ಗೆಳೆಯರ ಬಳಗದಿಂದ ಸಾಮಾಜಿಕ ಕಾರ್ಯಗಳು
ಇಂಡಿ 26: ಪಟ್ಟಣದ ವೀರಭಾರತಿ ವಿದ್ಯಾಕೇಂದ್ರದ 1999, 2000ನೇ ಸಾಲಿನ ಗೆಳೆಯರ ಬಳಗದಿಂದ ಸಾಕಷ್ಟು ಸಾಮಾಜಿಕ ಕೆಲಸಗಳು ನಡೆಯುತ್ತಿದ್ದು ಜನಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಈ ಗೆಳೆಯರ ಬಳಗದ ಯುವಕ-ಯುವತಿಯರು ತಾಲ್ಲೂಕಿನಲ್ಲಿ ಏನೇ ಅವಘಡವಾದರೂ ತಮ್ಮ ಕೈಲಾದಷ್ಟು ಕಾರ್ಯಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಭೀಮಾ ಹಾಗೂ ಕೃಷ್ಣಾ ಪ್ರವಾಹದ ಸಂದರ್ಭದಲ್ಲಿ ಸಾವಿರಾರು ಜನರಿಗೆ ಹಾಸಿಗೆ-ಹೊದಿಕೆ, ಊಟದ ವ್ಯವಸ್ಥೆ ಕಲ್ಪಿಸಿದ್ದರು. ಇಂಡಿ ತಾಲ್ಲೂಕಿನ ಹಲವೆಡೆ ಗುಡಿಸಲು ಸುಟ್ಟು ಹಾನಿಯಾದಾಗ ಅವರಿಗೆ ಗೃಹಬಳಕೆಯ ವಸ್ತುಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದನ್ನು ಸ್ಮರಿಸಬಹುದಾಗಿದೆ.
ಗುರುವಾರರಂದು ಪಟ್ಟಣದ ಸಿಂದಗಿ ರಸ್ತೆಯ ಪಕ್ಕದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ನೆಟ್ಟ ಸಸಿಗಳನ್ನು ರಕ್ಷಿಸುವ ಉದ್ದೇಶದಿಂದ ಗೆಳೆಯರ ಬಳಗದ ಎಲ್ಲ ಕಾರ್ಯಕರ್ತರು 42ಸಸಿ ರಕ್ಷಾ ಕವಚಗಳನ್ನು (ಟ್ರೀ ಗಾರ್ಡ) ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಹಸ್ತಾಂತರಿಸಿ ಸಾಮಾಜಿಕ ಕಾರ್ಯ ಕೈಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಗೆಳೆಯರ ಬಳಗದ ಸುಹಾಸಿನಿ ಹಿರೇಪಟ್ಟ, ವೈಶಾಲಿ ಕಕ್ಕಳಮೇಲಿ, ಶಿವಾನಂದ ಹಿರೇಮಠ, ರಾಘವೇಂದ್ರ ಹೂಗಾರ, ಪ್ರಕಾಶ ಮೈದರಗಿ, ಪವನ ಆಧ್ಯ, ರಮೇಶ ಮಸಳಿ, ಮಂಜುನಾಥ ಕಾಮಗೊಂಡ, ಮಲ್ಲಿಕಾರ್ಜುನ ಬಿರಾದಾರ, ಸುರೇಶ ಕಾಮಗೊಂಡ, ಶಶಿಧರ ತೋಳನೂರ, ಮಲ್ಲಿಕಾರ್ಜುನ ಉಟಗಿ, ಬಸವರಾಜ ಹಿಟ್ನಳ್ಳಿ ಸೇರಿದಂತೆ ಹಿರಿಯರಾದ ಅಣ್ಣೇಶ ಕಿತ್ತಲಿ, ಜಿ.ಬಿ. ಬಿರಾದಾರ ಇದ್ದರು.
ಪಟ್ಟಣದ ಎಲ್ಲ ಮುಖ್ಯ ರಸ್ತೆಗಳ ಪಕ್ಕದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯವರು ಸಸಿ ನೆಟ್ಟಿದ್ದಾರೆ. ಅವುಗಳನ್ನು ದನ-ಕರುಗಳು ತಿಂದು ನಾಶಪಡಿಸಿದ್ದನ್ನು ಕಂಡು ನಮ್ಮ ಗೆಳೆಯರ ಬಳಗದಿಂದ ಆ ಸಸಿಗಳನ್ನು ರಕ್ಷಿಸಲು ರಕ್ಷಾ ಕವಚ (ಟ್ರೀಗಾರ್ಡ) ನೀಡಿದ್ದೇವೆ. 1999-2000 ನೇ ಸಾಲಿನಲ್ಲಿ ಜೊತೆಗೆ ಕಲಿತ ನಾವೆಲ್ಲ ಈಗಲೂ ಸಂಪರ್ಕದಲ್ಲಿದ್ದೇವೆ. ಸಾಮಾಜಿಕ ಕೆಲಸಕ್ಕೆ ಎಲ್ಲರೂ ಸಾಥ್ ನೀಡುತ್ತಿದ್ದಾರೆ.
ಡಾ. ಸುಹಾಸಿನಿ ಹಿರೇಪಟ್ಟ. ಗೆಳೆಯರ ಬಳಗದ ಸದಸ್ಯೆ.
ವೀರಭಾರತಿ ಗೆಳೆಯರ ಬಳಗದವರು 42 ಸಸಿ ರಕ್ಷಾ ಕವಚ (ಟ್ರೀಗಾರ್ಡ) ನೀಡಿದ್ದಾರೆ. ಅವುಗಳನ್ನು ಸಸಿಗಳಿಗೆ ಹಾಕಿದರೆ ಸಸಿಗೆ ಯಾವುದೇ ರೀತಿಯಿಂದ ಹಾನಿಯಾಗಲ್ಲ. ಸಸಿ ರಕ್ಷಣೆಗೆ ಅವರು ನಮ್ಮ ಇಲಾಖೆಯ ಜೊತೆ ಕೈಜೋಡಿಸಿದ್ದಕ್ಕೆ ಇಲಾಖೆಯ ವತಿಯಿಂದ ಅಭಿನಂದಿಸುವೆ. ಇವರಂತೆ ನಾಗರಿಕರು ಮುಂದೆ ಬಂದರೆ ನಮ್ಮ ಇಲಾಖೆಯಿಂದ ನೆಟ್ಟ ಸಸಿಗಳೆಲ್ಲವೂಹೆಮ್ಮರವಾಗಿ ಬೆಳೆಯುತ್ತವೆ.
ಸುಮಾ ಹಳೆಹೊಳೆ. ಅರಣ್ಯಾಧಿಕಾರಿ ಇಂಡಿ.