ವಿಶೇಷ ಚೇತನರಿಗೆ ವಿಶೇಷ ಗ್ರಹಿಕಾ ಶಕ್ತಿ ಇರುತ್ತದೆ: ಅರುಣ್ ಕುಮಾರ್
ರಾಣೆಬೆನ್ನೂರು 29: ವಿಶೇಷಚೇತನರಿಗೆ ಸಮಾನತೆಯಿಂದ ಬದುಕಿ, ಬಾಳಿ ಇತರರಂತೆ ತಮ್ಮ ಬದುಕನ್ನು ಸಾಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಸವಲತ್ತುಗಳನ್ನು ನೀಡುತ್ತದೆ. ಸೇವಾ ಮುಖಿಯಾಗಿರುವ ಸಂಘ-ಸಂಸ್ಥೆಗಳು ತಮ್ಮ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ಮೆರೆದಾಗ ಮಾತ್ರ, ಮಕ್ಕಳು ಶೈಕ್ಷಣಿಕ, ಮತ್ತು ಸಾಂಸ್ಕೃತಿಕವಾಗಿ ಮರೆಯಲು ಸಾಧ್ಯವಾಗುವುದು ಎನ್ನುವುದಕ್ಕೆ ಈ ಸಂಸ್ಥೆ ಮಾದರಿಯಾಗಿದೆ. ಎಂದು ಶಾಸಕ ಅರುಣ್ ಕುಮಾರ್ ಪೂಜಾರ್ ಹೇಳಿದರು.ಅವರು ಮಂಗಳವಾರ ಸಂಜೆ ಹಾಕಿ ಜನಸೇವಾ ಮಂಟಪದಲ್ಲಿ ಸೇವಾ ಅಂದರ ಸಂಸ್ಥೆಯ, ರೇಣುಕಾ ಯಲ್ಲಮ್ಮ ಕಿವುಡ ಮೂಕ ಮಕ್ಕಳ ಶಾಲೆಯು ,ವಿಶ್ವ ಶ್ರವಣ ನ್ಯೂನ್ಯತೆಯುಳ್ಳ
(ಕಿವುಡ) ಮಕ್ಕಳ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅಂಗವಿಕಲತೆ ಶಾಪವಲ್ಲ ಇದಕ್ಕೆ ಅನೇಕ ರೀತಿಯ ಕಾರಣಗಳಿರುತ್ತವೆ, ಇವರಿಂದ ಏನನ್ನಾದರೂ ಸಾಧಿಸುವ ಛಲವಿರುತ್ತದೆ, ಅವರಿಗೆ ಅನುಕಂಪಕ್ಕಿಂತ, ಸರಕಾರದ ಜೊತೆಗೆ, ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಸಹಾಯ ಹಸ್ತ ಚಾಚಿದಾಗ ವಿಶೇಷವಾಗಿ ತಮ್ಮ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಾಗುವುದು ಎಂದರು. ದಿವ್ಯ ಸಾನಿಧ್ಯ ವಹಿಸಿದ್ದ ತಿಪ್ಪಾಯಿಕೊಪ್ಪ ಜಂಗಮ ಕ್ಷೇತ್ರದ ವಿರುಪಾಕ್ಷ ಮಹಾಸ್ವಾಮಿಗಳು ತಮ್ಮ ದಿವ್ಯಸಾನ್ನಿಧ್ಯ ಯಾಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನಗರಸಭಾಧ್ಯಕ್ಷ ರೂಪ ಚಿನ್ನಿಕಟ್ಟಿ, ಉಪಾಧ್ಯಕ್ಷ ಪ್ರಭಾವತಿ ತಿಳುವಳ್ಳಿ, ಸದಸ್ಯರಾದ ಶೇಕಪ್ಪ ಹೊಸಗೌಡರ್, ಶಶಿಧರ್ ಬಸೇನಾಯಕ,ಕೆಪಿಸಿಸಿ ಸದಸ್ಯ ಪ್ರಕಾಶ್ ಕೋಳಿವಾಡ, ಸ್ವಾ ಕರವೇ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ಉಪಾಧ್ಯಕ್ಷ ಕೊಟ್ರೇಶಪ್ಪ ಎಮ್ಮಿ, ಜಿಲ್ಲಾ ಸಂಘದ ಅಧ್ಯಕ್ಷ ಮೌನೇಶ್ ಬಡಿಗೇರ್, ನಿವೃತ್ತ ಶಿಕ್ಷಣಾಧಿಕಾರಿ ಎ. ಬಿ.ಚಂದ್ರಶೇಖರ್ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು. ಸಂಸ್ಥೆಯ ಕಾರ್ಯದರ್ಶ ರೇಣುಕಾ ಶಿವಕುಮಾರ್ ಅವರು, ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭಕ್ಕೂ ಮುನ್ನ ದಿನಾಚರಣೆ ನಿಮಿತ್ತ ನಗರ ಪ್ರಧಾನ ಅಂಚೆ ಕಚೇರಿಯಿಂದ ವೈವಿಧ್ಯಮಯ ವೇಷಭೂಷಣಗಳೊಂದಿಗೆ ಮೆರವಣಿಗೆ ನಡೆಸಲಾಯಿತು ಉಪಪೊಲೀಸ್ ವರಿಷ್ಠಾಧಿಕಾರಿ, ಕೆ. ವಿ. ಶ್ರೀಧರ್ ಅವರು ಮೆರವಣಿಗೆ ಉದ್ಘಾಟಿಸಿ ಚಾಲನೆ ನೀಡಿದರು.ಸಂಸ್ಥೆಯ ಅಧ್ಯಕ್ಷ ಎಚ್.ಆರ್ಶಿವಕುಮಾರ್, ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಗವಿಕಲತೆ ಶಾಪವಲ್ಲ ವಿಷಯ ಕುರಿತು ಪ್ರೊ, ಬಿ.ಬಿ. ನಂದ್ಯಾಲ, ಅವರು ಉಪನ್ಯಾಸ ನೀಡಿದರು. ವಿಶೇಷಚೇತನ ರಿಂದ ನಡೆದ ನಾಡು-ನುಡಿ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಮತ್ತು ಪಾಲಕರ ಗಮನಸೆಳೆದವು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರ ಸಾಧಕ ಗಣ್ಯರನ್ನು ಸಂಸ್ಥೆಯ ಪರವಾಗಿ ಅಭಿನಂದಿಸಿ ಗೌರವಿಸಿ ಸನ್ಮಾನಿಸಲಾಯಿತು