ಇಂಡಿ

ಶಿಕ್ಷಣದಿಂದಲೇ ಸಮಾಜದ ಪ್ರಗತಿ ಸಾಧ್ಯ: ಶಾಸಕ ಪಾಟೀಲ

ಶಿಕ್ಷಣದಿಂದಲೇ ಸಮಾಜದ ಪ್ರಗತಿ ಸಾಧ್ಯ: ಶಾಸಕ ಪಾಟೀಲ

ಇಂಡಿ: ದೇವಿಯು ಧೈರ್ಯ ಹಾಗೂ ಶೌರ್ಯದ ಸಂಕೇತ, ದುರ್ಗೆಯು ಶಾಂತಿ, ಸಮೃದ್ಧಿ ಮತ್ತು ಧರ್ಮವನ್ನು ಬೆದರಿಸುವ ದುಷ್ಟ ಮತ್ತು ರಾಕ್ಷಸ ಶಕ್ತಿಗಳನ್ನು ಸಂಹರಿಸಲು ಲೋಕಕಲ್ಯಾಣಕ್ಕಾಗಿ ಅವತಾರವೆತ್ತವಳು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. 

ಮಂಗಳವಾರ ತಾಲೂಕಿನ ಲಚ್ಯಾಣ ತಾಂಡಾ ಗ್ರಾಮಸ್ಥರಿಂದ ಮತ್ತು ಲಚ್ಯಾಣ ತಾಂಡಾ ಸೇವಾಲಾಲ ತರುಣ ಸಂಘದಿಂದ ನಡೆದ ಜೈ ಜಗದಂಬಾ ಮತ್ತು ಶ್ರೀ ಸೇವಾಲಾಲ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾಹರೋಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.  

ಬಂಜಾರಾ ಸಮುದಾಯದವರು ಶ್ರಮಿಕರು. ಸಮುದಾಯದವರು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಮಾಜದ ಅರ್ಥಿಕ ಬದಲಾವಣೆ ತರಬೇಕು. ಶಿಕ್ಷಣದಿಂದಲೇ ಸಮಾಜದ ಪ್ರಗತಿ ಸಾಧ್ಯ ಎಂದರು. 

ಸಾನಿಧ್ಯ ವಹಿಸಿದ ಪೂಜ್ಯ ಡಾ. ವೃಷಭಲಿಂಗೇಶ್ವರ ಶ್ರೀಗಳು ಮಾತನಾಡಿ ಸೇವಾಲಾಲರು ಆಧ್ಯಾತ್ಮದ ಮೂಲಕ ಉಪದೇಶಗಳನ್ನು ನೀಡಿ ಸನ್ಮಾರ್ಗದತ್ತ ಕೊಂಡೊಯ್ದರು. ಸೇವಾಲಾಲರ ಬೋಧನೆ ಮತ್ತು ಚಿಂತನೆಗಳು ಬಂಜಾರಾ ಜನಾಂಗದಲ್ಲಿ ಏಕತೆ ಉಂಟು ಮಾಡಿದೆ ಎಂದರು.  

ಗುರು ಪವಾರ, ದುಂಡು ಮುಜಗೊಂಡ, ಶಿಕ್ಷಕ ಹೊನಸೂರೆ ಮಾತನಾಡಿದರು.  

ಸಮಾರಂಭದಲ್ಲಿ ನಿವೃತ್ತ ಪ್ರಾಚಾರ್ಯ ಎ.ಪಿ.ಕಾಗವಾಡಕರ, ತಾಂಡಾ ಮುಖ್ಯಸ್ಥ ಶಂಕರ ಪವಾರ, ರಾಜು ನದಾಫ, ಗ್ರಾ.ಪಂ ಸದಸ್ಯ ಅಶೋಕಗೌಡ ಪಾಟೀಲ, ರಮೇಶ ಚವ್ಹಾಣ, ಹರಿಶ್ಚಂದ್ರ ಪವಾರ, ಚನ್ನಪ್ಪ ಪಾಂಡು ಪವಾರ, ನಾಮದೇವ ರಾಠೋಡ, ನಿಂಬಾಜಿ ಪವಾರ, ದಾಸು ಲಾಲು ಪವಾರ, ಸುಭಾಸ ಪವಾರ, ಲಕ್ಷ್ಮಣ ರಾಠೋಡ, ಕೃಷ್ಣಾ ಪವಾರ ಮತ್ತಿತರಿದ್ದರು.  


ಸುದ್ದಿ ಓದಿ