ಸಂಪ್ರದಾಯ ಉಳಿಸಿ ಬೆಳೆಸಲು ಸಾಮಾಜಿಕ ಹೋರಾಟಗಾರ ಮಹಾದೇವ ದಂಡಿನ ಕರೆ
ಸಂಪ್ರದಾಯ ಉಳಿಸಿ ಬೆಳೆಸಲು ಸಾಮಾಜಿಕ ಹೋರಾಟಗಾರ ಮಹಾದೇವ ದಂಡಿನ ಕರೆ
ಧಾರವಾಡ 04 : ಆಧುನಿಕತೆಯ ಭರಾಟೆಯಲ್ಲಿ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಎಲ್ಲೋ ನಮ್ಮ ಭವ್ಯ ಭಾರತದ ಅಮೋಘ ಸಂಸ್ಕೃತಿ ಕಾಲಗರ್ಭ ಸೇರಿಕೊಳ್ಳುತ್ತೀರುವ ಕಾಲಘಟ್ಟದಲ್ಲಿದೆ ಯುವ ಭಾರತ ಎಂದು ಸಾಮಾಜಿಕ ಹೋರಾಟಗಾರ ಗ್ರಾಮೀಣ ಮುಖಂಡ ಮಹಾದೇವ ದಂಡಿನ ಕಳವಳ ವ್ಯಕ್ತಪಡಿಸಿದರು.
ದೀಪಾವಳಿ ಹಬ್ಬದ ಪ್ರಯುಕ್ತ ಶಿಂಗನಹಳ್ಳಿ ಸಾಮಾಜಿಕ ಚಿಂತಕ ದಂಡಿನವರ ಮನೆಯಲ್ಲಿ ಏರಿ್ಡಸಿದ್ದ ಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಇಂದಿನ ಶಾಲಾ ಕಾಲೇಜು ಮಕ್ಕಳಿಗೆ ಹಾಗೂ ಯುವ ಜನಾಂಗಕ್ಕೆ ನಮ್ಮ ಭಾರತದ ಭವ್ಯ ಇತಿಹಾಸ ಮತ್ತು ಅಮೂಲ್ಯ ಸಂಪ್ರದಾಯ ಸಂಸ್ಕೃತಿ ತಿಳಿ ಹೇಳುವ ಕಾರ್ಯ ಆಗಬೇಕಾದ ಅನಿವಾರ್ಯತೆ ಇದೆ. ಸರಕಾರ ಕೂಡ ಈ ನಿಟ್ಟಿನಲ್ಲಿ ಜಾಗೃತರಾಗಿ ಪಠ್ಯ ಪುಸ್ತಕಗಳಲ್ಲಿ ಇತಿಹಾಸ ಸಂಸ್ಕೃತಿ ಅಳವಡಿಸಬೇಕಾಗಿದೆ ಎಂದರು.
ಈ ನಿಟ್ಟಿನಲ್ಲಿ ತಾವು ಹಾಗೂ ತಮ್ಮ ಸಂಘಟನೆಯು ಕೈಲಾದಷ್ಟು ಮಟ್ಟಿಗೆ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುತ್ತೀದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ. ಇಂತಹ ಸಾಮಾಜಿಕ ಕಳಕಳಿಯ ಕಾರ್ಯಗಳು ನಮ್ಮ ನಮ್ಮ ಮನೆಯಿಂದಲೇ ಪ್ರಾರಂಭಿಸಬೇಕೆಂದು ನೆರೆದ ಗ್ರಾಮಸ್ಥರಿಗೆ ಯುವಕರಿಗೆ ಮಹಾದೇವ ದಂಡಿನ ಕರೆ ನೀಡಿದರು.
ಈ ಸಂದರ್ಭದಲ್ಲಿ ರಾತ್ರಿಯಿಡಿ ಭಜನಾ ಕಾರ್ಯಕ್ರಮಗಳು, ದೇಶಭಕ್ತಿ ಗೀತೆಗಳು, ನೃತ್ಯ ಮತ್ತು ಗಾಯನಗಳು ಶಾಲಾ ಮಕ್ಕಳಿಂದ, ಯುವಕರಿಂದ ಜರುಗಿದವು. ಗುರು ಹಿರಿಯರಾದ ಗದಗಯ್ಯ ಹಿರೇಮಠ, ಮಲ್ಲೇಶಪ್ಪ ಅಂಗಡಿ, ಕರೆಪ್ಪ ದಂಡಿನ, ಭಜನಾ ಮೇಸ್ಟ್ರು ಕನ್ನಡದ ಕೋಗಿಲೆ ಶ್ರವಣಕುಮಾರ ಮತ್ತು ಪ್ರಸಿದ್ಧ ಡಗ್ಗಾ ವಾದಕರಾದ ಮಲ್ಲೇಶಿ ಬಸಪ್ಪ ಈಟಿ, ಪ್ರಕಾಶ ಮಲ್ಲಿಗವಾಡ, ಪರಮೇಶ ಕಲ್ಲೂರ, ಕಲ್ಮೇಶ ಹುಲಕೇರಿ, ಪುಂಡಲೀಕ ಮರಿಗೇರಿ, ಮಡಿವಾಳಪ್ಪ ಅಂಗಡಿ ಗರಗ, ವಿರೂಪಾಕ್ಷಗೌಡ ನಿಗದಿ, ಉಮೇಶ ಕಲ್ಲೂರ, ಮಂಜುನಾಥ ಕೊನ್ನುರ, ಮಲ್ಲಿಕಾರ್ಜುನ ಕುರುಬಗಟ್ಟಿ ಸೇರಿದಂತೆ ಜ್ಯೋತಿ ಯರಗಂಬಳಿಮಠ ಸಾಮಾಜಿಕ ಕಾರ್ಯಕರ್ತರಾದ ಧಾರವಾಡದ ಗೀರೀಶ ಹೊಸಮಠ, ನಿವೃತ್ತ ಸೈನಿಕರಾದ ಬಸವರಾಜ ಬಡಿಗೇರ ಹಾಗು ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಹಾಜರಿದ್ದರು.