ರಾಣೆಬೆನ್ನೂರ

'ಮರೆತುಹೋದ ಹಳ್ಳೂರು, ದಕ್ಷಿಣ ಭಾರತದ ದುರಂತ ಇತಿಹಾಸಕ್ಕೆ ಸಾಕ್ಷಿಯೇ': ಉಪನ್ಯಾಸ ಕಾರ್ಯಕ್ರಮ

'ಮರೆತುಹೋದ ಹಳ್ಳೂರು, ದಕ್ಷಿಣ ಭಾರತದ ದುರಂತ ಇತಿಹಾಸಕ್ಕೆ ಸಾಕ್ಷಿಯೇ': ಉಪನ್ಯಾಸ ಕಾರ್ಯಕ್ರಮ

ರಾಣಿಬೆನ್ನೂರ 05: ಇಲ್ಲಿನ ಕೆಎಲ್ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ಕನ್ನಡ ಹಾಗೂ ಇತಿಹಾಸ ವಿಭಾಗದಿಂದ ಮರೆತುಹೋದ ಹಳ್ಳೂರು, ದಕ್ಷಿಣ ಭಾರತದ ದುರಂತ ಇತಿಹಾಸಕ್ಕೆ ಸಾಕ್ಷಿಯೇ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಮೈಸೂರಿನ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ. ಎಚ್.ಜಿ. ಕೃಷ್ಣ ಹೊಳೆಅರಳಹಳ್ಳಿ ಅವರು ಮರೆತುಹೋದ ಹಳ್ಳೂರು ದಕ್ಷಿಣ ಭಾರತದ ದುರಂತ ಇತಿಹಾಸಕ್ಕೆ ಸಾಕ್ಷಿಯೇ ಕುರಿತು ತಮ್ಮ ಸಂಶೋಧನಾ ಗ್ರಂಥದ ಕುರಿತು ಸಮಗ್ರವಾದ ಮಾಹಿತಿ ಹಾಗೂ ವೈಜ್ಞಾನಿಕ ಅಧ್ಯಯನದ ಮೂಲಕ ಸಂಪೂರ್ಣವಾದ ಮಜಲುಗಳನ್ನು ಹಾಗೂ ಪ್ರಾಗೈತಿಕಹಾಸ ಕಾಲದಿಂದ ಬ್ರಿಟಿಷ್ ಅಡಳಿತ ವರೆಗಿನ ಇತಿಹಾಸ ತಿಳಿಸಿದರು.

ಉಪನ್ಯಾಸಕ ಎಸ್.ಎಲ್ ಕರ್ಲವಾಡ, ನೇತ್ರಾವತಿ ಪೂಜಾರ ಬಿ.ಎ, ಪ್ರಾಚಾರ್ಯ ಪ್ರೊ. ನಾರಾಯಣ ನಾಯಕ ಎ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಶೋಭಾ ದೊಡ್ಡನಾಗಳ್ಳಿ, ಕನ್ನಡ ವಿಭಾಗದ ಪ್ರೊ. ಸಾಯಿಲತಾ ಮಡಿವಾಳರ ಮತ್ತು ಇತಿಹಾಸ ವಿಭಾಗದ ಪ್ರೊ. ಕೃಷ್ಣ ಎಲ್. ಎಚ್, ನೇತ್ರಾ ದೊಡ್ಡಮನಿ ಬಿ.ಎ, ಭಾಗ್ಯವತಿ ದೇಶಪಾಂಡೆ, ಬಸೀರಾಬಾನು ಮೇವುಂಡಿ ಇದ್ದರು. 


 

ಸುದ್ದಿ ಓದಿ