ಶಿಗ್ಗಾವ್

ಭಕ್ತರ ಅಂತ:ಕರಣವನ್ನು ಗೆದ್ದ ಶ್ರೀಗಳು ಕಾಶೀ ಶ್ರೀಗಳು : ಉಜ್ಜಯನಿ ಶಿವಾಚಾರ್ಯ ಭಗವತ್ಫಾದರು

ಭಕ್ತರ ಅಂತ:ಕರಣವನ್ನು ಗೆದ್ದ ಶ್ರೀಗಳು ಕಾಶೀ ಶ್ರೀಗಳು :  ಉಜ್ಜಯನಿ ಶಿವಾಚಾರ್ಯ ಭಗವತ್ಫಾದರು

ಲೋಕದರ್ಶನ ವರದಿ

ಶಿಗ್ಗಾವಿ 17: ಭಕ್ತರ ಅಂತ:ಕರಣವನ್ನು ಗೆದ್ದ  ಕಾಶೀ ಜಗದ್ಗುರುಗಳವರು ಈ ಬಿಸನಳ್ಳಿ ಗ್ರಾಮದಲ್ಲಿ 75 ನೇ ಜನ್ಮ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ಈ ಬಾಗದ ಭಕ್ತರ ಪುಣ್ಯದ ಪ್ರತಿಫಲವಾಗಿದೆ. ಹಿರಿಯ ಕಾಶೀ ಶ್ರೀಗಳು ಮುಂದಿನ ಉತ್ತರಾಧಿಕಾರಿಯನ್ನಾಗಿ ಡಾ.ಮಲ್ಲಿಕಾಜರ್ುನ ವಿಶ್ವಾರಾಧ್ಯರನ್ನು ಆಯ್ಕೆಮಾಡಿ ಅವರ ಹೆಸರನ್ನು ಕಳೆದ ವರ್ಷ ಇಲ್ಲಿ ನಡೆದ ಧರ್ಮ ಸಭೆಯಲ್ಲಿ ಘೋಶಿಸಿರುವುದು ಈ ಬಿಸನಳ್ಳಿ ಗ್ರಾಮಕ್ಕೆ ಮತ್ತೊಂದು ಗರಿ ಮೂಡಿದಂತಾಗಿದೆ ಎಂದು ಶ್ರೀ ಮದ್ ಉಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ್ವರ  ಸಿದ್ದಲಿಂಗ ರಾಜದೇಶೀಕೇಂದ್ರ ನುಡಿದರು. 

    ಬಿಸನಳ್ಳಿ ಗ್ರಾಮದ ಜ.ಪಂ.ವೇ.ಆ.ಸಂ.ಸಂ.ಯೋಗ ಪಾಠಶಾಲೆಯ ಆವರಣದಲ್ಲಿ ಲೋಕ ಕಲ್ಯಾಣಾರ್ಥವಾಗಿ,  ಕಾಶೀ ಜಗದ್ಗುರುಗಳವರ 75 ನೇ ಜನ್ಮ ಅಮೃತ ಮಹೋತ್ಸವದ ಅಂಗವಾಗಿ ನಡೆದ 4 ನೇ ದಿನದ ಧರ್ಮ ಸಭೆಯ ಧಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

     ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಮಾತನಾಡಿ, ಸರ್ವ ಭಾಷೆಗಳಲ್ಲಿ ಪಾಂಢಿತ್ಯವನ್ನು ಪಡೆದ ಶ್ರೀ ಕಾಶೀ ಜಗದ್ಗುರುಗಳವರು ವೀರಶೈವ ಧರ್ಮ ಗ್ರಂಥವಾದ ಸಿದ್ಧಾಂತ ಶಿಖಾಮಣಿ ಗ್ರಂಥವನ್ನು ಎಲ್ಲ ಬಾಷೆಗಳಿಗೆ ಅನುವಾದಿಸಿ ಪ್ರತಿಯೋಬ್ಬರ ಮನೆ, ಮನಗಳಿಗೆ ತಲುಪಿಸಿದ ಕೀರ್ತಿ  ಡಾ.ಚಂದ್ರಶೇಖರ ಶಿವಾಚಾರ್ಯರಿಗೆ ಸಲ್ಲುತ್ತದೆ. ಈ ಕ್ಷೇತ್ರದ ಶಾಸಕರು ಹಾಗು ಈ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅಭಿವೃದ್ಧಿಪರ ಚಿಂತಕರಾಗಿದ್ದು, ಅವರ ಅವಿರಿತವಾದ ಸೇವೆ ಈ ನಾಡಿಗೆ ಅವಶ್ಯ್ಯವಾಗಿದೆ ಎಂದು ಹೇಳಿದರು.

     ಬಿಜೆಪಿ ತಾಲೂಕಾ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ, ಈ ದೇಶಕ್ಕೆ ಪಂಚಪೀಠಗಳ ಕೊಡುಗೆ ಅಪಾರವಾಗಿದ್ದು, ಭಕ್ತರ ವಳಿತಿಗಾಗಿ ತಮ್ಮನ್ನು ತಾವು ಸಮರ್ಪಣಾ ಬಾವದಿಂದ ಸಮಪರ್ಿಸಿಕೊಂಡು ಬಂದವರಾಗಿದ್ದಾರೆ. ಬಡವ,ಬಲ್ಲಿದ ಎನ್ನದೇ ಸರ್ವರನ್ನು ಬಾ ಎಂದು ಕರೆಯುವ ಪೀಠ ಬಾಳೆಹೊನ್ನೂರ ಪೀಠ, ಎಲ್ಲರಿಗೂ ತುತ್ತು ಮಾಡಿ ಉಣಬಡಿಸುವ ಪೀಠ ಉಜ್ಯಯನಿ ಪೀಠವಾಗಿದೆ, ಕೇದಗೊಂಡ ವ್ಯಕ್ತಿಗೆ ವೇದದ ಶಕ್ತಿ ತುಂಬಿದ ಪೀಠ ಕೇದಾರ ಪೀಠವಾಗಿದೆ, ಸರ್ವರಿಗೂ ಶ್ರೀರಕ್ಷೆ ನೀಡುವ ಶಕ್ತಿ, ಭಕ್ತರ ಬಕ್ತಿಗೆ ಮುಕ್ತಿ ದಯಪಾಲಿಸುವ ಪೀಠ ಶ್ರೀ ಶೈಲ ಪೀಠವಾಗಿದೆ, ಕಾಯಾ, ವಾಚಾ, ಮನಸಾ, ಭಕ್ತ ಕುಲಕ್ಕೆ ನ್ಯಾಯ ನೀತಿ, ಧರ್ಮದ ದಾರಿತೋರಿ ಜ್ಞಾನ ನೀಡುವ ಪೀಠ ಯಾವುದಾದರೂ ಇದ್ದರೆ, ಅದು ಕಾಶೀ ಪೀಠವಾಗಿದೆ ಎಂದು ಮಾಮರ್ಿಕವಾಗಿ ಹೇಳಿದರು.

      ಕಾಶೀ ಉಭಯ ಶ್ರೀಗಳು ಆಶೀರ್ವಚನ ನೀಡಿದರು. ಬೆಂಗಳೂರ ವಿಭೂತಿಮಠದ  ಡಾ,ಮಹಾಂತಲಿಂಗ ಶಿವಾಚಾರ್ಯರು, ಡಾ.ಶಿವಕುಮಾರ ಮೂಲಿಮಠ ಮಾತನಾಡಿದರು. ಹಾವೇರಿ ಐ ಕೇರ ಸೆಂಟರ್ನ ಕರಿಯಪ್ಪ ಹೇರೂರ ರವರು ಪ್ರಕಟಿಸಿದ  ಕಾಶೀ ಉಭಯ ಜಗದ್ಗುರುಗಳವ ಕ್ಯಾಲೇಂಡರ್ಗಳನ್ನು ತ್ರೀಮೂತರ್ಿ ಜಗದ್ಗುರುಗಳವರು ಬಿಡುಗಡೆಗೋಳಿಸಿದರು.

    ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯರು, ಹಿರೇಮಣಕಟ್ಟಿ ವಿಶ್ವಾರಾಧ್ಯ ಶಿವಾಚಾರ್ಯರು, ಕೂಡಲದ  ಗುರುಮಹೇಶ್ವರ ಶಿವಾಚಾರ್ಯರು, ಶಿಗ್ಗಾವಿ  ಸಂಗನಬಸವ ಶಿವಾಚಾರ್ಯರು, ರಟ್ಟಿಹಳ್ಳಿ  ಕಬ್ಬಿಣಕಂತಿಮಠದ ಶ್ರೀಗಳು ಸೇರಿದಂತೆ ನರಹರಿ ಕಟ್ಟಿ, ರೇಣುಕನಗೌಡ ಪಾಟೀಲ, ಸೋಮು ಆಜೂರ, ವಿರೇಶ ಆಜೂರ, ಕುಮಾರ ಹರ್ತಿ,  ಪರುಶರಾಮ ಕುದರಿ, ನಾಗರಾಜ ಹೊಸಮನಿ ಉಪಸ್ಥಿತರಿದ್ದರು. ಜ್ಯೋತಿ ವಸ್ತ್ರದಮಠ ಸ್ವಾಗತಿಸಿದರು. ಜಿ.ಎಸ್.ದೇಸಾಯಿ ನಿರೂಪಿಸಿದರು.

ಸುದ್ದಿ ಓದಿ