ವಿಶೇಷ ಗ್ರಾಮ ಸಭೆ: ಸಮಸ್ಯೆಗಳ ಪರಿಹಾರಕ್ಕೆ ಚಿಂತನೆ
ಯರಗಟ್ಟಿ 08: ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡುವ ಇಂತಹ ಸಮಯದಲ್ಲಿ ಸಾರ್ವಜನಿಕರು ನಮ್ಮ ಪರಿಸರವನ್ನು ಸ್ವಚ್ಛತೆಗಾಗಿ ಹೆಚ್ಚನ ಗಮನ ಹರಿಸಬೇಕು ಎಂದು ಅಭಿವೃದ್ಧಿ ಅಧಿಕಾರಿ ಎ.ಬಿ.ಬಂಗಾರಿ ಹೇಳಿದರು.
ಸಮೀಪದ ತಲ್ಲೂರ ಗ್ರಾಮದ ಪೇಟೆ ಸಮುದಾಯ ಭವನದಲ್ಲಿ ಇತ್ತೀಚಗೆ ನಡೆದ ವಿಶೇಷ ಗ್ರಾಮಸಭೆಯಲ್ಲಿ ಸಾರ್ವಜನಿಕರನ್ನು ಉದ್ಧೇಶಿಸಿ ಮಾತನಾಡಿದ ಅವರು ನೀರಿನ ಸಂಗ್ರಹಣೆಯ ಪರಿಕರಗಳನ್ನು ಮೇಲಿಂದ ಮೇಲೆ ಸ್ವಚ್ಛಗೊಳಿಸುತ್ತಿರಬೇಕು. ತ್ಯಾಜ್ಯ ವಸ್ತುಗಳನ್ನು ಶೀಘ್ರ ಹಸಿ ಮತ್ತು ಒಣ ಕಸ ಭೇರ್ಪಡಿಸಿ ಸಂಗ್ರಹಿಸಿದ ಕಸವನ್ನು ವಿಲೇವಾರಿ ಮಾಡುವದರಿಂದ ರೋಗಗಳನ್ನು ತಡೆಯಬಹುದಾಗಿದೆ ಎಂದರು.
ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಾದ ಕುರಿ ಶೆಡ್, ದನಗಳ ದೊಡ್ಡಿ, ಇಂಗುಗುಂಡಿ, ಬದು ನಿರ್ಮಾಣ , ಕೃಷಿ ಹೊಂಡ ಹಾಗೂ ಇತರೆ ವಿವಿಧ ಕಾಮಗಾರಿಗಳನ್ನು ಮಾಡುವದಕ್ಕೆ ಅವಕಾಶವಿದೆ, ಸಾರ್ವಜನಿಕರು ಉದ್ಯೋಗ ಖಾತ್ರಿ ಯೋಜನೆ ಸದ್ಬಳಿಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕ ಆರೋಗ್ಯ ಅಧಿಕಾರಿ ಮಹೇಶ ಚಿತ್ತರಗಿ ಮಾತನಾಡಿ ರೇಬೀಸ್ ರೋಗವು ವೈರಾಣುವಿನಿಂದ ಹರಡುವ ಸೋಂಕು ರೋಗವಾಗಿದ್ದು ಗುಣಪಡಿಸಲು ಯಾವುದೇ ರೀತಿಯ ಆರೋಗ್ಯ ಚಿಕಿತ್ಸೆ ಇಲ್ಲದ ಕಾರಣ ನಾಯಿಗಳಿಗೆ ಲಸಿಕೆಯನ್ನು ಕೊಡಿಸುವ ಮೂಲಕ ಸುರಕ್ಷತಾ ಕ್ರಮಗಳನ್ನು ವಹಿಸಬೇಕಾಗಿದೆ ಎಂದರು.
ಪಶು ವೈಧ್ಯಾಧಿಕಾರಿ ವಿದ್ಯಾ ಕಾಂತಿ, ಕೃಷಿ ಅಧಿಕಾರಿ ಎಮ್.ಜಿ.ಕಳಸಪ್ಪನ್ನವರ, ತಮ್ಮ ಇಲಾಖೆಯ ಯೋಜನೆಗಳನ್ನು ವಿವರವಾಗಿ ಗ್ರಾಮಸ್ಥರಿಗೆ ತಿಳಿಸಿದರು.
ಗ್ರಾಪಂ ಅಧ್ಯಕ್ಷ ಬಸವರಾಜ ಕಡಬಿ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷ ಗಂಗವ್ವ ವನ್ನೂರ, ಡಾ.ಪ್ರಮೋದ ಸಿಂದಗಿ, ಗ್ರಾಮ ಲೆಕ್ಕಾಧಿಕಾರಿ ಶೋಭಾ ಶಿದ್ನಾಳ, ಪ್ರಧಾನ ಗುರು ಡಿ.ಡಿ.ಭೋವಿ, ಚೆನ್ನಯ್ಯ ಪೂಜೇರ, ಸಚೀನ ಹೋಳಿ, ಫಕೀರಪ್ಪ ಬೆಡಸೂರ, ಶಿವಾನಂದ ಮಲಕನ್ನವರ, ಶಶಿಧರ ತಳವಾರ, ರಾಜಶೇಖರ ಅಣ್ಣಿಗೇರಿ, ವಿಠ್ಠಲ ಬಡಿಗೇರ, ರಮೇಶ ನರಿ, ಸುಭಾನಿ ಕುದರಿ, ರಾಮಚಂದ್ರ ಹಮ್ಮಿಣಿ, ಜಿ.ಪಿ.ಬಸಿಡೊಣಿ, ದೀಪಾ ಸಾಲಿ, ಈರವ್ವ ವಿಭೂತಿಮಠ, ಗೀತಾ ಸಕ್ರಿ, ಸುಶೀಲಾ ಹಿರೇಮಠ, ಮಂಜುಳಾ ಮುರಗೋಡ, ಮಹಾದೇವಿ ಬಾರ್ಕ್ , ಜ್ಯೋತಿ ಬೆಡಸೂರ, ಶೋಭಾ ಚುಳಕಿ, ಭೀಮವ್ವ ಭಜಂತ್ರಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.