ರಾಣೆಬೆನ್ನೂರ

ವ್ಯಕ್ತಿತ್ವ ವಿಕಾಸತೆಗೆ ಕ್ರೀಡೆಗಳು ಅಗತ್ಯ - ಶಿವಪ್ರಸಾದ್

ವ್ಯಕ್ತಿತ್ವ ವಿಕಾಸತೆಗೆ ಕ್ರೀಡೆಗಳು ಅಗತ್ಯ - ಶಿವಪ್ರಸಾದ್

ವ್ಯಕ್ತಿತ್ವ ವಿಕಾಸತೆಗೆ ಕ್ರೀಡೆಗಳು ಅಗತ್ಯ - ಶಿವಪ್ರಸಾದ್   

 ರಾಣೇಬೆನ್ನೂರು 19 : ವ್ಯಕ್ತಿತ್ವ ವಿಕಾಸತೆಗೆ ಕ್ರೀಡೆಗಳು ತುಂಬಾ ಅಗತ್ಯವಾಗಿವೆ. ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಸೋಲು ಗೆಲುವು ಸಹಜ. ಸೋಲಿಗೆ  ಕುಗ್ಗದೆ, ಗೆಲುವಿಗೆ ಹಿಗ್ಗದೆ ಸಮಾನವಾಗಿ ಸ್ವೀಕರಿಸಿ ಮುನ್ನಡೆದಾಗ ಮಾತ್ರ ಭವಿಷ್ಯದಲ್ಲಿ ಗೆಲುವನ್ನು ಕಾಣಲು ಸಾಧ್ಯವಾಗುವುದು ಎಂದು ಹಾವೇರಿ ಕರ್ನಾಟಕ ಖೋ.ಖೋ.ಅಸೋಸಿಯೇಷನ್ ಅಧ್ಯಕ್ಷ ಶಿವಪ್ರಸಾದ ಎಲಿ ಹೇಳಿದರು.  

         ಅವರು, ನಗರದ ಕೆ. ಎಲ್‌. ಇ ಶಿಕ್ಷಣ ಸಂಸ್ಥೆಯ, ರಾಜರಾಜೇಶ್ವರಿ ಕಲಾ ವಾಣಿಜ್ಯ  ಮಹಾವಿದ್ಯಾಲಯ ಮತ್ತು ರಾಣೆಬೆನ್ನೂರು ಐಕ್ಯೂ ಎಸಿ ಆಥಿತ್ಯದಲ್ಲಿ ವಿಜಯಪುರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಹಯೋಗದಲ್ಲಿ  ಏರಿ​‍್ಡಸಲಾಗಿದ್ದ, ಅಂತರ್ ಮಹಿಳಾ ಮಹಾವಿದ್ಯಾಲಯಗಳ ಏಕ ವಲಯ ಖೋ. ಖೋ. ಮತ್ತು ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಸಮಾರೋಪದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.  

         ಕಾಲೇಜು ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳನ್ನು ಅಳವಡಿಸಿಕೊಂಡು ಸಮಗ್ರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಇದರಿಂದ ಮಾತ್ರ, ಮಾನಸಿಕ ದೈಹಿಕ ಬೌದ್ಧಿಕ ಬೆಳವಣಿಗೆಯನ್ನು ಕಾಣಬಹುದಾಗಿದೆ ಎಂದು ಎಲಿ ಅವರು, ಕ್ರೀಡಾಪಟುಗಳಿಗೆ ಕರೆ ನೀಡಿದರು.  ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಜಯಣ್ಣ ಜಂಬಿಗಿ ಅವರು ಮಾತನಾಡಿ, ಇಂತಹ ಸ್ಪರ್ಧಾತ್ಮಕ ಚಟುವಟಿಕೆಗಳಿಂದ, ಇತರೆ ವಿದ್ಯಾರ್ಥಿಗಳಿಗೆ ಪ್ರೇರಣೆ ದೊರೆಯಲಿದೆ ಇಂತಹ ಕ್ರೀಡಾಕೂಟಗಳು  ಮೇಲಿಂದ ಮೇಲೆ ನಡೆಯಬೇಕಾದ ಅಗತ್ಯವಿದೆ ಎಂದರು.  ಶಿಕ್ಷಣ ಸಂಸ್ಥೆಯ ಇನ್ನೊರ್ವ ಸದಸ್ಯ ಬಸವರಾಜ ಪಟ್ಟಣಶೆಟ್ಟಿ, ಅವರು ಸಮಾರೊಪದ ಅಧ್ಯಕ್ಷತೆ ವಹಿಸಿದ್ದರು.  

       ಎರಡು ದಿವಸಗಳ ಕಾಲ ನಡೆದ ಖೋ. ಖೋ. ಹಾಗೂ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಗಳಿಸಿ, ಏಕ ವಲಯ ಖೋ. ಖೋ. ಸತತ ನಾಲ್ಕನೇ ಬಾರಿ, ಚಾಂಪಿಯನ್ ಮತ್ತು ಬಾಲ್ ಬ್ಯಾಡ್ಮಿಂಟನ್ ನಲ್ಲಿ ಐದನೇ ಬಾರಿಗೆ ಚಾಂಪಿಯನ ಆಗಿ ಹೊರಹೊಮ್ಮಿದ್ದಾರೆ.  ಕಾಲೇಜಿನ ಸುನಿತಾ ಕ್ಯಾತಾರಿ ಉತ್ತಮ ಆಟಗಾರ್ತಿ ಪ್ರಿಯಾಂಕ ಅಸುಂಡಿ ಆಲ್ ರೌಂಡರ್ ಆಗಿ ಹೊರಹೊಮ್ಮಿದರು.  

    ಕ್ರೀಡಾ,  ಸಾಧಕ ವಿದ್ಯಾರ್ಥಿಗಳಿಗೆ , ಸಂಸ್ಥೆಯ ಕಾರ್ಯಧ್ಯಕ್ಷ ಡಾ, ಪ್ರಭಾಕರ ಕೋರೆ, ಸ್ಥಾನಿಕ ಕಾರ್ಯಾಧ್ಯಕ್ಷ ವ್ಹಿ. ಪಿ.ಲಿಂಗನಗೌಡರ, ಪ್ರಾಚಾರ್ಯ ನಾರಾಯಣ ನಾಯಕ್  ಎ, ಮತ್ತು ದೈಹಿಕ ಶಿಕ್ಷಣ ನಿರ್ದೇಶಕರು, ಎಲ್ಲಾ ವಿಭಾಗಗಳ ಉಪನ್ಯಾಸಕರು  ಸಿಬ್ಬಂದಿ ಹಾರ್ದಿಕವಾಗಿ ಅಭಿನಂದಿಸಿದ್ದಾರೆ. ಪ್ರೊ, ಭೀಮಾತೀರ್ಥ ಪ್ರಾರ್ಥಿಸಿದರು. ಪ್ರೊ, ಸುಜಾತಾ ಹುಲ್ಲೂರ ಸ್ವಾಗತಿಸಿದರು. ಪ್ರೊ, ಮಂಜಪ್ಪ ಸಣ್ಣಬಸಪ್ಪನವರ, ನಿರೂಪಿಸಿ,ಪ್ರೊ, ರತ್ನವ್ವ ಹಾದಿಮನಿ ವಂದಿಸಿದರು. 


ಸುದ್ದಿ ಓದಿ