ರಾಣೆಬೆನ್ನೂರ

ಕಲಾ- ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ

ಕಲಾ- ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ

ಲೋಕದರ್ಶನ ವರದಿ

ರಾಣಿಬೆನ್ನೂರ 06:  ಬೇಲೂರ ಘೋಷಣೆಯಿಂದ ಗ್ರಾಮ ಪಂಚಾಯಿತಿಗಳಿಗೆ ವಿಶೇಷ ಅಧಿಕಾರವಿದ್ದು ಇದರಿಂದ ಗ್ರಾಮಾಭವೃದ್ಧಿ ಮಾಡಲು ಸಂಪೂರ್ಣ ಪರಮಾಧಿಕಾರವಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಲು ಸ್ಥಳಿಯ ಜನಪ್ರತಿನಿಧಿಗಳ ಇಚ್ಚಾ ಮನೋಭಾವ ಬೆಳೆಸಿಕೊಳ್ಳಬೇಕಿದೆ ಎಂದು  ತಾಪಂ  ಡಿ.ವಿ. ಅಂಗೂರ ಹೇಳಿದರು.

   ಬುಧವಾರ ನಗರದ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಸಮಾಜಶಾಸ್ತ್ರ ವಿಭಾಗದ ವತಿಯಿಂದ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪಂಚಾಯತ್ ರಾಜ್ಯ ವ್ಯವಸ್ಥೆಯ ಸಂವಿಧಾನ 73 ನೇಯತಿದ್ದುಪಡಿಯ ಕಾರ್ಯಗಳನ್ನು ಕುರಿತು ವಿವರಿಸಿದರು.

   ಉಪನ್ಯಾಸಕ  ರವಿ ಲಿಂಗನಗೌಡ್ರ,  ಬುಡಪನಹಳ್ಳಿ ಪಿಡಿಓ ಪರಶುರಾಮ ಅಗಸನಹಳ್ಳಿ,  ದೇವರಾಜ ಸಣ್ಣಕರಿಗಾರ ಮಾತನಾಡಿದರು. ಪ್ರಾಚಾರ್ಯ ಪ್ರೊ.ನಾರಾಯಣ ನಾಯಕ ಎ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಎಮ್.ಎನ್ ಸೂರಣಗಿ, ಪ್ರೊ. ಶೋಭಾ ದೊಡ್ಡನಾಗಳ್ಳಿ, ಪ್ರೊ.ರತ್ನವ್ವ ಹಾದಿಮನಿ, ಪ್ರಿಯಾ ಕಾಗಿನೆಲೆ, ದೇವಿಕಾ, ಲಕ್ಷ್ಮಿ ಲಮಾಣಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ಇದ್ದರು 

ಸುದ್ದಿ ಓದಿ