ಪಾದಯಾತ್ರೆ: ಹೊರನಾಡು ಅನ್ನಪೂರ್ಣೇಶ್ವರಿಗೆ ದೇವಿ ಮಹಾಪೂಜೆ
ರಾಣಿಬೆನ್ನೂರು 12: ಇಲ್ಲಿನ ಗುರು ಕೊಟ್ಟೂರೇಶ್ವರ ನಗರದ ಕೊಟ್ಟೂರೇಶ್ವರ ಮಠದ ಸಭಾಂಗಣದಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಪಾದಯಾತ್ರೆ ಸೇವಾ ಸಮಿತಿ ವತಿಯಿಂದ ಹೊರನಾಡು ಅನ್ನಪೂರ್ಣೇಶ್ವರಿ ದೇವಿಯ 33 ನೇ ವರ್ಷದ ಪಾದಯಾತ್ರೆ ಮತ್ತು ಶ್ರಾವಣ ಮಾಸದ ನಿಮಿತ್ಯ ಮಹಾ ಪೂಜೆ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಹೊನ್ನಾಳಿ ಹಿರೇಕಲ್ಮಠದ ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ದಾವಣಗೆರೆ ಅವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರೀತಿ ಜಂಬಿಗಿ ಕುಟುಂಬದವರು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಪ್ರಸಾದ ವಿತರಣೆ ನಡೆಯಿತು.
ಸಿದ್ದಣ್ಣ ಹಾದಿಮನಿ, ವಿರುಪಾಕ್ಷಿ, ಶಿವಾನಂದ, ವಿಶ್ವನಾಥ ಜಂಬಿಗಿ, ಬಸವರಾಜ ಬೂದನೂರ, ಮಂಜುನಾಥ ಬೇತೂರ, ಹಾಲೇಶ ಹಿತ್ತಲಮನಿ, ಶಿವರಾಜ ಚಿಕ್ಕಬಿದರಿ, ಲಿಂಗಪ್ಪ, ಗೀರೀಶ ರಂಗಪ್ಪ, ಪ್ರವೀಣ ಯಂಡಿಗೇರಿ, ರವಿ ಚಲವಾದಿ, ಹನುಮಂತಪ್ಪ, ರಂಗಪ್ಪ ಮುಂತಾದವರು ಇದ್ದರು.