ರಾಣೆಬೆನ್ನೂರ

ಇಟಗಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಕೃಷಿ ವಿಸ್ತರಣಾ ಕಾರ್ಯಕ್ರಮ

ಇಟಗಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಕೃಷಿ ವಿಸ್ತರಣಾ ಕಾರ್ಯಕ್ರಮ

ರಾಣೇಬೆನ್ನೂರು: ಜು 10ತಾಲೂಕಿನ  ಇಟಗಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಸಿರಿಧಾನ್ಯ ಬೇಸಾಯ ಕುರಿತಂತೆ ಕೃಷಿ ವಿಸ್ತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ, ಅಧಿಕೃತ ಚಾಲನೆ ನೀಡಿದ ಯೋಜನೆಯ ಜಿಲ್ಲಾ ನಿರ್ದೇಶಕ ಶಿವರಾಯ  ಪ್ರಭು ಅವರು, ಮಾತನಾಡಿ ತಂತ್ರಜ್ಞಾನ ಎಷ್ಟೇ ಬೆಳೆದರೂ, ಎಲ್ಲವೂ ನಮ್ಮ ಹಿಂದಿನ ಹಿರಿಯರು, ಹಾಕಿ ಕೊಟ್ಟಿರುವ, ಪರಂಪರೆಯ ಸಿರಿ ಧಾನ್ಯಗಳನ್ನು ಇಂದು ಹೆಚ್ಚು ಹೆಚ್ಚಾಗಿ ಬೆಳೆದು ಉತ್ಪಾದನೆ ಮಾಡುವುದರ ಮೂಲಕ,  ಆರ್ಥಿಕ ಅಭಿವೃದ್ಧಿಯನ್ನು ಹೊಂದಬೇಕಾಗಿದೆ ಎಂದರು.  

ಕೃಷಿ ಪ್ರಧಾನ ದೇಶದಲ್ಲಿ ಸಾಂಪ್ರದಾಯಿಕ ವೈದ್ಯದ ಪ್ರಕಾರ, ಬಾಳಿ ಬದುಕುತ್ತಿರುವ, ನಮ್ಮ ಕೃಷಿಕರು  ಇಂದು ಪುನ: ಸಾಂಪ್ರದಾಯಿಕ ಸಿರಿಧಾನ್ಯಗಳನ್ನು ಉಳಿಸಿ ಬೆಳೆಸಲು ಮುಂದಾಗಬೇಕಾದ ಇಂದಿನ ಅಗತ್ಯವಿದೆ ಎಂದು ರೈತರಿಗೆ ಕರೆ ನೀಡಿದರು. ಸಿರಿ ಧಾನ್ಯಗಳ ಬಳಕೆಯಿಂದ, ಯಾವುದೇ ರೋಗರು ಜನಗಳು ಇಲ್ಲದೆ ಆರೋಗ್ಯವಂತ ಜೀವನವನ್ನು ಸಾಗಿಸಲು ಸಾಧ್ಯವಾಗುವುದು ಎಂದ ಅವರು ಸಿರಿ ಧಾನ್ಯಗಳು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ, ಅಲ್ಲದೆ  ಹಸಿವನ್ನು ಸುಧಾರಿಸುತ್ತದೆ, ಮತ್ತು ಪ್ರಾಣವನ್ನು ಪೋಷಿಸಿ, ರಕ್ತದ ಕೊರತೆಯನ್ನು ನೀಗಿಸುವಲ್ಲಿ ತುಂಬಾ ಸಹಕಾರಿಯಾಗಿದೆ ಎಂದರು. 

 ಸಿರಿಧಾನ್ಯ ಮಾರುಕಟ್ಟೆ ವ್ಯವಸ್ಥೆ ಮತ್ತು ಆರ್ಥಿಕ ಅಭಿವೃದ್ಧಿ, ಕುರಿತಂತೆ  ದಾವಣಗೆರೆ ಎಫ್‌.ಪಿ.ಸಿ. ಸಿ. ಇ ಓ  ಸುನೀಲ್ ಅವರು ಕೃಷಿಕರಿಗೆ ಸಮಗ್ರ ಮಾಹಿತಿ ನೀಡಿ ಮತ್ತು ಮಾರ್ಗದರ್ಶನ ಮಾಡಿದರು. ಮಹೇಶ್ವರ​‍್ಪ ಅವರು, ಸಂಪನ್ಮೂಲ ವ್ಯಕ್ತಿಯಾಗಿ  ಪಾಲ್ಗೊಂಡು ಸಿರಿಧಾನ್ಯ ಉತ್ಪಾದನೆ, ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ತಾಲೂಕ ಯೋಜನಾಧಿಕಾರಿ ಮಂಜುನಾಥಗೌಡ ಎಂ ಅವರು ಸೇರಿದಂತೆ  ಒಕ್ಕೂಟದ ಅಧ್ಯಕ್ಷ ನಿಂಗಪ್ಪ ಮಡಿವಾಳರ, ಮೇಲ್ವಿಚಾರಕರು,ಸೇವಾ ಪ್ರತಿನಿಧಿಗಳು ನೂರಾರು ರೈತರು  ಉಪಸ್ಥಿತರಿದ್ದರು. 


ಸುದ್ದಿ ಓದಿ