ರಕ್ತದಾನ ಶಿಬಿರಕ್ಕೆ ಸಾಮಾಜಿಕ ಕಾರ್ಯಕರ್ತ ಪ್ರೀತು ದಶವಂತ ಚಾಲನೆ
ಇಂಡಿ: ರಕ್ತದಾನ ಶ್ರೇಷ್ಠ ದಾನ, ರಕ್ತದಾನದಿಂದ ಒಂದು ಜೀವ ಉಳಿಸಲು ಸಾಧ್ಯ. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಸ್ವಯಂ ಪ್ರೇರಿತನಾಗಿ ಪ್ರತಿಫಲಾಪೇಕ್ಷೆ ಇಲ್ಲದೆ ಕೊಡುವುದರಿಂದ ಇನ್ನೊಂದು ಜೀವ ಉಳಿಸಲು ಸಾಧ್ಯ ಎಂದು ಸಾಮಾಜಿಕ ಕಾರ್ಯಕರ್ತ ಪ್ರೀತು ದಶವಂತ ಹೇಳಿದರು.
ಸೋಮವಾರ ತಾಲೂಕಿನ ಬಬಲಾದ ಗ್ರಾಮದ ವಿಶ್ವಜ್ಞಾನಿ ಗ್ರಂಥಾಲಯದಲ್ಲಿ ಶಾಸಕ ಯಶವಂತ್ರಾಯಗೌಡ ಪಾಟೀಲರ 55ನೇ ಜನ್ಮದಿನದ ನಿಮಿತ್ಯ ಹಮ್ಮಿಕೊಂಡ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ರಕ್ತದಾನದಿಂದ ಹಲವಾರು ಉಪಯೋಗಗಳು ಮನುಷ್ಯನಿಗೆ ದೊರೆಯಲಿವೆ. ವರ್ಷದಲ್ಲಿ ಎರಡು ಬಾರಿ ರಕ್ತದಾನ ಮಾಡಲು ಅವಕಾಶವಿದೆ. ಹೀಗಾಗಿ ಯುವಕರು-ಯುವತಿಯರು ಹೆಚ್ಚಾಗಿ ಮುಂದೆ ಬಂದು ರಕ್ತದಾನ ಮಾಡಬೇಕು ಎಂದರು.
ಬಿಎಲ್ಡಿಈ ಆಸ್ಪತ್ರೆಯ ರಕ್ತಭಂಡಾರ ವಿಭಾಗದ ರಾಜಶೇಖರ ಚಿನವಾರ ಮಾತನಾಡಿ, ರಕ್ತದಾನ ಮಾಡುವುದರಿಂದ ನಿಮ್ಮ ದೇಹದಲ್ಲಿನ ಕಬ್ಬಿಣದ ಪ್ರಮಾಣವನ್ನು ಕಡಿಮೆ ಮಾಡಬಹುದು. ಇದರಿಂದ. ಹೃದ್ರೋಗದ ಅಪಾಯವನ್ನು ತಡೆಯಬಹುದು. ರಕ್ತದಾನ ಮಾಡುವುದರಿಂದ ನಿಮ್ಮ ದೇಹದಲ್ಲಿ ಹೊಸ ರಕ್ತದ ರಚನೆಗೆ ಸಹಾಯವಾಗುತ್ತದೆ ಎಂದರು.
ಅಣ್ಣಾರಾಯ ಪೂಜಾರಿ, ಸುನಂದ ಬಿರಾದಾರ, ಬಾಪೂರಾಯಗೌಡ ಬಿರಾದಾರ, ಧರೆಪ್ಪ ಮಕಣಾಪೂರ, ಡಾ. ನಿಕಿಲ್ ದೊಡಮನಿ, ಗುರುಶಾಂತ ಪಾಸೋಡಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು.
ಶ್ರೀಶೈಲ ಕುಂಬಾರ, ಗೌರವ್ವ ಬಿರಾದಾರ, ಮಲ್ಲಿಕಾರ್ಜುನ ದಶವಂತ, ಹಣಮಂತ ಬಿರಾದಾರ, ರಾಜು ಮುಲ್ಲಾ, ಶಿವಪ್ಪ ಪೂಜಾರಿ, ಕುಮಾರ ದಶವಂತ, ಬಸವರಾಜ ರಾಜನ್ನವರ, ನಾಗನಾಥ ಪಾರೆ ಸೇರಿದಂತೆ ಮತ್ತಿತರರು ಇದ್ದರು.
ಬಬಲಾದ ಗ್ರಾಮದ ಶಾಸಕರ ಅಭಿಮಾನಿಗಳು ಹಾಗೂ ಯುವಕರು ಸ್ವಯಂ ಪ್ರೇರಿತವಾಗಿ ಸುಮಾರ 41 ಜನ ರಕ್ತದಾನ ಮಾಡಿದರು.