ಧಾರವಾಡ - ಹುಬ್ಬಳ್ಳಿ

ಕ್ರೀಡೆಗಳಿಂದ ಖಿನ್ನತೆಯನ್ನು ದೂರವಿಡಬಹುದು: ಡಾ. ಅಜಿತಪ್ರಸಾದ

ಕ್ರೀಡೆಗಳಿಂದ ಖಿನ್ನತೆಯನ್ನು ದೂರವಿಡಬಹುದು: ಡಾ. ಅಜಿತಪ್ರಸಾದ

ಧಾರವಾಡ 10: ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಧಾರವಾಡ ಹಾಗೂ ಜೆ.ಎಸ್‌.ಎಸ್‌. ಮಂಜುನಾಥೇಶ್ವರ ಪ.ಪೂ. ವಿಜ್ಞಾನ ವಾಣಿಜ್ಯ ಹಾಗೂ ಕಲಾ ಮಹಾವಿದ್ಯಾಲಯ ಧಾರವಾಡ ಇವರ ಸಂಯುಕ್ತಾಶ್ರಮದಲ್ಲಿ 2024-25ನೇ ಸಾಲಿನ ಧಾರವಾಡ ಶಹರ ಮಟ್ಟದ ಬಾಲಕ ಮತ್ತು ಬಾಲಕಿಯರ ಅಥ್ಲೇಟಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ಆರ್‌.ಎನ್‌.ಶೆಟ್ಟಿ ಕ್ರೀಡಾಂಗಣದಲ್ಲಿ ಜರುಗಿತು. 

ಡಾ. ಅಜಿತಪ್ರಸಾದ ಅವರು ಮಾತನಾಡಿ ಕ್ರೀಡೆಗಳನ್ನು ಆಡುವದರಿಂದ ನಾವು ಮಾನಸಿಕ ಒತ್ತಡದಿಂದ ಹೊರಬರಬಹುದು. ನಮ್ಮಲ್ಲಿರುವ ಖಿನ್ನತೆಯನ್ನು ದೂರವಿಡಬಹುದು. ಕ್ರೀಡೆಗಳು ದೇಹಕ್ಕೆ ವ್ಯಾಯಾಮವನ್ನು ನೀಡುತ್ತವೆ. ಇದರಿಂದ ಜೀವನವು ಆಹ್ಲಾದಕರವಾಗಿರುತ್ತದೆ. ಪಠ್ಯವಷ್ಟೆ ಅಲ್ಲದೇ ಪಠ್ಯೇತರ ಚಟುವಟಿಕೆಗಳಿಗೆ ವಿದ್ಯಾರ್ಥಿಗಳನ್ನು ಹುರಿದುಂಬಿಸಿ. ಕ್ರೀಡೆ ಹಾಗೂ ಕ್ರೀಡಾಳುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ  ಜೆ.ಎಸ್‌.ಎಸ್ ನಲ್ಲಿ ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡಿರುವ ಪದವಿ ತರಗತಿಗಳಲ್ಲಿ ಅಧ್ಯಯನ ಮಾಡುವ ಸುಮಾರು 250 ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯತಿಯನ್ನು ನೀಡುತ್ತಾ ಪ್ರೋತ್ಸಾಹಿಸುತ್ತಾ ಬರಲಾಗುತ್ತಿದೆ. ಇದರಿಂದ ಒಳ್ಳೆಯ ಕ್ರೀಡಾಪಟುಗಳು ಹೊರಹೊಮ್ಮುತ್ತಿದ್ದಾರೆ ಎಂದು ನುಡಿದರು. 

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುರೇಶ ಕೆ.ಪಿ ಇವರು. ವಿದ್ಯಾರ್ಥಿಗಳನ್ನುದ್ದೇಶಿಸಿ ವಿದ್ಯಾರ್ಥಿಗಳು ಪಠ್ಯ  ಪುಸ್ತಕದ ಆಸಕ್ತಿಯಂತೆ ಕ್ರೀಡೆಗಳಲ್ಲಿ ಆಸಕ್ತಿ ವಹಿಸಿ ವಿವಿಧ ಸ್ಪರ್ದೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆಯುವಂತ ಎಲ್ಲ ಕ್ರಿಡಾ ಪಟುಗಳಿಗೆ ಸಲಹೆ ನೀಡಿದರು. ಜೆ.ಎಸ್‌.ಎಸ್‌. ಸಂಸ್ಥೆಯು ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಹ ನೀಡುತ್ತಾ ಬಂದಿದ್ದು ಜೆ.ಎಸ್‌.ಎಸ್‌. ಕ್ರೀಡಾಪಟುಗಳು ತಾಲೂಕು ಜಿಲ್ಲಾ ರಾಜ್ಯ ರಾಷ್ಟ್ರಮಟ್ಟದ ಸ್ಪರ್ಧೆಗೆ ಕ್ರೀಡಾ ಪಟುಗಳನ್ನು ನೀಡಿರುವ ಕೀರ್ತಿ ನಿಮ್ಮ ಸಂಸ್ಥೆಗೆ ಸಲ್ಲುತ್ತದೆಂದು ಹರ್ಷ ವ್ಯಕ್ತಪಡಿಸಿದರು. 

ಅಂತರಾಷ್ಟ್ರೀಯ ಕ್ರೀಡಾಪಟು ಮತ್ತು ಅಥ್ಲೇಟಿಕ್ ತರಬೇತಿದಾರ ಬಾಲಕೃಷ್ಣ ಅವಲಕ್ಕಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು ಯು.ಎನ್‌.ಹಜಾರೆ, ವ್ಹಿ.ಎಚ್‌. ಕಲಾದಗಿ ಭೀಮಣ್ಣನವರ ಸರ್, ಡಾ. ಸೂರಜ್ ಜೈನ್, ಮಹಾವೀರ ಉಪಾದ್ಯೆ ಉಪಸ್ಥಿತರಿದ್ದರು. 

ಮಹಾವಿದ್ಯಾಲಯದ ಪ್ರಾಚಾರ್ಯ ರವಿವರ್ಮ ಜೋಶಿ ಸ್ವಾಗತಿಸಿ ಮುಖ್ಯ ಅತಿಥಿಗಳನ್ನು ಪರಿಚಯಸಿದರು. ಪಲ್ಲವಿ ಪಾಟೀಲ ಹಾಗೂ ಸಂಗಡಿಗರು ಸ್ವಾಗತೀಗೀತೆ ಹಾಡಿದರು. ಪವನ ಗೊರವರ ವಂದಿಸಿದರು ಡಾ.ಎಸ್‌.ಕೆ. ನಡುವಿನಕೇರಿ ನಿರೂಪಿಸಿದರು. 


ಸುದ್ದಿ ಓದಿ