ಗುಳೇಗುಡ್ಡ

ಮನುಕುಲದ ಉದ್ಧಾರದಲ್ಲಿ ಶ್ರೀಗಳ ಪಾತ್ರ ಹಿರಿದು : ಸಿದ್ದರಾಮಯ್ಯ

ಮನುಕುಲದ ಉದ್ಧಾರದಲ್ಲಿ ಶ್ರೀಗಳ ಪಾತ್ರ ಹಿರಿದು : ಸಿದ್ದರಾಮಯ್ಯ

ಗುಳೇದಗುಡ್ಡ,ನ.15 

     ಸಮಾಜದಲ್ಲಿ ಧಾರ್ಮಿಕ ಭಾವನೆಗಳನ್ನು ಬಿತ್ತರಿಸಲು, ಮನುಷ್ಯನಲ್ಲಿ ಮಾನವೀಯ ಮೌಲ್ಯಗಳನ್ನು ಬಿಂಬಿಸಲು ಮಠಗಳಲ್ಲಿರುವ ಶ್ರೀಗಳು ತಮ್ಮ ಬದುಕನ್ನು ಅರ​‍್ಿಸಿಕೊಂಡು ಮನುಕುಲದ ಉದ್ಧಾರ ಮಾಡುತ್ತಾರೆ  ಎಂದು ಬಾದಾಮಿ ಶಾಸಕ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹೇಳಿದರು. 

     ಅವರು ಶನಿವಾರ ತಾಲೂಕಿನ  ಹಾನಾಪೂರ ಎಸ್‌.ಪಿ ಗ್ರಾಮದ ಶ್ರದ್ಧಾನಂದಮಠದ ಶ್ರದ್ಧಾನಂದ ಶ್ರೀಗಳ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಾನವೀಯ ಮೌಲ್ಯಗಳಿಂದ ಕೂಡಿರುವುದೇ ಮಾನವ ಧರ್ಮ. ಎಲ್ಲ ಧರ್ಮಗಳು ಮನುಷ್ಯನನ್ನು ಸನ್ಮಾರ್ಗಕ್ಕೆ ಒಯ್ಯುವ ಸಂದೇಶಗಳನ್ನು ಹೊಂದಿವೆ. ಪ್ರತಿಯೊಬ್ಬರಲ್ಲಿ ಪರಸ್ಪರ ಪ್ರೀತಿ, ಸಹಬಾಳ್ವೆ, ಸೌಹಾರ್ದತೆಗಳನ್ನು ಮೂಡಿಸಿ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡುವ ಕೆಲಸ ಶ್ರೀಗಳದ್ದಾಗಿದೆ. ಅಂತಹ ಕಾರ್ಯವನ್ನಿ ಇಲ್ಲಿನ ಶೃದ್ಧಾನಂದ ಶ್ರೀಗಳು ಮಾಡುತ್ತ ಬಂದಿದ್ದಾರೆ. ಮನುಕುಲಕೆ ಶಾಂತಿ, ಸಮಾಧಾನಗಳಂತಹ ಮೌಲ್ಯಗಳನ್ನು ಶ್ರೀಗಳು ಬೆಳೆಸಲಿ ಎಂದರು.       

        ಇದೇ ಸಂದರ್ಭದಲ್ಲಿ ಗ್ರಾಮದ ಪರವಾಗಿ ಮಾಜಿ ಸಿ.ಎಂ. ಸಿದ್ಧರಾಮಯ್ಯನವರನ್ನು ಸನ್ಮಾನಿಸಲಾಯಿತು.  ವಿದ್ಯಾನಂದ ಶ್ರೀಗಳು ಸಾನಿಧ್ಯವಹಿಸಿದರು. ವೀರಯ್ಯ ಶ್ರೀಗಳು ನೇತೃತ್ವವಹಿಸಿದ್ದರು. ಕಾರ್ಯಕ್ರಮದಲ್ಲಿ ಹೆಬ್ಬಾಳದ ಶಾಸಕ ಭೈರತಿ ಸುರೇಶ, ತರಿಕೇರಿ ಶಾಸಕ ಶ್ರೀನಿವಾಸ, ಕಾಂಗ್ರೇಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಕ್ಷಿತಾ ಈಟಿ, ಮುಖಂಡರಾದ ಎಂ.ಬಿ.ಹಂಗರಗಿ, ಹೊಳಬಸು ಶೆಟ್ಟರ, ಗ್ರಾಪಂ ಅಧ್ಯಕ್ಷೆ ಹನಮವ್ವ ಡಂಗಿ, ಅಯ್ಯಪ್ಪ ಹೂಗಾರ, ಶಿವಪ್ಪ ಹಿರೇಗೌಡರ, ರಾಮು ಜಾಧವ, ಜಗದೀಶ ಹಿರೇಗೌಡ್ರ, ವೈ.ಬಿ.ಗೌಡ್ರ, ಮಲ್ಲಪ್ಪ ಬಾಳನ್ನವರ, ದಿಗಂಬರಿ ಹಿರೇಗೌಡರ, ಹನುಮಪ್ಪ ಮೂಲಿಮನಿ, ಕರಿಯವ್ವ ಮಾದರ, ಸಂಗೀತಾ ಪಮ್ಮಾರ, ಸೋಮು ರಾಠೋಡ, ಪುಂಡಲೀಕ ನಾಯಕ, ಬಸಪ್ಪ ಗೌಡರ, ಎಚ್‌.ಎಲ್‌.ಚವ್ಹಾಣ, ತಮ್ಮಣ್ಣೆಪ್ಪ ಮಾದರ ಸೇರಿದಂತೆ ಇತರರು ಇದ್ದರು.  


ಸುದ್ದಿ ಓದಿ