ಲಘು ಪೋಷಕಾಂಶ ದ್ರಾವಣ ಸಿಂಪಡಿಸಿ: ಅಧಿಕ ಇಳುವರಿ ಪಡೆಯಿರಿ: ಶಾಂತಮಣಿ
ರಾಣೇಬೆನ್ನೂರು, ಜು 12: ಮುಸುಕಿನ ಜೋಳದ ಬೆಳೆಗೆ ನೀರಿನಲ್ಲಿ ಕರಗುವ ರಾಸಾಯನಿಕ ಗೊಬ್ಬರಗಳಾದ 13:0:15 ಮತ್ತು19:19:19 ಇವುಗಳನ್ನು ಪ್ರತಿ ಲೀಟರ್ ನೀರಿಗೆ, ಸಣ್ಣ ಬೆಳೇ ಇದ್ದಲ್ಲಿ 2ಗ್ರಾಠ, ಹಾಗೂ ದೊಡ್ಡಬೆಳೇ ಇದ್ದಲ್ಲಿ 5 ಗ್ರಾಂ ನಂತೆ ಇದರ ಜೊತೆಗೆ ಲಘು ಪೋಷಕಾಂಶ ದ್ರಾವಣವನ್ನು 12 ರಿಂದ15 ದಿನಗಳ ಅಂತರದಲ್ಲಿ ಸಿಂಪಡಿಸಿದರೆ ಅಧಿಕ ಇಳುವರಿ ಪಡೆಯಬಹುದಾಗಿದೆ ಎಂದು ತಾಲೂಕ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀಮತಿ ಶಾಂತಮಣಿ ಜಿ. ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ತೇವಾಂಶ ಕೊರತೆ ಇರುವುದರಿಂದ ಹೆಚ್ಚು ಯೂರಿಯಾ ಬಳಸಬಾರದು.ಎಕರೆಗೆ ಕೇವಲ 15 ಕೆಜಿ ಯಷ್ಟು ಮಾತ್ರ ಬಳಸಬೇಕು. ಇದಕ್ಕೆ ಪರ್ಯಾಯವಾಗಿ ನ್ಯಾನೋ ಯೂರಿಯಾ ಸಿಂಪರಣೆ ಮಾಡಿದರೆ ಉತ್ತಮ ಇಳುವರಿ ಪಡೆಯಬಹುದು ಎಂದಿದ್ದಾರೆ.