ಕಾಗವಾಡ

ಹಬ್ಬ ಹರಿದಿನಗಳಿಂದ ಆಧ್ಯಾತ್ಮಿಕ ಭಾವನೆ ವೃದ್ಧಿ: ಸರಡೆ

ಹಬ್ಬ ಹರಿದಿನಗಳಿಂದ ಆಧ್ಯಾತ್ಮಿಕ ಭಾವನೆ ವೃದ್ಧಿ: ಸರಡೆ

ಶೇಡಬಾಳ 01: ಯುವಕರಲ್ಲಿ ಆಧ್ಯಾತ್ಮಿಕ ಭಾವನೆ ವೃದ್ಧಿಸಲು ಹಾಗೂ ಸಂಘಟನಾ ಶಕ್ತಿ ಬಲಪಡಿಸಲು ಗಣೇಶ ಹಾಗೂ ಇನ್ನಿತರ ಧಾರ್ಮಿಕ ಹಬ್ಬ ಹರಿದಿನಗಳು ಪ್ರೇರಣಾದಾಯಕವಾಗಿವೆ ಎಂದು ಶಿರಗುಪ್ಪಿಯ ಅಮೋಲ ಜನಕಲ್ಯಾಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ವಿಶ್ವಹಿಂದೂ ಪರಿಷತ್‌-ಬಜರಂಗದಳದ ಚಿಕ್ಕೋಡಿ ಜಿಲ್ಲಾ ಉಪಾಧ್ಯಕ್ಷರಾದ ಡಾ. ಅಮೋಲ ಸರಡೆ ಹೇಳಿದರು.  

ಅವರು ಗುರುವಾರ ದಿ. 01 ರಂದು ಕಾಗವಾಡ ತಾಲೂಕಿನ ಮಂಗಾವತಿ ಗ್ರಾಮದಲ್ಲಿ ಗಣೇಶ ಹಬ್ಬದ ಸವಿನೆನಪಿಗಾಗಿ ಮನೆ ಮನೆಗೆ ಸಿಹಿ ಹಂಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಅವರು ಮುಂದೆ ಮಾತನಾಡುತ್ತ, ಬಾಲಗಂಗಾಧರ ತಿಲಕರು ಯುವಕರಲ್ಲಿ ದೇಶ ಭಕ್ತಿ, ಸಂಘಟನೆ ವೃದ್ಧಿಸುವಗೋಸ್ಕರ ಸಾರ್ವಜನಿಕ ಗಣೇಶೋತ್ಸವನ್ನು ಪ್ರಾರಂಭಿಸಿದರು. ಅವರು ಅಂದು ಪ್ರಾರಂಭಿಸಿದ ಸಾರ್ವಜನಿಕ ಗಣೇಶೋತ್ಸವವು ಭಾರತ ದೇಶದ್ಯಾಂತ ಪ್ರತಿ ಗ್ರಾಮಗಳಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಯುವಕರು ಹೆಚ್ಚಿನ ಪ್ರಮಾಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ದೇಶದ ಅಖಂಡತೆ, ಸಾರ್ವಭೌಮತ್ವ, ಸಹೋದರತ್ವ ಭಾವನೆಯನ್ನು ಬೆಳಿಸಿಕೊಂಡು ಭಾರತಾಂಬೆಯ ಸೇವೆಗೆ ಸದಾ ಸನ್ನದ್ಧಾರಿಗಿರುವಂತೆ ಮನವಿ ಮಾಡಿಕೊಂಡರು. ಮಂಗಾವತಿ ಗ್ರಾಮದಿಂದ ಪ್ರಾರಂಭವಾದ ಈ ಸಿಹಿ ಹಂಚುವ ಕಾರ್ಯಕ್ರಮ ಜುಗೂಳ, ಶಹಾಪೂರ, ಶಿರಗುಪ್ಪಿ, ಕುಸನಾಳ, ಮೊಳವಾಡ, ಇಂಗಳಿ ಉಗಾರ ಮೊದಲಾದ ಗ್ರಾಮಗಳಲ್ಲಿ ಮುಂದುವರೆಯಲಿದೆ ಎಂದು ಹೇಳಿದ ಅವರು ಸಾರ್ವಜನಿಕರಲ್ಲಿ ಧಾರ್ಮಿಕ ಭಾವನೆ ವೃದ್ಧಿಸುವ ಗೋಸ್ಕರ ಅಮೋಲ ಜನಕಲ್ಯಾಣ ಫೌಂಡೇಶನ್ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.  

ಈ ಸಮಯದಲ್ಲಿ ಡಾ. ಅಮೋಲ ಸರಡೆ, ಸಿ.ಪಿ. ಕೋಳಿ, ಲಕ್ಷ್ಮಣ ಗುಂಜಾಳೆ, ದೀಪಕ ಕೋಳಿ, ಕಾಡಗೌಡಾ ಪಾಟೀಲ, ಬಾಳಗೌಡಾ ಪಾಟೀಲ, ಸಂದೀಪ ಪಾಟೀಲ, ರೋಹಿತ ಘುನಕೆ, ಅಭಿಷೇಕ ಸುತಾರ, ಶಿವರಾಜ ಚಿತಳೆ, ವರ್ಧಮಾನ ಈರನ್ನವರ, ರಾಜು ಈರನ್ನವರ, ಪೋಪಟ ಮಾಂಜರೆ, ರಾಹುಲ ಉಗಾರೆ ಸೇರಿದಂತೆ ನೂರಾರು ಯುವಕರು, ಗ್ರಾಮಸ್ಥರು ಭಾಗವಹಿಸಿದ್ದರು. 


ಸುದ್ದಿ ಓದಿ