ಟೀಮ್ ಇಂಡಿಯಾಗೆ ಅಭಿನಂದನೆ ಸಲ್ಲಿಸಿದ ಸೌರವ್ ಗಂಗೂಲಿ
ನವದೆಹಲಿ, ಡಿಸೆಂಬರ್ 30: ಆಸ್ಟ್ರೇಲಿಯಾ ವಿರುದ್ಧ ಬಾಕ್ಸಿಂಗ್
ಡೇ ಟೆಸ್ಟ್ ಪಂದ್ಯದಲ್ಲಿ ಎಂಟು ವಿಕೆಟ್‌ಗಳಿಂದ ಗೆದ್ದ ಭಾರತ ತಂಡ ಹಾಗೂ ನಾಯಕ ಅಜಿಂಕ್ಯ ರಹಾನೆ ಅವರನ್ನು
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಗುಣಗಾನ ಶ್ಲಾಘಿಸಿದ್ದಾರೆ.
ಆಸ್ಟ್ರೇಲಿಯಾ
ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳಿಂದ ಗೆಲುವು ಪಡೆದಿದ್ದಕ್ಕೆ
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸಂತಸ ವ್ಯಕ್ತಪಡಿಸಿದರು ಹಾಗೂ ಅಜಿಂಕ್ಯ ರಹಾನೆ ಬಳಗವನ್ನು ಮುಕ್ತಕಂಠದಿಂದ
ಶ್ಲಾಘಿಸಿದರು.
"ಎಂಸಿಜಿಯಲ್ಲಿನ
ವಿಶೇಷ ಗೆಲುವಿದು..ಈ ಮೈದಾನದಲ್ಲಿ ಆಡುವುದನ್ನು ಭಾರತ ತಂಡ ಯಾವಾಗಲೂ ಇಷ್ಟಪಡುತ್ತದೆ. ವೆಲ್ ಡನ್
ಅಜಿಂಕ್ಯ ರಹಾನೆ...ಒಳ್ಳೆಯ ಜನರು ಮೊದಲೇ ಮುಗಿಸುತ್ತಾರೆ..ತಂಡದ ಎಲ್ಲರಿಗೂ ಅಭಿನಂದನೆಗಳು..ಇನ್ನುಳಿದ
ಎರಡು ಟೆಸ್ಟ್ ಪಂದ್ಯಗಳಿಗೆ ಶುಭವಾಗಲಿ," ಎಂದು ಸೌರವ್ ಗಂಗೂಲಿ ಟ್ವೀಟ್ ಮಾಡಿದ್ದಾರೆ.
ಅಡಿಲೇಡ್
ಟೆಸ್ಟ್ ಪಂದ್ಯದಲ್ಲಿ ಎಂಟು ವಿಕೆಟ್ ಹೀನಾಯ ಸೋಲು ಒಂದು ಕಡೆಯಾದರೆ, ಮತ್ತೊಂದೆಡೆ ಕಾಯಂ ನಾಯಕ ವಿರಾಟ್
ಕೊಹ್ಲಿ, ರೋಹಿತ್ ಶರ್ಮಾ, ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ಅನಪಸ್ಥಿತಿ ಎರಡನೇ ಪಂದ್ಯಕ್ಕೆ
ಕಾಡುತ್ತಿತ್ತು. ಇದರ ಹೊರತಾಗಿಯೂ ಯುವ ಆಟಗಾರರನ್ನೊಳಗೊಂಡ ಅಜಿಂಕ್ಯ ರಹಾನೆ ನಾಯಕತ್ವದ ಟೀಮ್ ಇಂಡಿಯಾ,
ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್ ಗೆದ್ದು ಕಮ್‌ಬ್ಯಾಕ್ ಮಾಡಿದ್ದು ಅತ್ಯಂತ
ವಿಶೇಷ.
ಭಾರತದ
ಎಂಟು ವಿಕೆಟ್‌ಗಳ ಗೆಲುವಿನಲ್ಲಿ ಹಿರಿಯ ಆಟಗಾರರಾದ ಅಜಿಂಕ್ಯ ರಹಾನೆ, ಆರ್ ಅಶ್ವಿನ್, ಜಡೇಜಾ ಹಾಗೂ
ಜಸ್‌ಪ್ರಿತ್ ಬುಮ್ರಾ ಮಹತ್ತರ ಪಾತ್ರವಹಿಸಿದರೆ, ಯುವ ಆಟಗಾರರಾದ ಶುಭಮನ್ ಗಿಲ್, ಮೊಹಮ್ಮದ್ ಸಿರಾಜ್
ಹಾಗೂ ರಿಷಭ್ ಪಂತ್ ಕೂಡ ಉಪಯುಕ್ತ ಕಾಣಿಕೆ ನೀಡಿದ್ದರು.