ಬೈಲಹೊಂಗಲ

ಕೊರೊನಾ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಉಪಹಾರ ವ್ಯವಸ್ಥೆ

ಕೊರೊನಾ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಉಪಹಾರ ವ್ಯವಸ್ಥೆ
ಬೈಲಹೊಂಗಲದಲ್ಲಿ ಬಸವಜ್ಯೋತಿ ಕ್ಲಾಸಿಸ್, ಗೆಳೆಯರ ಬಳಗದಿಂದ ಕೊರೊನಾ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಶನಿವಾರ ಉಪಹಾರ ವ

ಬೈಲಹೊಂಗಲ 29:  ಪಟ್ಟಣದಲ್ಲಿ ಲಾಕ್‌ಡೌನ್ ನಿಮಿತ್ತ ಎರಡು ದಿನ ಎಲ್ಲ ಅಂಗಡಿ, ಮುಗ್ಗಟ್ಟು, ಹೊಟೇಲ್ ಬಂದ್ ಇರುವುದರಿಂದ ಬಸವಜ್ಯೋತಿ ಕ್ಲಾಸಿಸ್, ಗೆಳೆಯರ ಬಳಗದಿಂದ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಪೌರ ಕಾರ್ಮಿಕರು, ಆರೋಗ್ಯ, ಪುರಸಭೆ, ಲಾರಿ ಡ್ರೈವರ್ ಗಳಿಗೆ ಶನಿವಾರ ಉಪಹಾರ ವಿತರಿಸಲಾಯಿತು. 

ಶಿಕ್ಷಕ ಸಂತೋಷ ಹುಣಶೀಕಟ್ಟಿ ಮಾತನಾಡಿ, ಕೊರೊನಾ ಸಂದಿಗ್ನ ಪರಿಸ್ಥಿತಿಯಲ್ಲಿ ಎಲ್ಲರು ಹಸಿದ ಹೊಟ್ಟೆಯನ್ನು ತುಂಬಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಎರಡು ದಿನದ ಲಾಕ್ ಡೌನ್ ವೇಳೆಯಲ್ಲಿ ಕೊರೊನಾ ಕರ್ತವ್ಯ ನಿರ್ವಹಣೆಯಲ್ಲಿ ತೊಡಗಿರುವವರಿಗೆ ಉಪಹಾರದ ಕೊರತೆ ಆಗದಿರಲೆಂಬ ಉದ್ದೇಶದಿಂದ ಉಪಹಾರ ವಿತರಿಸಲಾಗುತ್ತಿದೆ. ಮಾನವೀಯತೆ ದೃಷ್ಠಿಯಿಂದ ಎಲ್ಲ ಯುವಕ, ಯುವತಿಯರು ಸಮಾಜ ಸೇವಾ ಮನೋಭಾವ ಬೆಳೆಸಿಕೊಂಡು ಸಮಾಜಮುಖಿ ಸೇವೆ ಸಲ್ಲಿಸುವ ಅವಶ್ಯಕತೆ ಇದೆ ಎಂದರು.  

ನಿವೃತ್ತ ಯೋಧರಾದ ಆನಂದ ತೋಟಗಿ, ಈರ​‍್ಪ ಕಾಡೇಶನವರ ಮಾತನಾಡಿ, ದಾನದಲ್ಲಿ ಶ್ರೇಷ್ಠ ದಾನ ಅನ್ನದಾನ. ಈ ಅನ್ನ ದಾನವನ್ನು ಹಸಿದವರಿಗೆ ನೀಡಿ ಹೊಟ್ಟೆ ತುಂಬಿಸುವ ಶ್ರೇಷ್ಠ ಕಾರ್ಯವನ್ನು ಎಲ್ಲರು ಮಾಡಬೇಕು.  

ಯೋಧ ಸಂಗಮೇಶ ರೇಶ್ಮಿ, ಮಂಜುನಾಥ ಜ್ಯೋತಿ, ರವಿ ವನ್ನೂರ, ರಾಮು ಚವ್ಹಾನ, ರವಿ ಹುಲಕುಂದ, ಗೆಳೆಯರ ಬಳಗದವರು ಇದ್ದರು.  

ಸುದ್ದಿ ಓದಿ