ಐಸಿಯುನಲ್ಲಿ ಹಿರಿಯ ಖ್ಯಾತ ನಟ ಸೌಮಿತ್ರಾ ಚಟರ್ಜಿ
ಕೋಲ್ಕತಾ, ಅ 10 : ಕಳೆದ ಮಂಗಳವಾರ ಕೋವಿಡ್ -19 ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟ ನಂತರ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ಖ್ಯಾತ ಬಂಗಾಳಿ ಚಲನಚಿತ್ರ ನಟ ಸೌಮಿತ್ರಾ ಚಟರ್ಜಿ ಅವರ ಆರೋಗ್ಯಸ್ಥಿತಿ ಶುಕ್ರವಾರ ರಾತ್ರಿ ಹದಗೆಟ್ಟ ನಂತರ ಆಮ್ಲಜನಕದ ಸಹಾಯದಲ್ಲಿ ಇರಿಸಲಾಗಿದೆ. ನಗರದ ಬೆಲ್ಲೆವ್ಯೂ ಆಸ್ಪತ್ರೆಯಲ್ಲಿ ವೈದ್ಯರ ತಂಡವು ಹಗಲು-ರಾತ್ರಿ ಅವರ ಆರೋಗ್ಯ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ.85 ವರ್ಷದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಚಟರ್ಜಿ ಅವರ ಆರೋಗ್ಯ ತೀವ್ರ ಹದೆಗೆಟ್ಟಿದ ಹಿನ್ನೆಲೆಯಲ್ಲಿ ಐಸಿಯುಗೆ ದಾಖಲಿಸಲಾಗಿದೆ. ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಜಿತ್ ರೇ ಅವರ ಚಲನಚಿತ್ರಗಳಲ್ಲಿ "ಫೆಲುಡಾ" ಪಾತ್ರದಲ್ಲಿ ನಿಬ್ಬೆರಗಾಗಿಸುವ ಪಾತ್ರಕ್ಕಾಗಿ ಚಟರ್ಜಿ ಮನ್ನಣೆ ಗಳಿಸಿದ್ದಾರೆ.