ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿ: ಜಾಧವ
ಇಂಡಿ: ಹೆಚ್ಚು ಹೆಚ್ಚು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುದರಿಂದ ದೈಹಿಕ, ಮಾನಸಿಕ ಸದೃಢರಾಗಲು ಸಾಧ್ಯ. ಬಿಡುವಿನ ವೇಳೆಯಲ್ಲಿ ಕ್ರೀಡೆಗಳು ಪ್ರಯೋಜನಕಾರಿಯಾಗಿವೆ. ಯುವ ವಿದ್ಯಾರ್ಥಿಗಳು ನಿಗದಿತ ಬಿಡುವಿನ ವೇಳೆಯಲ್ಲಿ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕೆಂದು ದೈಹಿಕ ಶಿಕ್ಷಕ ವಿಜಯಕುಮಾರ ಜಾಧವ ಹೇಳಿದರು.
ಅವರು ಭಾನುವಾರ ಪಟ್ಟಣದ ಸಿಂದಗಿ ರಸ್ತೆಯ ದೇಸಾಯಿ ಇಂಟರ್ ನ್ಯಾಶನಲ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾ ದಿನಾಚರಣೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿಯಾಗಿದ್ದು, ಮನುಷ್ಯ ಆರೋಗ್ಯವಂತನಾಗಿದ್ದರೆ ಮಾತ್ರ ಬದುಕಿನಲ್ಲಿ ಶ್ರೀಮಂತವಾಗಿರಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ತೊಡಗಿಸಿಕೊಂಡು ಆರೋಗ್ಯವಂತನಾಗಿರಲು ವಿದ್ಯಾರ್ಥಿಗಳಿಗೆ ಸಲಹೆ ಹೇಳಿದರು.
ದೈಹಿಕ ಶಿಕ್ಷಕ ಮಂಜುನಾಥ ನಾಯ್ಕೋಡಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯಲ್ಲಿ ಆಸಕ್ತಿತೋರಿಸಿ ನಿಮ್ಮ ದೈಹಿಕ ಸಾಮರ್ಥದ ಹೆಚ್ಚಿಸಿಕೊಳಬೇಕು. ಮೊಬೈಲ್ ಬಳಕೆ ಕಡಿಮೆ ಮಾಡಿ ಮೊಬೈಲ್‌ದಿಂದ ಆಗುವ ದುಷ್ಟ ಪರಿಣಾಮದಿಂದ ದೂರವಿರಿ ಎಂದರು.
ಸಂಸ್ಥೆಯ ಅಧ್ಯಕ್ಷ ಎಸ್.ಎಸ್. ದೇಸಾಯಿ, ಕಾರ್ಯದರ್ಶಿ ಕೆ.ಎಸ್. ದೇಸಾಯಿ, ಪ್ರಾಚಾರ್ಯ ಪ್ರದೀಪ ಮಣಿ, ಚಿದಾನಂದ ಬಿರಾದಾರ, ಅಶ್ವಿನಿ ಬಡಿಗೇರ, ಸಂಗಮೇಶ ಕಂಬಾರ, ಸಜೀಮನ್ ಮಾತನಾಡಿದರು. ಸ್ನೇಹಾ ದೇಸಾಯಿ, ಶಿಕ್ಷಕ, ಶಿಕ್ಷಕಿಯರು, ಸಿಬ್ಬಂದಿ ವರ್ಗ ಹಾಗೂ ಮಕ್ಕಳು ಪಾಲ್ಗೊಂಡಿದ್ದರು.