ಜಯ ರಾಮ ನಾಮ  ಸ್ಮರಣೆ ಮಾಡಬೇಕು ಇದರಿಂದ ಬಂದಿರುವ ಎಲ್ಲ ಕಷ್ಟಗಳು, ವಾಯುವಿನಂತೆ ಧೂರವಾಗಲಿದೆ ಎಂದು ಸ್ವಾಮೀಜಿ ನುಡಿದರು.             

 ಭಾರತೀಯರ ಪರಂಪರೆ ಸನಾತನ ಧರ್ಮದ ಪರಂಪರೆ ರಾಮನಾಮ ಜಪ ರಾ ಅನ್ನುವ ಅಕ್ಷರ ಉಚ್ಚಾರಣೆಯಿಂದ ಅಹಂಕಾರ ಹೊರಟು ಹೋಗುತ್ತದೆ. ದೇವನೊಬ್ಬ ನಾಮ ಹಲವು, ಆದರೆ ಇಂದಿನ ಆಧುನಿಕ ವ್ಯವಸ್ಥೆಯಲ್ಲಿ, ಪಂಗಡಗಳು ಬೆಳದಿವೆ, ಪಂಗಡಿಗರಲ್ಲಿ ಒಂದೊಂದು ದೇವರನ್ನು ಆರಾಧಿಸುತ್ತಿದ್ದಾರೆ. ಯಾವುದೇ ಆರಾಧನೆಗೆ, ಮೊದಲು ರಾಮ ಸ್ಮರಣೆ ಮೂಲ ಮಂತ್ರವಾಗಿದೆ ಎಂದರು. ರಾಮಮೂರ್ತಿ ಪರಮ ಮಂಗಳಮೂರ್ತಿಯಾಗಿದೆ. ರಾಮನ  ಆರಾಧನೆಯಿಂದ ಮನುಕುಲದ ಉದ್ದಾರವಾಗುತ್ತದೆ. ಕಲಿಯುಗದಲ್ಲಿ ಭವಸಾಗರ ದಾಟಿಸಿದ ಮಂತ್ರ ಶ್ರೀ ರಾಮ ಜಯ ರಾಮ,ಜಯ, ಜಯ ರಾಮ ಶ್ರೀರಾಮ ಮಂತ್ರ ಪ್ರಮುಖವಾಗಿದೆ ಎಂದು ಸ್ವಾಮೀಜಿಯವರು ಇತಿಹಾಸವನ್ನು ಉಲ್ಲೇಖಿಸಿ, ಸಾಧ್ಯಾಂತವಾಗಿ ಮಾತನಾಡಿದರು.             

  ಪ್ರಾಸ್ತಾವಿಕವಾಗಿ ಮಾತನಾಡಿದ, ಬಿ.ಎ. ಜೆ. ಎಸ್‌. ಎಸ್‌. ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ, ಡಾ: ಆರ್‌.ಎಂ. ಕುಬೇರ​‍್ಪ, ಅವರು, ಶಿಕ್ಷಣ ಸಂಸ್ಥೆ ಇತಿಹಾಸದಿಂದಲೂ, ಧರ್ಮದ, ಆಧ್ಯಾತ್ಮದ, ನೆಲಗಟ್ಟಿನಲ್ಲಿ ಸ್ಥಾಪಿತವಾಗಿದ್ದು, ಧರ್ಮ ಸಂಸ್ಕಾರದ ಮತ್ತು ಧರ್ಮಾಚರಣೆಯ  ಕಾರ್ಯಗಳ ಮೂಲಕ ಸಾಗಿದೆ. ಅದೇ ರೀತಿ ಕಳೆದ 16 ವರ್ಷಗಳ ಹಿಂದೆ ಕೋಟಿ ಗಾಯತ್ರಿ  ಜಪ ಯಜ್ಞದ ಮೂಲಕ ಇಲ್ಲಿ ಗಾಯಿತ್ರಿ ಮಾತೆಯನ್ನು ಪ್ರತಿಷ್ಠಾಪಿಸಲಾಗಿದೆ. ನಿತ್ಯವೂ ಸಾವಿರಾರು ವಿದ್ಯಾರ್ಥಿಗಳು ಗಾಯಿತ್ರಿ ಮೂಲ ಮಂತ್ರವನ್ನು  ಉಚ್ಚರಿಸಿ, ಮುಂದೆ ಸಾಗುವ ಪರಿಪಾಠವನ್ನು ಹಾಕಿ ಕೊಟ್ಟಿದ್ದೇವೆ ಪರಿಣಾಮ  ಉಪನ್ಯಾಸಕರು,  ಮತ್ತು ವಿದ್ಯಾರ್ಥಿಗಳು, ತಮ್ಮ ಶೈಕ್ಷಣಿಕ ಕಾರ್ಯ ಚಟುವಟಿಕೆಗಳು ಗಾಯಿತ್ರಿ ಜಪ ಮಂತ್ರದಿಂದಲೇ ಆರಂಭವಾಗುವುದು ಈ ಸಂಸ್ಕಾರ  ನಮ್ಮ ಹೆಮ್ಮೆ ಅಲ್ಲದೆ ಶಿಕ್ಷಣ ಸಂಸ್ಥೆಯ ಪ್ರಗತಿಗೆ ಧಾರ್ಮಿಕ ನೆಲೆಗಟ್ಟು ಪ್ರಮುಖವಾಗಿದೆ ಎಂದರು.         

ಸಂತರು, ಶರಣರು, ಸತ್ಪುರುಷರು ಭಾರತೀಯರ ಸಂಸ್ಕೃತಿ, ಅದರ ಅಡಿಯಲ್ಲಿ ಸಾಗಿದಾಗ ಮಾತ್ರ ಮಾನವನ ಜೀವನ ಸಾರ್ಥಕತೆ ಪಡೆಯಲಿದೆ ಆ ತತ್ವ ಸಿದ್ಧಾಂತವನ್ನು ನಂಬಿ ಮುನ್ನಡೆಯುತ್ತಿದ್ದೇವೆ ಆದ್ದರಿಂದಲೇ ಸಂಸ್ಥೆಯ ಎಲ್ಲ ನೌಕರರು, ಮತ್ತು ವಿದ್ಯಾರ್ಥಿ ಸಮುದಾಯ ಮಾನಸಿಕ ಶಾಂತಿ, ನೆಮ್ಮದಿಯಿಂದ ಜೀವನ ಸಾಗಿಸುವಂತಾಗಿದೆ ಇಂದಿನಿಂದ ಶ್ರೀರಾಮ, ಜಯರಾಮ, ಜಯ ಜಯ ರಾಮ ಸ್ಮರಣೆಯು , ಆರಾಧನೆಯಾಗಲಿದೆ ಎಂದರು.           ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕರ್ನಾಟಕ ಸರ್ಕಾರದ ಉಪ ಸಭಾಪತಿ ರುದ್ರ​‍್ಪ. ಮಾ. ಲಮಾಣಿ ಅವರು, ಶ್ರೀ ದತ್ತಾತ್ರೇಯ ವಾಸುದೇವ  ಜಿಯರ್ ಸ್ವಾಮಿಜಿವರಿಂದ ಗೌರವ ಸ್ವೀಕರಿಸಿದರು. ವೇದಿಕೆಯಲ್ಲಿ ಕಾಲೇಜು ಉಪನ್ಯಾಸಕರಾದ ಕೆ.ಕೆ. ಹಾವಿನಾಳ,, ಸಲಹೆಗಾರ ಎಚ್‌.ಎಸ್‌. ಭಿಕ್ಷಾವರ್ತಿಮಠ, ಎಚ್‌ಎಸ್ ಹುಚ್ಚಗೊಂಡರ, ಅಜ್ಜಪ್ಪ ಬಿಜ್ಜುರ, ಶ್ರೀನಿವಾಸ ರಾಯಚೂರು , ಪ್ರವೀಣ ಎನ್‌.ಕೆ., ಎಚ್‌.ಎಸ್‌. ಪಟ್ಟಣಶೆಟ್ಟಿ, ಪ್ರಕಾಶ್ ಬಸಾಪುರ, ಡಾ: ಸುರೇಶ್ ಬಣಕಾರ, ಕುಮಾರ ನಾಯಕ್, ಪರಶುರಾಮ, ಶಿವಣ್ಣ ಜಡೆದ ಸೇರಿದಂತೆ ಇನ್ನಿತರ ಉಪನ್ಯಾಸಕರು, ಆಡಳಿತ ಸದಸ್ಯರು, ಮುಖ್ಯೋಪಾಧ್ಯಾಯರು,  ಸಿಬ್ಬಂದಿ ಉಪಸ್ಥಿತರಿದ್ದರು. ಆರಂಭದಲ್ಲಿ, ಜಾನಪದ ವಿದ್ವಾಂಸ ಡಾ: ಕೆ.ಸಿ.ನಾಗರಜ್ಜಿ ಪ್ರಾರ್ಥಿಸಿದರು. ಉಪ ಪ್ರಾಚಾರ್ಯ ದೇವರಾಜ ಹಂಚಿನಮನಿ ಸ್ವಾಗತಿಸಿ, ನಿರೂಪಿಸಿದರು.  ಬಿ. ಇ.ಡಿ ಕಾಲೇಜು ಪ್ರಾಚಾರ್ಯ, ಮೃತ್ಯುಂಜಯ,ಎಂ.ಅವರು ಸ್ವಾಮೀಜಿಯವರನ್ನು ಪರಿಚಯಿಸಿದರು. ಪ್ರೊ: ವೀರೇಶ್ ಚೌಡಣ್ಣನವರ್ ನಿರೂಪಿಸಿ, ವಂದಿಸಿದರು. ಗುರುವಂದನಾ ಕಾರ್ಯಕ್ರಮದಲ್ಲಿ  ಸಂಚಾರಿ ರಾಮಾಂಜನೇಯ ಸ್ವಾಮೀಜಿಯವರ ನೂರಾರು ಭಕ್ತರು ಪಾಲ್ಗೊಂಡಿದ್ದರು. 


ಸುದ್ದಿ ಓದಿ