ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪ್ರವಚನ ಕಾರ್ಯಕ್ರಮ
ಹುಬ್ಬಳ್ಳಿ 23 : ರಾಮಕೃಷ್ಣ ವಿವೇಕಾನಂದ ಆಶ್ರಮ, ಹುಬ್ಬಳ್ಳಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಇದೇ ತಿಂಗಳ ದಿನಾಂಕ 24 ಮತ್ತು 25 ಶನಿವಾರ ಮತ್ತು ಭಾನುವಾರ ಸಂಜೆ 7.00 ರಿಂದ 8.15 ರವರೆಗೆ ಹುಬ್ಬಳ್ಳಿಯ ಪಂಡಿತ ರವಿ ಆಚಾರ್ಯ ಮತ್ತಿಹಳ್ಳಿ ಅವರಿಂದ ಆಶ್ರಮದ ಸಭಾಂಗಣದಲ್ಲಿ ಬಾಲ ಶ್ರೀಕೃಷ್ಣನ ಲೀಲಾ ವಿನೋದಗಳು ವಿಷಯದ ಕುರಿತು ವಿಶೇಷ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸದ್ಭಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ದಿವ್ಯತ್ರಯರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.