ಧಾರವಾಡ - ಹುಬ್ಬಳ್ಳಿ

ದಿ. ಕೃಷ್ಣಾಬಾಯಿ ಪಣಜೀಕರ್‌’ ಕುರಿತು ವಿಶೇಷ ಉಪನ್ಯಾಸ

ದಿ. ಕೃಷ್ಣಾಬಾಯಿ ಪಣಜೀಕರ್‌’ ಕುರಿತು ವಿಶೇಷ ಉಪನ್ಯಾಸ

ಧಾರವಾಡ,08: ಬ್ರಿಟೀಷರ ವಿರುದ್ಧ ಅಹಿಂಸಾತ್ಮಕ ಹಾಗೂ ಗಾಂಧೀವಾದಿ ಚಳುವಳಿಯ ಮೂಲಕ ಮುಂಬೈ-ಕರ್ನಾಟಕದಲ್ಲಿ ಸಾರ್ವಜನಿಕರನ್ನು ಒಗ್ಗೂಡಿಸಿ ರಾ​‍್ಯಲಿ ಹಾಗೂ ಮೆರವಣಿಗೆಗಳ ಮುಖಾಂತರ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಅಪ್ರತಿಮ ಯೋಗದಾನವನ್ನು ಕೃಷ್ಣಾಬಾಯಿಯವರು ನೀಡಿದರು. ಸ್ವ-ಉದ್ಯೋಗ ಹಾಗೂ ಸ್ವದೇಶಿ ವಸ್ತುಗಳನ್ನು ಬಳಸಿ ಸ್ವಾಭಿಮಾನಯುತ ಜೀವನ ನಡೆಸಲು ಆಹ್ವಾನಿಸಿದರು. ಗಾಂಧೀಜಿ ಹಾಗೂ ಬಾಲಗಂಗಾಧರ ತಿಲಕರಂತಹ ರಾಷ್ಟ್ರೀಯ ಚಳುವಳಿಯ ನಾಯಕರಿಗೆ ಸಾವಿರಾರು ಮಹಿಳೆಯರ ಜೊತೆಗೂಡಿ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದರು.  

ಧಾರವಾಡ ನಗರದ ಕೆ. ಇ. ಬೋರ್ಡಿನ ಸಂಯುಕ್ತ ಪದವಿ ಪೂರ್ವ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ದಿನಾಂಕ: ಆ. 08-2024 ರಂದು 77ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಅವಿಭಜಿತ ಧಾರವಾಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಕುರಿತು ವಿಶೇಷ ಉಪನ್ಯಾಸ ಮಾಲಿಕೆ ಕಾರ್ಯಕ್ರಮವು ಜರುಗಿತು. ಈ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ನಂತರ ಉಪಸ್ಥಿತ ಗಣ್ಯರು ದಿ. ಕೃಷ್ಣಾಬಾಯಿ ಪಣಜೀಕರ್ ಅವರ ಭಾವಚಿತ್ರಕ್ಕೆ ಪುಷ್ಪವನ್ನು ಸಮರ​‍್ಿಸಿದರು. ಈ ಸಮಾರಂಭಕ್ಕೆ ಮುಖ್ಯ ಅತಿಥಿ ಅರುಣಕುಮಾರ ಗಂಜೀಗಟ್ಟಿ, ಇತಿಹಾಸ ಉಪನ್ಯಾಸಕರು, ಕೆ. ಇ. ಬೋರ್ಡಿನ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ, ಧಾರವಾಡ ಇವರು ‘ಸ್ವಾತಂತ್ರ್ಯ ಹೋರಾಟಗಾರ್ತಿ ದಿ.ಕೃಷ್ಣಾಬಾಯಿ ಪಣಜೀಕರ್‌’ ಮೇಲೆ ವಿಶೇಷ ಉಪನ್ಯಾಸ ನೀಡಿದರು.  

ಸ್ವಾತಂತ್ರ್ಯ ಚಳುವಳಿಯ ತೀವ್ರತೆ ಹೋರಾಟಕ್ಕಾಗಿ ಬ್ರಿಟೀಷ್ ಸರಕಾರ 3 ಬಾರಿ ಇವರಿಗೆ ಸೆರೆಮನೆ ವಾಸವನ್ನು ನೀಡಿತ್ತು. ಇಂದಿನ ವಿದ್ಯಾರ್ಥಿಗಳು ಕೃಷ್ಣಾಬಾಯಿಯವರ ಕರೆಯಂತೆ ಸ್ವಾವಲಂಬಿ ಜೀವನವನ್ನು ನಡೆಸಲು ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ತ್ಯಜಿಸಿ ಭಾರತೀಯ ಶ್ರೇಷ್ಠ ಮೂಲ ಸಂಸ್ಕೃತಿಯನ್ನು ಅನುಸರಿಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.  

ಸಮಾರಂಭದ ಉದ್ಘಾಟಕರಾದ  ಡಿ.ಎಸ್‌. ರಾಜಪುರೋಹಿತ, ಕಾರ್ಯದರ್ಶಿ, ಕೆ.ಇ. ಬೋರ್ಡ್‌, ಧಾರವಾಡ ಮಾತನಾಡಿ ಭಾರತೀಯ ಮೂಲ ಶೈಕ್ಷಣಿಕ ವ್ಯವಸ್ಥೆಯಾದ ಗುರುಕುಲ್ ಪದ್ಧತಿಯನ್ನು ಅಂತ್ಯಗೊಳಿಸಲು ಸಂಚು ಮಾಡಿ ಮೆಕಾಲೆಯ ವರದಿಯನ್ನು ಜಾರಿಗೆ ತಂದರು. 1909 ಹಾಗೂ 1919 ರಲ್ಲಿ ಸಾಂವಿಧಾನಿಕ ಸುಧಾರಣೆ ತರುತ್ತೇವೆ ಎಂದು ಹೇಳಿ ಭಾರತೀಯರನ್ನು ಒಡೆಯುವ ಅಂಶವನ್ನು ಅನುಷ್ಠಾನಗೊಳಿಸಿದರು ಎಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. 

ಗೌರವ ಉಪಸ್ಥಿತರಾಗಿ ಆಗಮಿಸಿದ  ಪ್ರಕಾಶ ಸುಣಗಾರ, ಧಾರವಾಡ ಜಿಲ್ಲಾ ಇತಿಹಾಸ ನೋಡಲ್ ಅಧಿಕಾರಿಗಳು, ಧಾರವಾಡ ಇವರು ಪ್ರಾಸ್ತಾವಿಕ ಮಾತನಾಡಿದರು ಕೆ. ಇ. ಬೋರ್ಡ್‌ ಮಹಾವಿದ್ಯಾಲಯದ ಪ್ರಾಚಾರ್ಯರಾದ  ಸುನಿತಾ ಜಿ. ಕಡಪಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.  ಇದೇ ಸಂದರ್ಭದಲ್ಲಿ ಶ್ರೀ ಇಮಾಮಸಾಬ್ ಹಾಗೂ ಕಲಾ ತಂಡದವರು ಭಾವೈಕ್ಯತಾ ಗೀತೆ ಹಾಗೂ ಜನಪದ ಗೀತೆಗಳನ್ನು ಹಾಡುವುದರ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವನ್ನು ತಮ್ಮ ಜನಪದ ಸಂಸ್ಕೃತಿಯ ಸೊಬಗಿನ ಮೂಲಕ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿದರು.  

ಮಹಾವಿದ್ಯಾಲಯದ ವಿದ್ಯಾರ್ಥಿನಿ ಅಮೂಲ್ಯ ಹಾಗೂ ಸಂಗಡಿಗರಿಂದ ಪ್ರಾರ್ಥನೆ ಜರುಗಿತು. ಕನ್ನಡ ಉಪನ್ಯಾಸಕರಾದ  ಜಿ. ಸಿ. ಕುಲಕರ್ಣಿ ಎಲ್ಲ ಗಣ್ಯರನ್ನು ಸ್ವಾಗತಿಸಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಆಂಗ್ಲ ಉಪನ್ಯಾಸಕರಾದ ಶಿ ಹೇಮಲತಾ ಕರಿಗಾರ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಜೀವಶಾಸ್ತ್ರ ಉಪನ್ಯಾಸಕ ಕುಮಾರಿ ಸೂಕಿ ಬಿ. ಹಲಗಿ ವಂದಿಸಿದರು. ಇದೇ ಸಂದರ್ಭದಲ್ಲಿ ಅತಿಥಿಗಳನ್ನು ಹಾಗೂ ಜನಪದ ಕಲಾ ತಂಡವನ್ನು ಆಡಳಿತ ಮಂಡಳಿ ಹಾಗೂ ಮಹಾವಿದ್ಯಾಲಯದ ಪರವಾಗಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಸಮಸ್ತ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಸುಮಾರು 300 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ