ಧಾರವಾಡ - ಹುಬ್ಬಳ್ಳಿ

ನಗರದಲ್ಲಿ ಕ್ರೀಡಾ ಸ್ಪರ್ಧೆಗಳು ಹೆಚ್ಚು ಹೆಚ್ಚು ನಡೆಯಬೇಕು: ಎಸಿಪಿ ಮುಕ್ತೇದಾರ್

ನಗರದಲ್ಲಿ ಕ್ರೀಡಾ ಸ್ಪರ್ಧೆಗಳು ಹೆಚ್ಚು ಹೆಚ್ಚು ನಡೆಯಬೇಕು: ಎಸಿಪಿ ಮುಕ್ತೇದಾರ್

ಹುಬ್ಬಳ್ಳಿ,03: ಮುಂದಿನ ಪೀಳಿಗೆಯಲ್ಲಿ ಆರೋಗ್ಯಕರ ಜೀವನ ಶೈಲಿ ಮತ್ತು ಕ್ರೀಡೆಯ ಉತ್ತೇಜನಕಾಗಿ ಅವಳಿ ನಗರದಲ್ಲಿ ಹೆಚ್ಚು ಹೆಚ್ಚು ಕ್ರೀಡಾ ಸ್ಪರ್ಧೆಗಳು ನಡೆಯಬೇಕು ಎಂದು ಅವಳಿ ನಗರದ ಟ್ರಾಫಿಕ್ ಎ.ಸಿ.ಪಿ. ವಿನೋದ್ ಮುಕ್ತೇದಾರ್ ಅಭಿಪ್ರಾಯಪಟ್ಟರು.  

ಉಲ್ಲಿನ ಶ್ರೀ ಕಾರುಣ್ಯಸ್ಪೋರ್ಟ್ಸ ಅಸೋಸಿಯೇಷನ್, ಸ್ವರ್ಣ ಜುವೆಲರ್ಸ್‌ ಮತ್ತು ಗುಲಾಬಿ ಜುವೆಲ್ಲರ್ಸ್‌ ಇವರ ಸಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ನಿಮಿತ್ಯ ರಸ್ತೆ ಓಟದ ಸ್ಪರ್ಧೆಯನ್ನು ರವಿವಾರ ಉದ್ಘಾಟಿಸಿ ಮಾತನಾಡಿದ ಮುಕ್ತೇದಾರ್ ಅವರು ಅಭ್ಯಾಸದಂತೆ ಕ್ರೀಡೆಗಳಿಗೂ ಸಮಾನ ಒತ್ತು ನೀಡಬೇಕೆಂದು ಪಾಲಕರಲ್ಲಿ ವಿನಂತಿಸಿದರು. 

ಉದ್ಯಮಿ ಗೋಪಾಲಕೃಷ್ಣ ನಾಯಕ್ ಮತ್ತು ಪ್ರದೀಪ್ ಭಟ್ ಅವರು ಮಾತನಾಡುತ್ತ, ಒಬ್ಬ ಸರಕಾರಿ ಶಾಲೆಯ ಶಿಕ್ಷಕರಾಗಿದ್ದುಕೊಂಡು, ನಗರದ ಎಲ್ಲ ಆಸಕ್ತ ಮಕ್ಕಳಿಗೆ-ಯುವಕರಿಗೆ ಉಚಿತವಾಗಿ ತರಬೇತಿ ನೀಡುತ್ತಿರುವ ರಾಷ್ಟ್ರೀಯ ಕ್ರೀಡಾಪಟು ಮಹಾಂತೇಶ ಬಳ್ಳಾರಿ ಅವರ ಸೇವೆಯನ್ನು ಶ್ಲಾಘಿಸಿದರು.ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ನಿಮಿತ್ಯ ರಸ್ತೆ ಓಟದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. 

ಸ್ಪರ್ಧೆಯಲ್ಲಿ 943 ಕ್ರೀಡಾಪಟುಗಳು ಭಾಗವಹಿಸಿದ್ದರು. ದೊಡ್ಡಯ್ಯ ಹಿರೇಮಠ್, ಸಿದ್ದಣ್ಣ ಮೊಗಲಿಶೆಟ್ಟರ್, ವಿಶ್ವನಾಥ ಪಾಟೀಲ್, ಡಾ. ಪ್ರಭು ಬಿರಾದಾರ, ಡಾ. ಬಸವರಾಜ್ ಸಜ್ಜನ, ಅಶೋಕ್ ವಾಲ್ಮೀಕಿ, ರಾಜು ಕಾಳೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ